ವೈದ್ಯರ ಮುಷ್ಕರ: ಪರದಾಟ

7

ವೈದ್ಯರ ಮುಷ್ಕರ: ಪರದಾಟ

Published:
Updated:

ಹಾವೇರಿ: ಜಿಲ್ಲಾ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸಿದ್ದರ ಪರಿಣಾಮ ಜನರು ಚಿಕಿತ್ಸೆಗಾಗಿ ಪರದಾಡಿದ ಘಟನೆ ಶುಕ್ರವಾರ ನಡೆಯಿತು.ವೈದ್ಯಾಧಿಕಾರಿಗಳ ಸಂಘದ ಕರೆಕೊಟ್ಟ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲಾ ಆಸ್ಪತ್ರೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ಬೆಂಬಲ ಸೂಚಿಸಿ ಸೇವೆಯಲ್ಲಿ ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಆಸ್ಪತ್ರೆಯ ಎಲ್ಲ ವಿಭಾಗಗಳು ವೈದ್ಯರು, ಸಿಬ್ಬಂದಿಗಳಿಲ್ಲದೇ ಬಿಕೋ ಎನ್ನುತ್ತಿದ್ದವು.ಮುಷ್ಕರದಲ್ಲಿ ಸಿಬ್ಬಂದಿ ಪಾಲ್ಗೊಂಡಿರುವ ಬಗ್ಗೆ ಮಾಹಿತಿ ಇರುವ ಪತ್ರಗಳನ್ನು ಆಸ್ಪತ್ರೆಯ ಹೊರಗೆ ಹಾಗೂ ಒಳ ಭಾಗದಲ್ಲಿ ಅಂಟಿಸಲಾಗಿತ್ತು. ಆದರೂ ಅದನ್ನು ಗಮನಿಸದ ಜನರು ಆಸ್ಪತ್ರೆಗೆ ನಿರಂತವಾಗಿ ಬರುತ್ತಿರುವುದು ಮಾತ್ರ ನಿಂತಿರಲಿಲ್ಲ. 

ಗ್ರಾಮೀಣ ಪ್ರದೇಶದಿಂದ ಬಂದ ನೂರಾರು ರೋಗಿಗಳು, ಅವರ ಕುಟುಂಬದವರು ಆಸ್ಪತ್ರೆ ಆವರಣದವರೆಗೆ ಬಂದು ಸೇವೆ ಇಲ್ಲದಿದ್ದನ್ನು ನೋಡಿ ಖಾಸಗಿ ಆಸ್ಪತ್ರೆಯತ್ತ ಹೆಜ್ಜೆ ಇಟ್ಟರು.  ಒಳರೋಗಿಗಳ ವಿಭಾಗದಲ್ಲಿಯೂ ಸಹ ರೋಗಿಗಳಿಗೆ ಸಮರ್ಪಕ ಸೇವೆ ಇರದೇ ರೋಗಿಗಳು ಪರದಾಡುವಂತಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry