ವೈಮಾನಿಕ ಮೇಳದಲ್ಲಿ ಹಾರಾಡುವ ಗೂಳಿಗಳು

7

ವೈಮಾನಿಕ ಮೇಳದಲ್ಲಿ ಹಾರಾಡುವ ಗೂಳಿಗಳು

Published:
Updated:

ಬೆಂಗಳೂರು: ವಿಶ್ವ ವೈಮಾನಿಕ ರಂಗದಲ್ಲಿ ‘ಹಾರಾಡುವ ಗೂಳಿಗಳು’ ಎಂದೇ ಖ್ಯಾತಿ ಗಳಿಸಿರುವ ಜೆಕ್ ಗಣರಾಜ್ಯದ ಫ್ಲೈಯಿಂಗ್ ಬುಲ್ಸ್ ಏರೊಬಾಟಿಕ್ಸ್ ತಂಡವು ಬೆಂಗಳೂರಿನಲ್ಲಿ ನಡೆಯಲಿರುವ ‘ಏರೊ ಇಂಡಿಯಾ 2011’ ವೈಮಾನಿಕ ಮೇಳದಲ್ಲಿ ಕಸರತ್ತು ನಡೆಸಲಿದೆ. ಯಲಹಂಕ ವಾಯುನೆಲೆಯಲ್ಲಿ ಫೆ.9-13ರವರೆಗೆ ನಡೆಯಲಿರವ ಮೇಳದಲ್ಲಿ ಪ್ರತಿದಿನ ಈ ತಂಡವು ಕಸರತ್ತು ಪ್ರದರ್ಶಿಸಲಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಕಸರತ್ತು ನಡೆಸಲಿರುವ ತಂಡದ ನೇತೃತ್ವವನ್ನು 60 ವರ್ಷ ವಯಸ್ಸಿನ ಮಹಿಳಾ ಪೈಲಟ್‌ವೊಬ್ಬರು ವಹಿಸಿಕೊಂಡಿರುವುದು ವಿಶೇಷ.ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಈ ತಂಡವನ್ನು ಕ್ಯಾಪ್ಟನ್ ರಾಡ್ಕಾ ಮಚೊವಾ ಮುನ್ನಡೆಸಲಿದ್ದಾರೆ. ಇವರ ಜೊತೆ ತಂಡದ ಸದಸ್ಯರಾದ ಜಿರಿ ಸಲ್ಲೆರ್, ಜಿರಿ ವೆಪ್ರೆಕ್ ಹಾಗೂ ಮಿರೊಸ್ಲವ್ ಕ್ರೆಸಿ ಅವರುಗಳು ಝ್ಲಿನ್ 50 ಎಲ್‌ಎಕ್ಸ್ ಪುಟ್ಟ ವಿಮಾನವನ್ನು ಬಳಸಿ ಕಸರತ್ತು ನಡೆಸಲಿದ್ದಾರೆ.ಫ್ಲೈಯಿಂಗ್ ಬುಲ್ಸ್ ತಂಡವು ಮೊದಲ ಬಾರಿಗೆ 2001ರಲ್ಲಿ ಆಕಾಶದಲ್ಲಿ ನರ್ತನ ನಡೆಸಿತ್ತು. ಅದೇ ವರ್ಷ ಎಫ್‌ಎಐ ನಿಪ್ಪೊನ್ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಆ ನಂತರ ಹಲವು ದೇಶಗಳಲ್ಲಿ ತಂಡವು ಅದ್ಭುತ ಕಸರತ್ತುಗಳನ್ನು ಪ್ರದರ್ಶಿಸಿದೆ. ಈಗ ಉದ್ಯಾನನಗರಿಯ ಬಾನಂಗಳದಲ್ಲಿ ರಂಗೋಲಿ ಹಾಕಲು ತಂಡವು ಆಗಮಿಸಿದೆ.ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ ತಂಡದ ಮುಖ್ಯಸ್ಥೆ ರಾಡ್ಕಾ ಮಚೊವಾ, ‘ಮೇಳದ ಎಲ್ಲ ಐದು ದಿನಗಳಲ್ಲೂ ನಮ್ಮ ತಂಡ ಕಸರತ್ತು ಪ್ರದರ್ಶಿಸಲಿದೆ. ಪ್ರತಿದಿನ ಸುಮಾರು 20ರಿಂದ 30 ನಿಮಿಷಗಳವರೆಗೆ ಪ್ರದರ್ಶನ ನಡೆಯಲಿದೆ. ವೀಕ್ಷಕರ ಕಣ್ಮನ ಸೆಳೆಯುವಂತಹ ಪ್ರದರ್ಶನ ನೀಡುವ ವಿಶ್ವಾಸವಿದೆ’ ಎಂದು ಹೇಳಿದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry