ಸೋಮವಾರ, ಮೇ 17, 2021
22 °C

ವೈಮಾನಿಕ ಪ್ರದರ್ಶನ ದುರಂತ: 3 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೆನೊ (ಎಪಿ): ವಾರ್ಷಿಕ ವೈಮಾನಿಕ ಪ್ರದರ್ಶನದಲ್ಲಿ ಎರಡನೇ ಮಹಾಯುದ್ಧದಲ್ಲಿ ಬಳಕೆಯಾದ ವಿಮಾನವೊಂದು ಪೈಲಟ್ ನಿಯಂತ್ರಣ ಕಳೆದುಕೊಂಡ ಪರಿಣಾಮ ದುರಂತಕ್ಕೀಡಾಗಿ ಕನಿಷ್ಠ ಮೂವರು ಮೃತಪಟ್ಟು, 50 ಕ್ಕೂ ಹೆಚ್ಚು ಪ್ರೇಕ್ಷಕರು ಗಾಯಗೊಂಡಿರುವ ಘಟನೆ ಅಮೆರಿಕ ನೆವಾಡದ ರೆನೊದಲ್ಲಿ ಶನಿವಾರ ನಡೆದಿದೆ.  ಘಟನೆಯಲ್ಲಿ ಮೃತಪಟ್ಟವರಲ್ಲಿ 80 ವರ್ಷದ ಪೈಲಟ್ ಜಿಮ್ಮಿ ಲಿವಾರ್ಡ್ ಕೂಡ ಇದ್ದಾರೆ.  `ರಕ್ತಸಿಕ್ತ ಅವಯವಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದ್ದುದನ್ನು ನಾವು ಕಣ್ಣಾರೆ ಕಂಡೆವು. ಬದುಕುಳಿದ ವ್ಯಕ್ತಿಗಳ ಅವಯವಗಳೂ ತುಂಡಾಗಿ ಬಿದ್ದಿವೆ. ಘಟನಾ ಸ್ಥಳದಲ್ಲಿ ನೆತ್ತರ ಕೋಡಿ ಹರಿದಿತ್ತು~ ಎಂದು ಅಲಬಾಮಾದ ಮೌರೇನ್ ಹಿಗ್ಗೀಸ್ ಎಂಬುವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.