ವೈದ್ಯೆಯಾಗಲು ನೆರವಿನ ನಿರೀಕ್ಷೆಯಲ್ಲಿ ಸೌಮ್ಯ

ಶುಕ್ರವಾರ, ಜೂಲೈ 19, 2019
24 °C

ವೈದ್ಯೆಯಾಗಲು ನೆರವಿನ ನಿರೀಕ್ಷೆಯಲ್ಲಿ ಸೌಮ್ಯ

Published:
Updated:

ಕೋಲಾರ: ವೈದ್ಯಕೀಯ ಶಿಕ್ಷಣ ಪಡೆಯಬೇಕೆಂಬ ಆಸೆ ಇದೆ. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಈಗ ಏನು ಮಾಡಬೇಕೆಂದೇ ತೋಚುತ್ತಿಲ್ಲ... ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯ ಪುರಹಳ್ಳಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಎನ್.ಸೌಮ್ಯ ಅವರ ಅಸಹಾಯಕ ನುಡಿಗಳಿವು.ಸಂಬಂಧಿಕರೊಬ್ಬರ ಮನೆಯಲ್ಲಿ ಉಳಿದು ವಿಜಯಪುರದ ಖಾಸಗಿ ಕಾಲೇಜ್‌ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದಿ ಆಕೆ 514 (ಶೇ 86) ಅಂಕ ಗಳಿಸಿದ್ದಾರೆ. ಸಿಇಟಿ ವೈದ್ಯಕೀಯ ವಿಭಾಗದಲ್ಲಿ 7696ನೇ ರ‌್ಯಾಂಕ್ ಗಳಿಸಿದ್ದಾರೆ. 12 ಸಾವಿರ ರ‌್ಯಾಂಕ್‌ವರೆಗೆ ಸರ್ಕಾರಿ ಸೀಟು ಲಭ್ಯವಿದೆ. ಆದರೆ, ಅದಕ್ಕೆ ಕನಿಷ್ಠ 80 ಸಾವಿರ ಬೇಕು ಎಂದು ತಿಳಿದುಬಂದಿದೆ. ಆದರೆ ಅಷ್ಟೊಂದು ಹಣವನ್ನು ಹೊಂದಿಸುವುದು ಹೇಗೆ ಎಂಬುದು ಆಕೆಯ ಕುಟುಂಬದ ಚಿಂತೆ.`ನಾನು ಕೂಲಿ ಕೆಲಸ ಮಾಡಿ ಕುಟುಂಬ ನೋಡಿಕೊಳ್ಳುತ್ತಿದ್ದೇನೆ. ಇಂಥ ಸಂದರ್ಭದಲ್ಲಿ ಮಗಳು ಉತ್ತಮವಾಗಿ ವ್ಯಾಸಂಗ ಮಾಡಿದ್ದಾಳೆ. ಉನ್ನತ ಶಿಕ್ಷಣಕ್ಕೆ ಕಳಿಸೋಣ ಎಂದರೆ ಆಗುತ್ತಿಲ್ಲ~ ಎಂದು ಅವರು ಶುಕ್ರವಾರ `ಪ್ರಜಾವಾಣಿ~ಗೆ ತಿಳಿಸಿದರು.ದೊಡ್ಡ ಮಗಳು ಉಮಾ ಚಿಂತಾಮಣಿಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿ. ಮಗ ನಂದೀಶ್ ಪ್ರಥಮ ಪಿಯುಸಿ ವಿದ್ಯಾರ್ಥಿ. ಮೂವರ ಶಿಕ್ಷಣಕ್ಕೆ ಹಣ ಹೊಂದಿಸುವುದರ್ಲ್ಲಲೇ ದುಡಿದ ಹಣ ಖರ್ಚಾಗುತ್ತಿದೆ ಎನ್ನುತ್ತಾರೆ ಅವರು.ಗ್ರಾಮ ಪಂಚಾಯಿತಿ ವತಿಯಿಂದ ಸೌಮ್ಯಳ ಶಿಕ್ಷಣಕ್ಕೆಂದು ರೂ 5 ಸಾವಿರ  ಸಹಾಯಧನವನ್ನು ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿ ಅನುದಾನದಲ್ಲಿ ನೀಡಲಾಗಿದೆ. ಆಸಕ್ತ ದಾನಿಗಳು ಆಕೆಗೆ ನೆರವು ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಸ್.ಶ್ರೀನಾಥಗೌಡ.

 ದಾನಿಗಳು ನಂಜುಂಡಪ್ಪ ಅವರನ್ನು ಮೊಬೈಲ್ 9620760237 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry