ಶನಿವಾರ, ನವೆಂಬರ್ 23, 2019
18 °C

ವೈಭವದ ಕೋಲಶಾಂತೇಶ್ವರ ಸ್ವಾಮಿ ರಥೋತ್ಸವ

Published:
Updated:

ಹರಪನಹಳ್ಳಿ: ಪಂಚಗಣಾಧೀಶರಲ್ಲಿ ಒಬ್ಬರಾದ ಕಾಯಕಯೋಗಿ ಕೋಲ ಶಾಂತೇಶ್ವರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಮಧ್ಯೆ ವೈಭವೋಪೇತವಾಗಿ ಗುರುವಾರ ಅರಸಿಕೆರೆಯಲ್ಲಿ ನೆರವೇರಿತು.,ಮಠದ ಸ್ವಾಮೀಜಿ ಶಾಂತಲಿಂಗ ದೇಸಿಕೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು.ನೀಲಗುಂದ ಗ್ರಾಮದ ಪುರಾತನ ವೀರಭದ್ರೇಶ್ವರ ಹಾಗೂ ವೆಂಕಟೇಶ್ವರ (ತಿಮ್ಮಪ್ಪಸ್ವಾಮಿ) ಜೋಡಿ ರಥೋತ್ಸವ ಹಾಗೂ ಗುಂಡಗತ್ತಿ ಹಾಗೂ ಕಾನಹಳ್ಳಿ ಗ್ರಾಮದಲ್ಲಿ ಆಂಜನೇಯಸ್ವಾಮಿ ರಥೋತ್ಸವಗಳು ವಿಜೃಂಭಣೆಯಿಂದ ನೆರವೇರಿದವು.ಹರಪನಹಳ್ಳಿ, ಅರಸಿಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)