ಗುರುವಾರ , ಫೆಬ್ರವರಿ 25, 2021
29 °C

ವೈಭವದ ಶಂಭುಲಿಂಗೇಶ್ವರಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಭವದ ಶಂಭುಲಿಂಗೇಶ್ವರಸ್ವಾಮಿ ರಥೋತ್ಸವ

ಸಿರುಗುಪ್ಪ:  ಪಟ್ಟಣದ ತುಂಗಭದ್ರಾ ನದಿ ದಡದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಶಂಭುಲಿಂಗೇಶ್ವರಸ್ವಾಮಿಯ ರಥೋತ್ಸವವು ಶುಕ್ರವಾರ ಸಂಜೆ ಸಡಗರ ಸಂಭ್ರಮದಿಂದ ನಡೆಯಿತು.ದೇವಸ್ಥಾನದಲ್ಲಿ ಬೆಳಗಿನಿಂದಲೇ ಸ್ವಾಮಿಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳು ನಡೆದವು.ಪಟ್ಟಣದ ಸುತ್ತಮುತ್ತಲಿನ ಭಕ್ತರು ಬೆಳಿಗ್ಗೆಯಿಂದಲೇ ಸಾಲುಗಟ್ಟಿನಿಂತು ಸ್ವಾಮಿಯ ದರ್ಶನ ಪಡೆದು ಕಾಯಿ-ಕರ್ಪೂರ ಅರ್ಪಿಸಿದರು.ಸಂಜೆ ದೇವಸ್ಥಾನದಿಂದ ವಿವಿಧ ವಾದ್ಯಗಳ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ರಥದ ಬಳಿ ತಂದು ನಂತರ ಮೂರ್ತಿಯನ್ನು ಅರ್ಚಕರು ರಥದಲ್ಲಿ ಪ್ರತಿಷ್ಠಾಪಿಸಿ ಬಳಿಕ ಬಣ್ಣದ ಹೂ, ಹಸಿರು ತೋರಣಗಳಿಂದ ಶೃಂಗರಿಸಿದ ರಥವನ್ನು ಭಕ್ತರು ಸ್ವಾಮಿಯ ಜಯಘೋಷ ಮಾಡುತ್ತಾ ಹಗ್ಗ ಹಿಡಿದು ರಥವನ್ನು ಎಳೆದು ಪುನೀತರಾದರು. ರಥಕ್ಕೆ ಹೂ ಹಣ್ಣು ಎಸೆದು ಹರಕೆ ತೀರಿಸಿದರು.ಉತ್ಸವದಲ್ಲಿ ಡೊಳ್ಳು, ಭಾಜಾಭಜಂತ್ರಿ, ಪಲ್ಲಕಿಯ ಮೆರವಣಿಗೆ ನಡೆಯಿತು. ಸಿರುಗುಪ್ಪ, ದೇಶನೂರು, ಗಡ್ಡೆ ವಿರುಪಾಪುರ, ಇಬ್ರಾಂಪುರ, ಬಾಗವಾಡಿ ಮುಂತಾದ ಗ್ರಾಮಗಳ ಸಾವಿರಾರು ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ರಥೋತ್ಸವದ ಅಂಗವಾಗಿ ಶುಕ್ರವಾರ ಬೆಳಗಿನ ಜಾವ ನಡೆದ ಅಗ್ನಿಕುಂಡದಲ್ಲಿ 250 ಕ್ಕೂ ಅಧಿಕ ಭಕ್ತರು ಬೆಂಕಿ ತುಳಿದು ಹರಕೆ ತೀರಿಸಿದರು.ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗಿನ ಜಾವ ರಾರಾವಿ ವೀರೇಶಯ್ಯಸ್ವಾಮಿ ಕಾಶ್ಯಯ ಇವರ ವಡವು ಮತ್ತು ತೆಕ್ಕಲಕೋಟೆ ರಾಚಯ್ಯಸ್ವಾಮಿ ಅವರ ಸಮ್ಮೇಳನದೊಂದಿಗೆ ಅಗ್ನಿಕುಂಡ ಕಾರ್ಯಕ್ರಮ ಜರುಗಿತು. ನಂತರ ಸ್ವಾಮಿಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳು ನಡೆದವು.  ಪಟ್ಟಣದ ಸುತ್ತಮುತ್ತಲಿನ ಭಕ್ತರು ಸಾಲುಗಟ್ಟಿತು ಸ್ವಾಮಿಯ ದರ್ಶನ ಪಡೆದರು. ಭಕ್ತರು ಉರುಳು ಸೇವೆ, ದೀಡ್ ನಮಸ್ಕಾರ, ಕೇಶಮುಂಡನೆ, ದವಸಧ್ಯಾನ ನಗನಾಣ್ಯ ಮುಂತಾದ ಹರಕೆಗಳನ್ನು ಅರ್ಪಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.