ವೈನ್‌ಮೇಳದಲ್ಲಿ ಬೆಡಗಿಯರ ಕ್ಯಾಟ್‌ವಾಕ್

7

ವೈನ್‌ಮೇಳದಲ್ಲಿ ಬೆಡಗಿಯರ ಕ್ಯಾಟ್‌ವಾಕ್

Published:
Updated:

ವಿಜಾಪುರ: ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಿಕೊ ವೈನರಿಯವರು ‘ವೈನ್ ಮೇಳ’ ಹಮ್ಮಿಕೊಂಡಿದ್ದು, ಭಾನುವಾರ ನಡೆದ ಫ್ಯಾಶನ್ ಶೋನಲ್ಲಿ ಬೆಡಗಿಯರು ಕ್ಯಾಟ್‌ವಾಕ್ ನಡೆಸಿ ಗಮನ ಸೆಳೆದರು.ವೈನ್ ಮೇಳಕ್ಕೆ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಮತ್ತು ಎಸ್ಪಿ ಡಾ.ಡಿ.ಸಿ. ರಾಜಪ್ಪ ಚಾಲನೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಹಿತ ಕಾಪಾಡುವಲ್ಲಿ ರಿಕೊ ಕಂಪೆನಿ ದಿಟ್ಟ ಹೆಜ್ಜೆಯಿಟ್ಟಿದೆ. ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಯುವ ದ್ರಾಕ್ಷಿ ಬೆಳೆಗಾರರಿಗೆ ರಿಕೊ ಕಂಪೆನಿ ಆಶಾಕಿರಣ ಮೂಡಿಸಿದೆ ಎಂದರು.ರಿಕೊ ಕಂಪೆನಿಯ ಕಾರ್ಯಕಾರಿ ನಿರ್ದೇಶಕ ಶಶಿಕಾಂತ ಮಠ ಮಾತನಾಡಿ, ದ್ರಾಕ್ಷಾರಸ ಸೇವನೆಯಿಂದ ಮನುಷ್ಯನಿಗೆ ಸಾಕಷ್ಟು ಲಾಭಗಳಿವೆ. ಯಾವುದೇ ಹಾನಿ ಇಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಸವರಾಜ ಗಿರೆಣ್ಣವರ, ಈ ವೈನ್ ಮೇಳವು ಫೆ.20ರ ವರೆಗೆ ನಡೆಯಲಿದ್ದು, ಸಾರ್ವಜನಿಕರು ಉಚಿತವಾಗಿ ವೈನ್‌ನ ಸವಿ ಸವಿಯಬಹುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry