ವೊಲ್ವೊ ದುರಂತ: ತನಿಖೆ ಚುರುಕು

7

ವೊಲ್ವೊ ದುರಂತ: ತನಿಖೆ ಚುರುಕು

Published:
Updated:

ಹೈದರಾಬಾದ್‌: ಪಾಲೆಂ ಬಳಿ ಸಂಭವಿ­ಸಿದ ವೊಲ್ವೊ ಬಸ್‌ ದುರಂತ ಪ್ರಕರ­ಣದ ತನಿಖೆಯನ್ನು ಮತ್ತಷ್ಟು ಚುರುಕು­ಗೊಳಿಸಿರುವ ಆಂಧ್ರ ಸಿಐಡಿ ಪೊಲೀ­ಸರು, ಪ್ರಕರಣದ ಬಗ್ಗೆ ಹಲವು ಆಯಾ­ಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ವೊಲ್ವೊ ಬಸ್‌ ತಯಾರಕರು, ಹಂಚಿಕೆ­ದಾ­ರರು, ಬಸ್‌ ಮಾಲೀಕರು, ಬಸ್‌ ಓಡಿಸು­ತ್ತಿದ್ದ ಜಬ್ಬಾರ್‌ ಟ್ರಾವೆಲ್ಸ್‌, ಪರವಾ­ನಗಿ ನೀಡಿರುವ ಬೆಂಗ­ಳೂರು, ಹೈದ­ರಾ­­ಬಾದ್‌ನ ಆರ್‌ಟಿಎ ಅಧಿಕಾರಿ­ಗಳು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ­ಗಳು ಮತ್ತು ರಸ್ತೆ ನಿರ್ಮಿಸಿದ ಗುತ್ತಿಗೆ­ದಾ­ರರ ವಿರುದ್ಧ ಅಪರಾಧ ಪ್ರಕರಣ ದಾಖಲಿ­ಸಿಕೊಳ್ಳಲು ಯೋಚಿಸುತ್ತಿದೆ.‘ಜಬ್ಬಾರ್‌ ಟ್ರಾವೆಲ್ಸ್‌ನ ಸೈಯದ್‌ ಅಕ್ರಂ ಅಹಮ್ಮದ್‌, ಶಬ್ಬೀರ್‌ ಖಾನ್‌, ಅಮಾನುಲ್ಲಾ ಖಾನ್‌, ಮೊಹಮ್ಮದ್‌ ರಫೀಕ್‌ ಅವರನ್ನು ಬೆಂಗಳೂರಿನಲ್ಲಿ ಬಂಧಿ­ಸ­ಲಾಗಿದ್ದು, ಸೀಟು ಕಾಯ್ದಿರಿಸು­ವಿಕೆ, ಪ್ರಯಾಣಿಕರ ಪಟ್ಟಿ ಸಿದ್ಧತೆ ಮತ್ತು ದೂರ ಪ್ರಯಾಣದ ಬಸ್‌ಗಳಲ್ಲಿ ಲಗೇ­-ಜ್‌ಗೆ ಸಂಬಂಧಿಸಿದ ನಿಯಮದ ಕುರಿತು ಪ್ರಶ್ನಿಸಲಾ­ಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ಮಹಾ­ನಿರ್ದೇ­ಶಕ ಟಿ. ಕೃಷ್ಣಪ್ರಸಾದ್‌ ತಿಳಿಸಿದ್ದಾರೆ.ಜಬ್ಬಾರ್‌ ಟ್ರಾವೆಲ್ಸ್ ಮತ್ತು ದಿವಾ­ಕರ್‌ ರೋಡ್‌ಲೈನ್ಸ್‌ ಮಧ್ಯದ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆ­ಗಳನ್ನು ಪರಿಶೀಲಿ­ಸುತ್ತಿರುವ ಪೊಲೀ­ಸರು,  ದುರಂತದ ಬಳಿಕ ತನಿಖೆಯಿಂದ ತಪ್ಪಿಸಿ­ಕೊ­ಳ್ಳಲು ಹುನ್ನಾರ ನಡೆಸಿರ­ಬಹುದೇ ಎಂಬು­ದನ್ನೂ ತಿಳಿಯಲು ಪ್ರಯತ್ನಿಸುತ್ತಿದ್ದಾರೆ.ಜಬ್ಬಾರ್‌ ಟ್ರಾವೆಲ್ಸ್‌ಗೆ ಸೇರಿದ ಎಪಿ 02 –ಟಿಎ0963 ಸಂಖ್ಯೆಯ ವೊಲ್ವೊ ಬಸ್‌ ಆಂಧ್ರದ ಪಾಲೆಂ ಬಳಿ ಕಿರು­ಸೇತು­ವೆಗೆ  ತಡೆಗೋಡೆಗೆ ಡಿಕ್ಕಿ ಹೊಡೆದ ಪರಿ­ಣಾಮ ಬೆಂಕಿ ಹೊತ್ತಿಕೊಂಡು ಉರಿ­ದಿತ್ತು. ಅಕ್ಟೋಬರ್‌ 30ರಂದು ಜರು­ಗಿದ್ದ ಈ ಘಟನೆಯಲ್ಲಿ ಮಗು ಸೇರಿದಂತೆ 45 ಮಂದಿ ಸಾವನ್ನಪ್ಪಿದ್ದರು.ಬಳಿಕ ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು ಈಚೆಗೆ ಬೆಂಗಳೂರಿನಲ್ಲಿ ಜಬ್ಬಾರ್‌ ಟ್ರಾವೆ­ಲ್ಸ್‌ನ ನಾಲ್ವರು ಉದ್ಯೋಗಿ­ಗಳನ್ನು ವಶಕ್ಕೆ ತೆಗೆದು­ಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry