ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ 2ರಿಂದ

7
ಕಾಣಿಯೂರು ಪರ್ಯಾಯ ಮಹೋತ್ಸವ

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ 2ರಿಂದ

Published:
Updated:

ಉಡುಪಿ: ಕಾಣಿಯೂರು ಪರ್ಯಾಯ ಮಹೋತ್ಸವದ ಅಂಗವಾಗಿ ರಥಬೀದಿಯ ನರಸಿಂಹ ಮಂಟಪದಲ್ಲಿ ಜನವರಿ 2ರಿಂದ 17ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ. 2ರಂದು ಸಂಜೆ 4ಗಂಟೆಗೆ ಕಟೀಲು ಲಿಂಗಪ್ಪ ಮತ್ತು ಬಳಗದಿಂದ ನಾದಸ್ವರ ಸ್ವಾಗತ ಸಂಗೀತ, ಪಾಡಿಗಾರು ಲಕ್ಶ್ಮೀನಾರಾಯಣ ಉಪಾಧ್ಯ ಮತ್ತು ಬಳಗದಿಂದ ಸಂಜೆ 6ಗಂಟೆಗೆ ದಾಸವಾಣಿ, ಜ.3ರಂದು ಸಂಜೆ 5ಗಂಟೆಗೆ ಉಡುಪಿಯ ನಾಗರಾಜ ಶೇಟ್‌ ಮತ್ತು ಬಳಗದಿಂದ ಸಂತವಾಣಿ, ಜ.4ರಂದು ಸಂಜೆ 6ಗಂಟೆಗೆ ಸುಪ್ರಿಯ ಹರಿಪ್ರಸಾದ್ ಮತ್ತು ಬಳಗ ಬೆಂಗಳೂರು ಅವರಿಂದ ನೃತ್ಯಾರಾಧನೆ ನಡೆಯಲಿದೆ.ಜ.5ರಂದು ಸಂಜೆ 5ಗಂಟೆಗೆ ಪಟ್ಟಾಭಿರಾಮ್ ಸುಳ್ಯ ಅವರಿಂದ ಮಿಮಿಕ್ರಿ, ಸಂಜೆ 6 ಗಂಟೆಗೆ ಅಂಕಿತಾರಾವ್ ಮತ್ತು ಬಳಗ ನೃತ್ಯಚೇತನ ಕಾರ್ಯಕ್ರಮ, ಜ.6ರಂದು ಸಂಜೆ 5ಗಂಟೆಗೆ ವಾಸುದೇವ ರಂಗಭಟ್ಟ ಮತ್ತು ಬಳಗದಿಂದ ಯಕ್ಷಗಾನ ತಾಳೆಮದ್ದಳೆ, ಜ.7ರಂದು ಸಂಜೆ 5ಗಂಟೆಗೆ ವನಶ್ರೀ-ಸಾಗರ ತಂಡದಿಂದ ‘ಶ್ರೀ ರಾಮ ಪಟ್ಟಾಭಿಷೇಕ’ ನೃತ್ಯರೂಪಕ, ಜ.8ರಂದು ಸಂಜೆ 5ಗಂಟೆಗೆ ಉತ್ತರ ಕರ್ನಾಟಕದ ಕಲಾವಿದರಿಂದ ಜಾನಪದ ಕಲಾವೈವಿಧ್ಯ, ಪುತ್ತೂರು ದೀಪಕ್‌ಕುಮಾರ್‌ ಮತ್ತು ಬಳಗದವರು ಜ.9ರಂದು ಸಂಜೆ 5ಗಂಟೆಗೆ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಡುವರು.ಜ.10ರಂದು ಸಂಜೆ 5ಗಂಟೆಗೆ ವಿನುತಾ ಮತ್ತು ಸಂಗೀತ ಬಳಗದಿಂದ ಭಕ್ತಿಸಂಗೀತ, ಜ.11ರಂದು ಸಂಜೆ 5ಗಂಟೆಗೆ ಬೆಂಗಳೂರು ಶ್ರೀನಿವಾಸ ಕಲಾನಿಲಯದ ಪದ್ಮಿನಿ ಕುಮಾರ್ ಅವರಿಂದ ಭರತನಾಟ್ಯ, ಜ.12ರಂದು ಸಂಜೆ 5ಗಂಟೆಗೆ ಉಡುಪಿಯ ಲತಾಂಗಿ ಸ್ಕೂಲ್‌ ಆಫ್‌ ಮ್ಯೂಸಿಕ್‌ ತಂಡದಿಂದ ಗಾನಸುಧಾ, ಜ.13ರಂದು ಸಂಜೆ 5ಗಂಟೆಗೆ ಕೊಡವೂರು ನೃತ್ಯ ನಿಕೇತನ ತಂಡದವರಿಂದ ನೃತ್ಯಾರ್ಪಣಂ, ಜ.14ರಂದು ಸಂಜೆ 5ಗಂಟೆಗೆ ಉಡುಪಿ ಜನಾರ್ದನ್ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ಸಂಗೀತ ಕಛೇರಿ ನಡೆಯಲಿದೆ.ಜ.15ರಂದು ಸಂಜೆ 5ಗಂಟೆಗೆ ಯು. ದಾಮೋದರ್ ಮತ್ತು ಬಳಗದಿಂದ ಸ್ಯಾಕ್ಸೋಫೋನ್ ವಾದನ, ಸಂಜೆ 6.30ರಿಂದ ಕಿದಿಯೂರು-ಕಡೆಕಾರ್ ಶ್ರೀ ಬ್ರಹ್ಮಬೈರ್ದ್ಯಕಳ ಧೂಮಾವತಿ ಯಕ್ಷಗಾನ ಸಂಘದ ಸದಸ್ಯರಿಂದ ಯಕ್ಷಗಾನ, ಜ 16ರಂದು ಸಂಜೆ 5ಗಂಟೆಗೆ ದಾವಣಗೆರೆಯ ಶ್ರೀ ಶಾರದ ಸಂಗೀತ ನೃತ್ಯ ಕಲಾಶಾಲೆ ತಂಡದಿಂದ ಗೀತನೃತ್ಯ ಸಂಗಮ, ಜ.17ರಂದು ಸಂಜೆ 5ಗಂಟೆಗೆ ತೀರ್ಥಹಳ್ಳಿಯ ಕೆ. ಜಿ. ಶಶಿಕುಮಾರ್ ಕಾರಂತ ಮತ್ತು ಬಳಗದಿಂದ ಭಕ್ತಿ ಸಂಗೀತ, ರಾತ್ರಿ 9ಗಂಟೆಗೆ ಆರ್. ಕೆ. ಪದ್ಮನಾಭ ಮತ್ತು ಬಳಗ, ಮೈಸೂರು ಅವರಿಂದ ವೀಣಾವಾದನ,  ರಾತ್ರಿ 11ರಿಂದ ತೆಂಕು ಬಡಗಿನ ಖ್ಯಾತ ಕಲಾವಿದರಿಂದ ಯಕ್ಷಗಾನ ಕೂಡಾಟ ಏರ್ಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry