ಸೋಮವಾರ, ಆಗಸ್ಟ್ 19, 2019
23 °C

ವೈದ್ಯ ಸಂಘಕ್ಕೆ ನಿವೇಶನ ಭರವಸೆ

Published:
Updated:
ವೈದ್ಯ ಸಂಘಕ್ಕೆ ನಿವೇಶನ ಭರವಸೆ

ನೆಲಮಂಗಲ: `ಸ್ಥಳೀಯ ಭಾರತೀಯ ವೈದ್ಯ ಸಂಘಕ್ಕೆ ನಿವೇಶನ ಮಂಜೂರು ಮಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು' ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಭರವಸೆ ನೀಡಿದರು.ಭಾರತೀಯ ವೈದ್ಯ ಸಂಘವು ಲಯನ್ ಸಂಸ್ಥೆಯ ಸಹಯೋಗದಲ್ಲಿ ಈಚೆಗೆ ಏರ್ಪಡಿಸಿದ್ದ ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ವೈದ್ಯ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಎ.ನಾಗರಾಜು, `ವೈದ್ಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಮುಕ್ತ ಮನಸ್ಸಿನ ಸೇವೆ ಸಲ್ಲಿಸುವ ವಾತಾವರಣ ನಿರ್ಮಾಣವಾಗಬೇಕು' ಎಂದರು.  ಬೆಂಗಳೂರು ಶಾಖೆಯ ಅಧ್ಯಕ್ಷ ಡಾ.ವಿ.ಸಿ ಷಣ್ಮುಗಾನಂದನ್, ಲಯನ್ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ರವಿ, ಸ್ಥಳೀಯ ಸಂಘದ ಅಧ್ಯಕ್ಷ ಡಾ.ಎಂ.ಜಯಪ್ರಸಾದ್ ವೈದ್ಯರ ಸವಾಲುಗಳ ಬಗ್ಗೆ ಚರ್ಚಿಸಿದರು.ಮಕ್ಕಳ ತಜ್ಞಡಾ.ಎನ್.ಪಿ.ವಿನಯ್‌ಕುಮಾರ್, ಡಾ.ಬಿ.ಸಿ.ಸುನೀತ ದಂಪತಿಗೆ ಮತ್ತು ಕಿದ್ವಾಯಿ ಆಸ್ಪತ್ರೆಯ ಡಾ.ಎಲ್.ಅಪ್ಪಾಜಿ ಅವರಿಗೆ ಬಿ.ಸಿ.ರಾಯ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Post Comments (+)