ವೈಭವದ ವಾಸವಿ ಜಯಂತಿ, ತುಲಾಭಾರ

7

ವೈಭವದ ವಾಸವಿ ಜಯಂತಿ, ತುಲಾಭಾರ

Published:
Updated:

ಕಂಪ್ಲಿ: ಪಟ್ಟಣದ ಆರ್ಯವೈಶ್ಯ ಸಂಘದವರು ವಾಸವಿ ಜಯಂತಿ ಮಹೋತ್ಸವವನ್ನು ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.ಬೆಳಿಗ್ಗೆ ಪೇಟೆ ಬಸವೇಶ್ವರ ದೇವಸ್ಥಾನದಿಂದ ನಗರೇಶ್ವರ ದೇವಸ್ಥಾನದವರೆಗೆ ಕನ್ನಿಕಾ ಪರಮೇಶ್ವರಿ ಅಮ್ಮನವರ ಗಂಗೆಯನ್ನು ತರುವ ಕಾರ್ಯಕ್ರಮ, ನಗರೇಶ್ವರ ಸ್ವಾಮಿಗೆ ಪಂಚಾಮೃತಾಭಿಷೇಕ, ಮಹಾಮಂಗಳಾ ರತಿ, ಕನ್ನಿಕಾ ಪರಮೇಶ್ವರಿ ಅಮ್ಮನವರಿಗೆ ಪಂಚಾಮೃತಾಭಿಷೇಕ, ಲಕ್ಷ ಕುಂಕುಮಾ ರ್ಚನೆ, ಮಹಾಮಂಗಳಾರತಿ  ಜರುಗಿತು. ಸಂಜೆ ಪಟ್ಟಣದಲ್ಲಿ ಕನ್ನಿಕಾಪರಮೇಶ್ವರಿ ಅಮ್ಮನವರ ಮೆರವಣಿಗೆಯೂ ನಡೆಯಿತು.ಕರ್ನಾಟಕ ಆರ್ಯವೈಶ್ಯ ಮಹಾ ಸಭಾ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ. ಸತ್ಯನಾರಾಯಣ, ಹನುಮನಾಡು ವಿಭಾಗ ಉಪಾಧ್ಯಕ್ಷ ಜಿ. ಶ್ರೀನಿವಾಸ, ಕಂಪ್ಲಿ ಘಟಕ ಅಧ್ಯಕ್ಷ ಡಿ.ವಿ. ಸುಬ್ಬಾರಾವು, ಜಂಟಿ ಕಾರ್ಯದರ್ಶಿ ಟಿ. ನರಸಿಂಹಶ್ರೇಷ್ಠಿ, ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ  ಎಚ್.ಎನ್. ಪ್ರಮೀಳಮ್ಮ ಮತ್ತು ಸದಸ್ಯೆಯರು, ವಾಸವಿ ಯುವಜನ ಸಂಘ ಅಧ್ಯಕ್ಷ ಟಿ.ಸಿ. ನರಸಿಂಹ ಮುಖಂಡರಾದ ಡಿ. ಶ್ರೀಧರ ಶ್ರೇಷ್ಠಿ,  ಟಿ. ಕೊಟ್ರೇಶ್, ವೈಶ್ಯ ಸಮುದಾಯ ಮಹನೀಯರು, ಯುವಕ, ಯುವತಿಯರು, ಸಮಾಜ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.ಭರತನಾಟ್ಯ ಗಿನ್ನಿಸ್ ದಾಖಲೆ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತೆ ಬಿ. ಲಕ್ಷ್ಮಿಯನ್ನು ಸನ್ಮಾನಿಸಲಾಯಿತು. ರಾಯಚೂರು ವೇದಾವತಿ ಬಿಎಸ್‌ಆರ್ ಶೆಟ್ಟಿ ಇವರು ಭಕ್ತಿಸಾರ ಕಾರ್ಯಕ್ರಮ ನಡೆಸಿಕೊಟ್ಟರು.ಅದ್ದೂರಿ ಮೆರವಣಿಗೆ

ಸಿರುಗುಪ್ಪ: ಪಟ್ಟಣದಲ್ಲಿ ಮಂಗಳವಾರ ಆರ್ಯವೈಶ್ಯ ಸಮಾಜದವರು 45ನೇ ವರ್ಷದ ವಾಸವಿ ಜಯಂತಿಯನ್ನು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಿದರು.ಜಯಂತಿ ಅಂಗವಾಗಿ ಸೂರ್ಯೋದ ಯಕ್ಕೆ ಕನ್ನಿಕಾಪರಮೇಶ್ವರಿ ಉತ್ಸವ ಮೂರ್ತಿಯನ್ನು ನಗರೇಶ್ವರ ದೇವಸ್ಥಾನ ದಲ್ಲಿ ಅಭಿಷೇಕ ಮಾಡಿಕೊಂಡು ಸುಮಂ ಗಲೆಯರ ಪೂರ್ಣಕುಂಭ ಸಮೇತ ಮೆರವಣಿಗೆಯಲ್ಲಿ ಕನ್ನಕಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದರು.ನಂತರ ಈಶ್ವರಸ್ವಾಮಿಗೆ ರುದ್ರಾಭಿಷೇಕ, ವಾಸವಿ ಅಮ್ಮನವರಿಗೆ ಪಂಚಾಮೃತಾಭಿಷೇಕ, ವಾಸವಿ ನಾಮಕರಣೋತ್ಸವ, ನವಗ್ರಹಪೂಜಾ, ಲಲಿತ ಸಹಸ್ರ ಕುಂಕುಮಾರ್ಚನೆ, ಮಹಾಮಂಗಳಾರತಿ ನಡೆಯಿತು.

ಅಮ್ಮನವರ ಮೂರ್ತಿಗೆ ವಿಧ ಬಗೆಯ ಅಲಂಕಾರ ಮಾಡಿ ಶೃಂಗರಿಸಲಾಗಿತ್ತು. ವಾಸವಿ ಅಮ್ಮನವರಿಗೆ ತುಲಾಭಾರ ಸೇವೆಯನ್ನು ಎಚ್.ಜೆ. ಹನುಮಂತಯ್ಯ ಶೆಟ್ಟಿ ದಂಪತಿ ನಡೆಸಿಕೊಟ್ಟರು.ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಚ್.ಜೆ.ಹನುಮಂತಯ್ಯಶೆಟ್ಟಿ, ಉಪಾಧ್ಯಕ್ಷ ಎಂ.ರಾಮಮೂರ್ತಿಶೆಟ್ಟಿ, ಕಾರ್ಯದರ್ಶಿ ವೈ.ಮಂಜುನಾಥ, ಬಿ.ಜೆ. ಮಧುಸೂಧನ, ಖಜಾಂಚಿ ಅಗಸನೂರು ಶಿವಕುಮಾರ, ಯಶಸ್ವಿನಿ ವಾಸವಿ ಮಹಿಳಾ ಮಂಡಳಿ ಸದಸ್ಯರು ಇದ್ದರು.ಸಂಜೆ ವಾಸವಿ ಅಮ್ಮನವರ ರಥೋತ್ಸವ ಹಾಗೂ ಭವ್ಯ ಮೆರವಣಿಗೆ ನಡೆಯಿತು.`ಜಾತಿ ಮೀರಿದರೆ ಪ್ರಗತಿ~

ಮರಿಯಮ್ಮನಹಳ್ಳಿ: `ಪ್ರತಿಯೊಬ್ಬರು ವಿಶಾಲಮನೋಭಾವ ಹೊಂದುವುದರ ಜತೆಗೆ ಜಾತೀಯತೆ ಮೀರಿ ಕೆಲಸ ಮಾಡಿದಾಗ ಮಾತ್ರ ಸಮಾಜದ ಹಾಗೂ ದೇಶದ ಅಭಿವೃದ್ಧಿಯಾಗುವುದು~ ಎಂದು ನಂದಿಪುರದ ಮಹೇಶ್ವರ ಸ್ವಾಮೀಜಿ ಹೇಳಿದರು.ಅವರು ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವಾಸವಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಾಸವಿ ದೇವಿಯ ನಾಣ್ಯಗಳ ತುಲಾಭಾರ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಯಾವುದೇ ಕೆಲಸಗಳನ್ನು ಮಾಡಲು ಒಳ್ಳೆಯ ಭಾವನೆ, ಶ್ರದ್ಧೆ ಹಾಗೂ ಸೇವೆ ಮುಖ್ಯವಾಗಿದ್ದು, ನಮ್ಮ ಜೀವನದಲ್ಲಿ ನಾವು ಮಾಡಿದ ಸತ್ಫಲಗಳು ಮಾತ್ರ ಹಿಂದೆ ಬರುತ್ತವೆ. ನಮ್ಮ ಕರ್ತವ್ಯ ಗಳನ್ನು ಶ್ರದ್ಧೆಯಿಂದ ಮಾಡಿದಾಗ ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ನಮ್ಮ ದೇಶದ ಸಂಸ್ಕೃತಿ ದೊಡ್ಡದಾಗಿದ್ದು, ಸಂಸ್ಕಾರ ಬೆಳೆಸಿಕೊಳ್ಳುವುದರೊಂದಿಗೆ, ಸಮಾಜ ದಲ್ಲಿ ಎಲ್ಲಾ ಧರ್ಮಗಳನ್ನು, ಜನರನ್ನು ಪ್ರೀತಿಸಿ, ನಿಮ್ಮ ಧರ್ಮವನ್ನು ಪಾಲಿಸಿ ಎಂದರು.ಸನ್ಮಾನ ಸ್ವೀಕರಿಸಿದ ಶಾಸಕ ಕೆ.ನೇಮಿರಾಜ್ ನಾಯ್ಕ, ಹಿಂದುಳಿದ ಪ್ರದೇಶವಾದ ಈ ಭಾಗದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಯಾಗಬೇಕಿದ್ದು, ಅಭಿವೃದ್ಧಿಗೆ ಪ್ರಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ನಂದಿಪುರ ಮಹೇಶ್ವರ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.ನಂತರ ವಾಸವಿ ದೇವಿಗೆ ನಾಣ್ಯಗಳಿಂದ ತುಲಾಭಾರ ಕಾರ್ಯಕ್ರಮ ನಡೆಯಿತು. ಜಯಂತಿ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ, ಪೂಜೆ ಪುನಸ್ಕಾರಗಳು ಜರುಗಿದವು. ಬೆಳಿಗ್ಗೆ ಆಂಜನೇಯ ದೇವಸ್ಥಾನದಿಂದ ಆರ್ಯವೈಶ್ಯ ಸಮಾಜದ ಸುಮಂಗಲೆಯರು ಗಂಗೆಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಕಳಸಗಳನ್ನು ಹೊತ್ತು ದೇವಸ್ಥಾನಕ್ಕೆ ತಂದರು. ಸಂಜೆ ವಾಸವಿ ಕನ್ನಿಕಾಪರಮೇಶ್ವರಿಯ ಮೆರವಣಿಗೆ ನಡೆಯಿತು.ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಸಿ.ಸತೀಶ್, ಆರ್ಯವೈಶ್ಯ ಸಮಾಜದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ  ವೀಣಾ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣಮ್ಮ, ಎಂ.ವಿಶ್ವನಾಥಶೆಟ್ಟಿ, ಡಿ.ರಾಘವೇಂದ್ರ ಶೆಟ್ಟಿ, ಎಂ.ಬದರೀನಾಥ ಶೆಟ್ಟಿ, ಜಿ.ಸತ್ಯನಾರಾಯಣ ಶೆಟ್ಟಿ, ಎಂ.ವೆಂಕಟೇಶ್‌ಶೆಟ್ಟಿ ಸೇರಿದಂತೆ ಆರ್ಯವೈಶ್ಯ ಸಮಾಜದ ಗಣ್ಯರು ಹಿರಿಯರು, ಸಮಾಜದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry