ಬುಧವಾರ, ನವೆಂಬರ್ 13, 2019
22 °C
ಪಂಚರಂಗಿ

`ವೈಯಕ್ತಿಕ ಬದುಕೇ ಆನಂದಮಯ'

Published:
Updated:

ತೊಂಬತ್ತರ ದಶಕದಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ್ದ ನಟಿ ಕಾಜೋಲ್ ಅವರನ್ನು ಈಗ ದೊಡ್ಡ ಪರದೆಯ ಮೇಲೆ ಕಾಣುವುದು ವಿರಳ. ಆದರೆ ವೃತ್ತಿ ಜೀವನಕ್ಕಿಂತ ಕೌಟುಂಬಿಕ ಜೀವನವೇ ಹೆಚ್ಚು ಹಿತವೆನಿಸುತ್ತಿದೆ ಎಂದು ಅವರು ಹೇಳಿದ್ದಾರೆ.ಎರಡು ಮಕ್ಕಳ ತಾಯಿಯಾಗಿರುವ ಕಾಜೋಲ್ ಮಕ್ಕಳಿಗೆ ಶಿಸ್ತು ಕಲಿಸುವಲ್ಲಿ ಕಟ್ಟುನಿಟ್ಟಿನ ತಾಯಿ. ತಾಯಿಯಾಗಿ ಕಾಜೋಲ್ ಮಕ್ಕಳಿಗೆ ಬೈಯುವುದು ಅಜಯ್‌ಗೆ ಇಷ್ಟವಾಗುವುದಿಲ್ಲವಂತೆ.`ನಮ್ಮಿಬ್ಬರಲ್ಲಿ ನಾನೇ ಕಟ್ಟುನಿಟ್ಟು. ಏಕೆಂದರೆ ಅಜಯ್ ಸದಾ ಶೂಟಿಂಗ್ ಎಂದು ಹೊರಗಿರುತ್ತಾರೆ. ಯಾವಾಗಲೂ ಮಕ್ಕಳೊಂದಿಗೆ ಕಾಲ ಕಳೆಯುವ ನನಗೆ ಅವರಿಗೆ ಶಿಸ್ತು ಕಲಿಸುವುದು ಅನಿವಾರ್ಯ. ಆದರೆ ಅಜಯ್ ಮನೆಗೆ ಬಂದರೆಂದರೆ ಮಕ್ಕಳಿಗೆ ಹಬ್ಬವೋ ಹಬ್ಬ. ಮಕ್ಕಳು ಕೂಡ ಅಷ್ಟೇ, ಅಜಯ್ ಇದ್ದಾಗ ಆಟೋಟ; ಇಲ್ಲದಿದ್ದಾಗ ನನ್ನೊಂದಿಗೆ ಹೊಂದಿಕೊಂಡಿರುತ್ತಾರೆ' ಎಂದು ಕಾಜೋಲ್ ಹೇಳಿದ್ದಾರೆ.ಮದುವೆ ನಂತರ ಕೆಲವೇ ಚಿತ್ರಗಳಲ್ಲಿ ನಟಿಸಿದ ಕಾಜೋಲ್ `ಫನಾ', `ಯೂ ಮಿ ಔರ್ ಹಮ್' ಹಾಗೂ `ಮೈ ನೇಮ್ ಈಸ್ ಖಾನ್' ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಹಾಗೂ ಇನ್ನೂ ಕೆಲವು ಚಿತ್ರಗಳಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಂಡರು.`ಮದುವೆಯಾದ ನಂತರ ಸ್ವಲ್ಪ ಜವಾಬ್ದಾರಿ ಹೆಚ್ಚಾಯಿತು. ಮಕ್ಕಳಾದ ಮೇಲಂತೂ ಇಡೀ ಕುಟುಂಬವನ್ನು ನಿರ್ವಹಿಸುವ ದೊಡ್ಡ ಜವಾಬ್ದಾರಿ ಹೆಗಲ ಮೇಲೆ ಬಿತ್ತು. ಹೀಗಾಗಿ ನನ್ನ ವೃತ್ತಿ ಜೀವನವನ್ನೂ ಮೀರಿ ನನ್ನ ಕೌಟುಂಬಿಕ ಜೀವನ ಬೆಳೆದು ನಿಂತಿದೆ. ಆದರೆ ಒಂದು ನಿಜ ಸಂಗತಿ ಎಂದರೆ ಈ ಜವಾಬ್ದಾರಿ ನಿಭಾಯಿಸುವುದರಲ್ಲೇ ನನಗೊಂದು ರೀತಿಯ ಸಂತೋಷವಿದೆ' ಎನ್ನುವುದು ಅವರ ಅನಿಸಿಕೆ.

 

ಪ್ರತಿಕ್ರಿಯಿಸಿ (+)