ವೈಭವದ ಪೀರಾಪುರ ಗ್ರಾಮದೇವತೆ ಜಾತ್ರೆ

7

ವೈಭವದ ಪೀರಾಪುರ ಗ್ರಾಮದೇವತೆ ಜಾತ್ರೆ

Published:
Updated:

ತಾಳಿಕೋಟೆ: ಸಮೀಪದ ಪೀರಾಪುರ ಗ್ರಾಮದಲ್ಲಿ ಶುಕ್ರವಾರ ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಣೆ ಮಾಡುವ ಗ್ರಾಮದೇವತೆಯ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು.ತನ್ನಿಮಿತ್ತ ಬೆಳಿಗ್ಗೆ ಊರಭಾವಿಯಲ್ಲಿ ಗಂಗಸ್ಥಲ ನಡೆದು ಗ್ರಾಮದೇವತೆಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಯಿತು. ಮೆರವಣಿಗೆಯಲ್ಲಿ ಭಜನಾಪದಗಳು, ಡೊಳ್ಳು ಕುಣಿತ, ಬ್ಯಾಂಜೋಮೇಳ ಹಾಗೂ ಸುಮಂಗಲೆಯರಿಂದ ಆರತಿ ಕಳಸ, ಗಮನ ಸೆಳೆದವು.

 

ಇದಲ್ಲದೆ ನೂರಕ್ಕೂ ಅಧಿಕ ಹಿಂದು-ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡು, ದೀಡ ನಮಸ್ಕಾರ ಹಾಕಿ ತಮ್ಮ ಭಕ್ತಿ ಸಮರ್ಪಣೆ ಮಾಡಿದರು. ಮಹಿಳೆಯರು ದೇವಿಗೆ ಉಡಿ ತುಂಬಿದರು. ಪೂಜಾಕೈಂಕರ್ಯಗಳನ್ನು ಕಾಳಿರಾಯ ನಾಯ್ಕ್‌ಡಿ ಹಾಗೂ ಇತರರು ನಡೆಸಿಕೊಟ್ಟರು.ಜಾತ್ರೆಯಲ್ಲಿ ಮಡಿವಾಳಪ್ಪಗೌಡ ಬಿರಾದಾರ, ಸುರೇಶಬಾಬುಗೌಡ ಬಿರಾದಾರ, ಶಿವನಗೌಡ ಪಾಟೀಲ, ಬಸನಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಡಾ.ಬಲವಂತ್ರಾಯ ನಡಹಳ್ಳಿ, ಸಿದ್ಧನಗೌಡ ಪಾಟೀಲ, ಬಸವಂತ್ರಾಯ ಹಾಲ, ಸಂಗಣ್ಣ ಹಡಪದ, ನಾಗನಿಂಗಪ್ಪ ಬಡಿಗೇರ, ಅಲ್ಲಾಭಕ್ಷ ಮುಲ್ಲಾ, ಬಡೆಸಾಬ ಮೂಕಿಹಾಳ, ಮಮ್ಮಾಸಾ ಮೂಕಿಹಾಳ, ಯಲ್ಲಪ್ಪ ಮಾದರ, ಸಂಗನಗೌಡ ಇಂಗಳಗೇರಿ, ಸಿದ್ದಣ್ಣ ನಾಯ್ಕ್‌ಡಿ, ಬಸವರಾಜಪ್ಪಗೌಡ ಬಿರಾದಾರ, ಕಾಶಿರಾಯ ಬಿರಾದಾರ, ಬಸಪ್ಪ ಹರಿಜನ, ಸಂಗಪ್ಪ ಸಾಗರ,ಡಾ.ಚನ್ನಪ್ಪಗೌಡ ಬಿರಾದಾರ, ಆರ್.ಬಿ.ದಮ್ಮೂರಮಠ, ಎಸ್.ಎಂ.ಢಕಣಿ, ಬಿ.ಬಿ.ಕಂಕರಪೀರ, ಎಸ್.ಎಚ್. ದೊಡಮನಿ, ಎಸ್.ಎಂ.ಖನ್ನೂರ ಸೇರಿದಂತೆ ಅನೇಕರಿದ್ದರು. ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 9ಕ್ಕೆ ಶ್ರಿದೇವಿ ಮಹಾತ್ಮೆ ಬಯಲಾಟವನ್ನು ಸ್ಥಳೀಯ ಕಲಾವಿದರು ನಡೆಸಿಕೊಟ್ಟರು.ಸಚಿವ ಆಚಾರ್ಯ ನಿಧನಕ್ಕೆ ಸಂತಾಪ

ತಾಳಿಕೋಟೆ: ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ನಿಧನಕ್ಕೆ ಸ್ಥಳೀಯ ಬಿಜೆಪಿ ಘಟಕದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪಟ್ಟಣದ ವಿಠ್ಠಲ ಮಂದಿರದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ) ಮಾತನಾಡಿ, ಸರಳ ಸಜ್ಜನ ವ್ಯಕ್ತಿಯೊಬ್ಬನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.ಗಂಗಾಧರ ಕಸ್ತೂರಿ ವಕೀಲರು, ಕಾಶೀನಾಥ ಮುರಾಳ, ದತ್ತಾತ್ರೇಯ ಹೆಬಸೂರ, ತಮ್ಮಣ್ಣ ದೇಶಪಾಂಡೆ, ಶಶಿಧರ ಡಿಸಲೆ, ಸಂಭಾಜಿ ವಾಡಕರ, ಮಹಾವೀರ ಸುರಪುರ, ಪ್ರಹ್ಲಾದ ಹಜೇರಿ, ಬಂಡು ದಾಯಪುಲೆ, ಮಂಜುಶೆಟ್ಟಿ, ಮಾನಪ್ಪ ಪತ್ತಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry