ಗುರುವಾರ , ಮಾರ್ಚ್ 4, 2021
18 °C
ಮಡಕಿಹೊನ್ನಳ್ಳಿಯಿಂದ ಕಲ್ಮೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ

ವೈಭವದ ಸಂಗಮೇಶ್ವರ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಭವದ ಸಂಗಮೇಶ್ವರ ಜಾತ್ರೆ

ಕಲಘಟಗಿ: ತಾಲ್ಲೂಕಿನಲ್ಲಿ ಪವಿತ್ರ ನದಿಗಳ ಸಂಗಮ ಸ್ಥಳವಾದ ಸಂಗೇದೇವರಕೊಪ್ಪದ ಸಂಗಮೇಶ್ವರ ದೇವರ ರಥೋತ್ಸವ ಅದ್ದೂರಿಯಾಗಿ ಜರುಗಿತು.ಪ್ರತಿ ವರ್ಷ ಸಂಕ್ರಮಣದ ದಿನದಂದು ಜರುಗುವ ಈ ರಥೋತ್ಸವಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಬಂದು ಸಂಗಮದಲ್ಲಿ ಮಿಂದು ದೇವರ ದರ್ಶನ ಮಾಡಿ ಕೃತಾರ್ಥರಾದರು.ನೆರೆಯ ಗ್ರಾಮ ಮಡಕಿಹೊನ್ನಳ್ಳಿಯಿಂದ ಕಲ್ಮೇಶ್ವರ ದೇವರ ಪಲ್ಲಕ್ಕಿಯು ಮಂಗಲವಾದ್ಯಗಳು, ಕಲಶ ಹೊತ್ತ ಮಹಿಳೆಯರು ಹಾಗೂ ಸಾವಿರಾರು ಭಕ್ತರ ಜಯಘೋಷದ ನಡುವೆ ಸಂಗೇದೇವರಕೊಪ್ಪಕ್ಕೆ ಆಗಮಿಸಿ, ನಂತರ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.ಈ ಸಂದರ್ಭದಲ್ಲಿ ತಾಲ್ಲೂಕಿನ ಬೇರೆ ಬೇರೆ ಹಳ್ಳಿಗಳಿಂದ ಆಗಮಿಸಿದ್ದ ಝಾಂಜ್‌, ಡೊಳ್ಳು, ನೃತ್ಯತಂಡಗಳು ತಮ್ಮ ಭಕ್ತಿಪೂರ್ವಕ ಸೇವೆಯನ್ನು ಸಮರ್ಪಿಸಿದವು. ಗ್ರಾಮದ ಸಿ.ಎಂ.ನಿಂಬಣ್ಣವರ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.ಜಾನುವಾರು ಪ್ರದರ್ಶನ, ಕಡುಬಿನ ಕಾಳಗ:  ಸಂಗೇದೇವರಕೊಪ್ಪದ ಜಾತ್ರೆಯ ನಿಮಿತ್ತ ಶನಿವಾರ ಮಧ್ಯಾಹ್ನ 12 ಗಂಟೆಗೆ ಜಾನುವಾರು ಪ್ರದರ್ಶನ ಮತ್ತು ಕಡುಬಿನ ಕಾಳಗ ಜರುಗಲಿದೆ. ಉತ್ತಮ ಜಾನುವಾರುಗಳಿಗೆ ಪಶು ಇಲಾಖೆಯ ಸಹಯೋಗದಲ್ಲಿ ಬಹುಮಾನ ವಿತರಣೆ ನಡೆಯಲಿದ್ದು, ಸಾಯಂಕಾಲ ‘ಅಣ್ಣನ ಆಜ್ಞೆ ತಮ್ಮನ ಪ್ರತಿಜ್ಞೆ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.