ವೈಭವದ ಉಳುಮೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

7

ವೈಭವದ ಉಳುಮೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

Published:
Updated:

ಅರಕಲಗೂಡು : ತಾಲ್ಲೂಕಿನ ಮಲ್ಲಿ ಪಟ್ಟಣದ ಉಳುಮೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವೈಭವದಿಂದ ನೆರವೇರಿತು.ಅಕ್ಕಪಕ್ಕದ ಗ್ರಾಮಗಳಿಂದ ಬಂದಿದ್ದ ಅಪಾರ ಸಂಖ್ಯೆಯ ಭಕ್ತರು ರಥೋತ್ಸ ವದಲ್ಲಿ ಪಾಲ್ಗೊಂಡು ತೇರು ಎಳೆದರು. ರಥದ ಮೇಲೆ ಬಾಳೆಹಣ್ಣು ದವನ ಎಸೆದು ಸಂಭ್ರಮಿಸಿದರು. ರಥೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಗಿರಿಜಾ ಕಲ್ಯಾಣ, ಉಯ್ಯಾಲೋತ್ಸವ ನಡೆದವು.ಮಂಗಳವಾರ ಬೆಳಿಗ್ಗೆ ದೇವಾಲಯ ದಲ್ಲಿನ ಶಿವಲಿಂಗಕ್ಕೆ ಅಭಿಷೇಕ, ಅರ್ಚನೆ ಹಾಗೂ ಮಹಾ ಮಂಗಳಾರತಿ ನಡೆಯಿತು. ಉತ್ಸವದ ನಂತರ ದೇವರ ಮೂರ್ತಿಯನ್ನು ಅಲಂಕರಿಸಿದ ರಥದಲ್ಲಿ ಕೂರಿಸಿ ರಥೋತ್ಸವ ನಡೆಸಲಾಯಿತು. ಬಳಿಕ ವಸಂತ ಸೇವೆ ರಾತ್ರಿ ಶಾಂತೋತ್ಸವಗಳು ನಡೆದವು. ಜಾತ್ರೆಯಲ್ಲಿ ಸಿಹಿ ತಿನಿಸು, ಆಟಿಕೆಗಳು ಅಲಂಕಾರಿಕ ವಸ್ತುಗಳ ಅಂಗಡಿಗಳು ಬೀಡು ಬಿಟ್ಟು ವಹಿವಾಟು ನಡೆಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry