ಭಾನುವಾರ, ಮೇ 9, 2021
20 °C

ವೊಡಾಫೋನ್ ದತ್ತಾಂಶ ಸೇವೆ ದರ ಶೇ80 ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೊಡಾಫೋನ್ ರಾಜ್ಯದ 2ಜಿ ನೆಟ್‌ವರ್ಕ್ ಗ್ರಾಹಕರಿಗಾಗಿ ಡೇಟಾ(ದತ್ತಾಂಶ ಸೇವೆ) ದರಗಳಲ್ಲಿ ಶೇ 80 ರಷ್ಟು ಕಡಿತ ಕೊಡುಗೆ ಪ್ರಕಟಿಸಿದೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೊಡಾಫೋನ್ ಕರ್ನಾಟಕ ವೃತ್ತ ಮುಖ್ಯಸ್ಥ ಅಪೂರ್ವ ಮೆಹ್ಹೋತ್ರಾ, ಈ ಕೊಡುಗೆ ಪ್ರೀಪೇಯ್ಡ ಮತ್ತು ಪೋಸ್ಟ್‌ಪೇಯ್ಡ ಹಾಗೂ `ಪೇ ಆ್ಯಸ್ ಯೂ ಗೋ' 2ಜಿ ನೆಟ್‌ವರ್ಕ್ ಗ್ರಾಹಕರಿಗೆ ಅನ್ವಯವಾಗಲಿದೆ ಎಂದರು.ವೊಡಾಫೋನ್ 30 ದೇಶಗಳಲ್ಲಿ ಚಟುವಟಿಕೆಯಲ್ಲಿದ್ದು, ಭಾರತದಲ್ಲಿ 15 ಕೋಟಿ ಗ್ರಾಹಕರಿದ್ದಾರೆ. ದೇಶದಲ್ಲಿ ಮೊಬೈಲ್ ಬಳಕೆ ಹೆಚ್ಚಿದ್ದರೂ ಅಂತರ್ಜಾಲ ಸೇವೆ ಬಳಸುವವರು ಕಡಿಮೆ ಇದ್ದಾರೆ. ಮೊಬೈಲ್ ಇಂಟರ್‌ನೆಟ್ ಜನಪ್ರಿಯಗೊಳಿಸುವ ಉದ್ದೇಶದಿಂದಲೇ ಈ ಯೋಜನೆ ಪ್ರಕಟಿಸಲಾಗಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.