ವೈರಿ ನಿರೋಧಕ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

7

ವೈರಿ ನಿರೋಧಕ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

Published:
Updated:
ವೈರಿ ನಿರೋಧಕ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ಬಾಲಸೋರ್ (ಒಡಿಶಾ): ವೈರಿ ದೇಶಗಳು ಪ್ರಯೋಗಿಸುವ ಖಂಡಾಂತರ ಕ್ಷಿಪಣಿಗಳನ್ನು ಮಾರ್ಗ ಮಧ್ಯದಲ್ಲೇ ಛೇದಿಸಿ ನಾಶಪಡಿಸಬಲ್ಲ ಸಾಮರ್ಥ್ಯವಿರುವ ಸ್ವದೇಶಿ ನಿರ್ಮಿತ ವೈರಿ ನಿರೋಧಕ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಶುಕ್ರವಾರ ಯಶಸ್ವಿಯಾಗಿದೆ.



ಒಡಿಶಾದ ಕರಾವಳಿಯಲ್ಲಿ ಬಾಲಸೋರ್‌ನಿಂದ 15 ಕಿ.ಮೀ. ದೂರದಲ್ಲಿರುವ ಚಂಡೀಪುರದ ಪರೀಕ್ಷಾ ಕೇಂದ್ರದಲ್ಲಿ ಈ ಪ್ರಯೋಗ ನಡೆಸಲಾಯಿತು. ಸುಧಾರಿತ `ಪೃಥ್ವಿ~ ಭೂ ಕ್ಷಿಪಣಿಯನ್ನು ಬೆಳಿಗ್ಗೆ 10.13ರ ಸಮಯದಲ್ಲಿ ಉಡಾವಣಾ ವೇದಿಕೆಯಿಂದ ಹಾರಿಸಲಾಯಿತು.



`ಪೃಥ್ವಿ~ ಕ್ಷಿಪಣಿ ಆಗಸಕ್ಕೆ ನೆಗೆದ ಮೂರೇ ನಿಮಿಷಗಳಲ್ಲಿ ಚಂಡೀಪುರದಿಂದ 70 ಕಿ.ಮೀ. ದೂರದಲ್ಲಿರುವ ವೀಲ್ಹರ್ ದ್ವೀಪದಲ್ಲಿ ಪ್ರತಿದಾಳಿಗೆ ಸಜ್ಜಾಗಿ ನಿಂತಿದ್ದ ಅತ್ಯಾಧುನಿಕ ವೈರಿ ನಿಗ್ರಹ ವಾಯು ಕ್ಷಿಪಣಿ (ಎಎಡಿ), ಕರಾವಳಿಯುದ್ದಕ್ಕೂ ಸ್ಥಾಪಿಸಲಾಗಿರುವ ರೇಡಾರ್‌ನಿಂದ ಸಂದೇಶ ಗ್ರಹಿಸಿತು. ಆಗಸಕ್ಕೆ ನೆಗೆದು `ಪೃಥ್ವಿ~ ಕ್ಷಿಪಣಿಯನ್ನು ಧ್ವಂಸಗೊಳಿಸಿತು.



ಈ ವೈರಿ ನಿಗ್ರಹ ಕ್ಷಿಪಣಿ ಸಮುದ್ರ ಮಟ್ಟದಿಂದ 15 ಕಿ.ಮೀ. ಎತ್ತರದಲ್ಲಿ `ಪೃಥ್ವಿ~ಯನ್ನು ನಾಶ ಮಾಡಿದೆ ಎಂದು ಐಟಿಆರ್ ಕೇಂದ್ರದ ನಿರ್ದೇಶಕ ಎಸ್.ಪಿ. ದಾಸ್ ಹೇಳಿದ್ದಾರೆ.



ಈ ಹಿಂದೆ ಹಲವು ಬಾರಿ ಈ ಪ್ರಯೋಗ ವಿಫಲವಾಗಿತ್ತು. ಆದರೆ, 2010ರ ಜುಲೈ ಹಾಗೂ 2011ರ ಮಾರ್ಚ್‌ನಲ್ಲಿ ಯಶಸ್ವಿಯಾಗಿ ಕ್ಷಿಪಣಿ ಧ್ವಂಸ ಮಾಡಲಾಗಿತ್ತು. ಈಗ ವೈರಿ ನಿಗ್ರಹ ಕ್ಷಿಪಣಿಯಲ್ಲಿ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಅಳವಡಿಸಲಾಗಿದೆ.



ವೈರಿ ದೇಶಗಳು ಪ್ರಯೋಗಿಸುವ ಖಂಡಾಂತರ ಕ್ಷಿಪಣಿಗಳನ್ನು ನಾಶಪಡಿಸಬಲ್ಲ ಸಾಮರ್ಥ್ಯವಿರುವ ಸ್ವದೇಶಿ ನಿರ್ಮಿತ ವೈರಿ ನಿಗ್ರಹ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಶುಕ್ರವಾರ ಯಶಸ್ವಿಯಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry