ವೈದ್ಯರ ವಿರುದ್ಧ ಕ್ರಮಕ್ಕೆ ದಸಂಸ ಒತ್ತಾಯ

7

ವೈದ್ಯರ ವಿರುದ್ಧ ಕ್ರಮಕ್ಕೆ ದಸಂಸ ಒತ್ತಾಯ

Published:
Updated:
ವೈದ್ಯರ ವಿರುದ್ಧ ಕ್ರಮಕ್ಕೆ ದಸಂಸ ಒತ್ತಾಯ

ಹಾಸನ: ಯುವತಿಯೊಬ್ಬಳಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ನಿರ್ಲಕ್ಷ್ಯ ತೋರಿ ಆಕೆ ದೇಹದ ಮೇಲೆ ಸ್ವಾಧೀನ ಕಳೆದು ಕೊಳ್ಳಲು ಕಾರಣವಾದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ಯುವ ದಲಿತ ಸಂಘರ್ಷ ಸಮಿತಿಯವರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಹೊಟ್ಟೆನೋವಿನ ಚಿಕಿತ್ಸೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ ಅರಕಲ ಗೂಡು ತಾಲ್ಲೂಕು ಚಿಕ್ಕಮಗ್ಗೆ ಗ್ರಾಮದ ಸುಮಲತಾ (18) ಎಂಬುವವರಿಗೆ ಇಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಚಿಕಿತ್ಸೆಯ ಬಳಿಕ ಈಕೆಗೆ ದೇಹದ ಮೇಲೆ ಸ್ವಾಧೀನ ಇಲ್ಲದಂತಾಗಿ ಕಳೆದ ಹಲವು ತಿಂಗಳಿಂದ ಸರ್ಕಾರಿ ಆಸ್ಪತ್ರಯಲ್ಲೇ ಇದ್ದಾಳೆ.ಸೋಮವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, `ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ಡಾ. ತಿಪ್ಪೇರುದ್ರಯ್ಯ ಹಾಗೂ ಅರಿವಳಿಕೆ ತಜ್ಞರಾಗಿದ್ದ ಡಾ. ಹೇಮಲತಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಯುವತಿಯ ಕುಟುಂಬಕ್ಕೆ ಪರಿಹಾರ ನೀಡಬೇಕು~ ಎಂದು ಆಗ್ರಹಿಸಿದರು.`ಈ ಇಬ್ಬರು ವೈದ್ಯರ ವಿರುದ್ಧ ಹಲವು ದಿನಗಳ ಹಿಂದೆಯೇ ದೂರು ದಾಖಲಿಸಿ ್ದದರೂ ಅವರನ್ನು ಈವರೆಗೆ ಬಂಧಿಸಿಲ್ಲ. ಕೂಡಲೇ ಬಂಧಿಸಬೇಕು~ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಸಮಿತಿಯ ಅಧ್ಯಕ್ಷ ನಾಗರಾಜ ಹೆತ್ತೂರು, ಕಾರ್ಯದರ್ಶಿ ಕ್ರಾಂತಿ ತ್ಯಾಗಿ, ಸಿ.ಟಿ. ಶಿವಕುಮಾರ್, ಜಗದೀಶ ಚೌಡಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry