ವೈಭವ್ ನೂತನ ಬಸ್ ಸೇವೆಗೆ ಚಾಲನೆ

7

ವೈಭವ್ ನೂತನ ಬಸ್ ಸೇವೆಗೆ ಚಾಲನೆ

Published:
Updated:
ವೈಭವ್ ನೂತನ ಬಸ್ ಸೇವೆಗೆ ಚಾಲನೆ

ಚಿಕ್ಕಮಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ಚಿಕ್ಕಮಗಳೂರು ಘಟಕದಿಂದ ಪ್ರಯಾಣಿಕರು ಹಾಸನ ಮಾರ್ಗದಲ್ಲಿ ಬೆಂಗಳೂರಿಗೆ ಪ್ರಯಾಣಿಸಲು ಆರಂಭಿಸಿರುವ ಎರಡು ನೂತನ ಬಸ್ `ವೈಭವ್~ ಸಂಚಾರಕ್ಕೆ ಶಾಸಕ ಸಿ.ಟಿ.ರವಿ ಶುಕ್ರವಾರ ಚಾಲನೆ ನೀಡಿದರು.ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ರಾಜಹಂಸ ಮಾದರಿಯ ನೂತನ `ವೈಭವ್~ ಬಸ್ ಸಂಚಾರ ಆರಂಭಿಸಲಾಗಿದೆ. 47 ಆಸನಗಳ ವ್ಯವಸ್ಥೆ ಇರುವ ಎರಡು ಬಸ್‌ಗಳು ಚಿಕ್ಕಮಗಳೂರು- ಬೆಂಗಳೂರು ನಡುವೆ ಸಂಚರಿಸಲಿವೆ. ಪ್ರಯಾಣಿಕರು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಿಭಾಗೀಯ ಅಧಿಕಾರಿ ಬಸವರಾಜ್ ಮಾತನಾಡಿ, 28 ಲಕ್ಷ ರೂಪಾಯಿ ವೆಚ್ಚದ ಎರಡು ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗಿದೆ. ಚಿಕ್ಕಮಗಳೂರಿನಿಂದ ಬೆಳಿಗ್ಗೆ 4.15ಕ್ಕೆ ಹೊರಡಲಿದೆ. ಮತ್ತೊಂದು ಬಸ್ ಹೊರಡುವ ವೇಳೆಯನ್ನು ಈಗಿರುವ ಮಾರ್ಗಗಳ ನಡುವೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿಗದಿಪಡಿಸಲಾಗುವುದು.ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸಾಮಾನ್ಯ ಬಸ್‌ನಲ್ಲಿ 182 ರೂ. ಪ್ರಯಾಣ ದರವಿದ್ದರೆ, ನೂತನ ಬಸ್‌ನಲ್ಲಿ 215 ರೂ. ದರ ನಿಗದಿಪಡಿಸಲಾಗಿದೆ. ಜನ ಸಾಮಾನ್ಯರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಈ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.ಸದ್ಯದಲ್ಲೆ ಈ `ವೈಭವ್~ ಮಾದರಿಯ ಹೆಚ್ಚುವರಿ 4 ಬಸ್‌ಗಳು ಈ ಘಟಕಕ್ಕೆ ಬರಲಿದ್ದು, ಮೈಸೂರು, ತಿರುವಣ್ಣಮಲೈ ಸೇರಿದಂತೆ 4 ಮಾರ್ಗಗಳಿಗೆ ಬಿಡಲಾಗುತ್ತದೆ ಎಂದು ತಿಳಿಸಿದರು.ಹಿರಿಯ ಘಟಕ ವ್ಯವಸ್ಥಾಪಕ ಅರುಣ್‌ಕುಮಾರ್, ಸಹಾಯಕ ಲೆಕ್ಕಾಧಿಕಾರಿ ಮಂಜುನಾಥ್, ಸಹಾಯಕ ಆಡಳಿತಾಧಿಕಾರಿ ಬಸವರಾಜ್, ರವೀಶ್, ಜಾವಗಲ್ ಪ್ರಸನ್ನ, ಸುಲೋಚನಾ, ನಗರಸಭಾ ಸದಸ್ಯ ಪುಷ್ಪರಾಜ್ ಇನ್ನಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry