ಭಾನುವಾರ, ಏಪ್ರಿಲ್ 18, 2021
29 °C

ವೈದ್ಯ ವೃತ್ತಿ ಪಾವಿತ್ರ್ಯ ಕಾಪಾಡಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ವೈದ್ಯಕೀಯ ವೃತ್ತಿಯ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಡಾ. ಬಿ.ಸಿ. ರಾಯ್ 1948ರಿಂದ 1962ರ ವರೆಗೆ ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿಯಾಗಿ ಕೂಡ ಸೇವೆ ಸಲ್ಲಿಸಿದ್ದರು ಎಂದು ವಿಜಾಪುರ ಆಲ್ ಅಮೀನ್ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಬಿ.ಎಸ್. ಪಾಟೀಲ ಹೇಳಿದರು.ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಜಮಖಂಡಿ ಶಾಖೆಯ ಅಶ್ರಯದಲ್ಲಿ ಏರ್ಪಡಿಸಿದ್ದ `ವೈದ್ಯರ ದಿನಾಚರಣೆ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಡಾ.ಬಿ.ಸಿ. ರಾಯ್ ಸಲ್ಲಿಸಿದ್ದ ಅನುಪಮ ಸೇವೆಯನ್ನು ಭಾರತ ಸರಕಾರ ಗುರುತಿಸಿ ಅವರಿಗೆ 1962ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ `ಭಾರತ ರತ್ನ~ ನೀಡಿ ಗೌರವಿಸಿತ್ತು. ಹಾಗಾಗಿ ಅವರ ಜನ್ಮದಿನವನ್ನು ಇಡೀ ದೇಶದಾದ್ಯಂತ ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.ಐಎಂಎ ಜಮಖಂಡಿ ಶಾಖೆ ಅಧ್ಯಕ್ಷ ಡಾ.ಎಚ್.ಜಿ.ದಡ್ಡಿ ಮಾತನಾಡಿ, ಸರಕಾರಗಳು ಜಾರಿಗೊಳಿಸುತ್ತಿರುವ ಹೊಸ ಮಸೂದೆಗಳು ವೈದ್ಯ ವೃತ್ತಿಗೆ ಪ್ರತಿಕೂಲವಾಗಿದ್ದು, ವೈದ್ಯರು ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಆದಾಗ್ಯೂ ವೈದ್ಯರ-ರೋಗಿಗಳ ಸಂಬಂಧ ಸುಧಾರಿಸುವಂತೆ ವೈದ್ಯರು ಕರ್ತವ್ಯ ನಿರ್ವಹಿಸಿ ವೃತ್ತಿಯ ಪಾವಿತ್ರ್ಯತೆ ಕಾಪಾಡಬೇಕಾದ ತೀವ್ರ ಅಗತ್ಯವಿದೆ ಎಂದರು.ಡಾ. ಶ್ರೀನಿವಾಸ ಕಮ್ಮಾರ ವಿಶೇಷ ಉಪನ್ಯಾಸ ನೀಡಿದರು. ವೈದ್ಯಾಧಿಕಾರಿ ಡಾ.ಎಂ.ಎ.ದೇಸಾಯಿ, ಡಾ. ವೀರಣ್ಣ ಜತ್ತಿ, ಡಾ. ರಮೇಶ ಮಂಟೂರ ಹಾಜರಿದ್ದರು. ಐಎಂಎ ಸ್ಥಳೀಯ ಶಾಖೆಯ ಪ್ರಧಾನ ಕಾರ್ಯದರ್ಶಿ ಡಾ.ವಿ.ಎಸ್.ಬಿರಾದಾರ ಸ್ವಾಗತಿಸಿ, ನಿರೂಪಿಸಿದರು. ಡಾ. ಎಂ.ಆರ್. ಹುಂಡೇಕಾರ ಪರಿಚಯಿಸಿದರು.ಜನಸ್ಪಂದನ 7ರಂದು


ಜಮಖಂಡಿ: ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಮಂಗಲಾದೇವಿ ದೇವಸ್ಥಾನದಲ್ಲಿ ಇದೇ 7ರಂದು ಬೆಳಿಗ್ಗೆ 11 ಗಂಟೆಗೆ ಶಿರಗುಪ್ಪಿ ಗ್ರಾಮಸ್ಥರಿಗಾಗಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಹಶೀಲ್ದಾರ ಡಾ.ಸಿದ್ದು ಹುಲ್ಲೋಳಿ ತಿಳಿಸಿದ್ದಾರೆ.ಶಾಸಕ ಶ್ರೀಕಾಂತ ಕುಲಕರ್ಣಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಾರ್ಯಕ್ರಮ ಸಮಯದಲ್ಲಿ ಅಥವಾ ಕಾರ್ಯಕ್ರಮಕ್ಕೆ ಮುಂಚೆ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ಸಲ್ಲಿಸುವ ಎಲ್ಲ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.