ವೈದ್ಯ- ರೋಗಿ ನಡುವೆ ಉತ್ತಮ ಬಾಂಧವ್ಯ ಅಗತ್ಯ

7

ವೈದ್ಯ- ರೋಗಿ ನಡುವೆ ಉತ್ತಮ ಬಾಂಧವ್ಯ ಅಗತ್ಯ

Published:
Updated:

ಕೊಳ್ಳೇಗಾಲ: ವೈದ್ಯರು ಮತ್ತು ರೋಗಿಗಳ ನಡುವೆ ಉತ್ತಮ ಬಾಂಧವ್ಯ ಇದ್ದಾಗ, ರೋಗಿಗಳು ಶೀಘ್ರ ಗುಣಮಖರಾಗಲು ಸಾಧ್ಯ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಭಾರತೀಯ ವೈದ್ಯಕೀಯ ಸಂಘ ಕೊಳ್ಳೇಗಾಲ ಶಾಖೆ ವತಿಯಿಂದ ಭಾನುವಾರ ಏರ್ಪಡಿಸಿದ್ದ 78ನೇ ರಾಜ್ಯಮಟ್ಟದ ಭಾರತೀಯ ವೈದ್ಯಕೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸದೃಢಕಾಯರಾಗಿದ್ದ ಗ್ರಾಮೀಣ ರೈತರೂ ಸಹ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ದೇಶದ ಬೆನ್ನೆಲುಬಾಗಿರುವ ರೈತರ ಆರೋಗ್ಯ ಸೇವೆಗೆ ವೈದ್ಯರು ಹೆಚ್ಚು ಒಲವು ತೋರಬೇಕು ಎಂದರು.ಪಟ್ಟಣದ ಹಿರಿಯ ವೈದ್ಯರಾದ ಡಾ. ಗೋಪಾಲಶೆಟ್ಟಿ, ಡಾ.ವೀರಭದ್ರಶೆಟ್ಟಿ, ರಾಮಚಂದ್ರ, ಡಾ.ಮಣಿಗಣಿಕರ್, ಇತರರನ್ನು ಸನ್ಮಾನಿಸಲಾಯಿತು. ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಮಟ್ಟದ ನೂತನ ಅಧ್ಯಕ್ಷರಾದ ಡಾ.ವೈ.ಎನ್.ಸುಧಾಕರ್ ಮತ್ತು ತಂಡದ ಪದಗ್ರಹಣ ನೆರವೇರಿತು. ನಿಕಟಪೂರ್ವ ಅಧ್ಯಕ್ಷ ಡಾ.ಕೃಷ್ಣೇಗೌಡ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.ರಾಜ್ಯ ಕಾರ್ಯದರ್ಶಿ ಮಂಜುನಾಥ್, ಡಾ.ಎಸ್.ಶಿವರುದ್ರಸ್ವಾಮಿ, ಡಾ.ರಾಜ್‌ಗೋಪಾಲಶೆಟ್ಟಿ, ರಾಜ್ಯ ಉಪಾಧ್ಯಕ್ಷ ಡಾ.ಹೊನ್ನೇಗೌಡ, ಡಾ.ಕೆ. ಮೋಹನ್‌ದಾಸ್ ಬಂಡಾರಿ, ಕೊಳ್ಳೇಗಾಲ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶ್ರೀಧರ್, ಡಾ.ರಮೇಶ್‌ಪುರಾಣಿ, ಡಾ.ಪ್ರಕಾಶ್‌ರೆಡ್ಡಿ, ಡಾ.ಅನ್ನದಾನಿ, ಡಾ.ಸಿದ್ದೇಗೌಡ, ಸಮ್ಮೇಳನ ಅಧ್ಯಕ್ಷ ಡಾ.ರಾಜ್‌ಗೋಪಾಲ್, ಡಾ.ಪಿ.ಜಿ.ಶ್ರೀಧರ್, ಡಾ.ಸನತ್‌ಕುಮಾರ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry