ವೊಲ್ವೊ: ಮೂರು ಹೊಸ ಮಾದರಿ

7

ವೊಲ್ವೊ: ಮೂರು ಹೊಸ ಮಾದರಿ

Published:
Updated:

ನವದೆಹಲಿ (ಪಿಟಿಐ):  ಸ್ವೀಡನ್ ಮೂಲದ ವಿಲಾಸಿ ಕಾರು ತಯಾರಿಕೆ ಕಂಪೆನಿ ವೊಲ್ವೊ, ಸೇಡಾನ್ `ಎಸ್60~, `ಎಸ್80~ ಮತ್ತು `ಎಕ್ಸ್‌ಸಿ 60~ ಕಾರುಗಳ ಹೊಸ ಮೂರು ಮಾದರಿಗಳನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಹೊಸ ಮಾದರಿಗಳ ಬೆಲೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ. ಸದ್ಯ ಈ ಕಾರುಗಳ ದೆಹಲಿ ಎಕ್ಸ್‌ಷೋರೂಂ ಬೆಲೆ ರೂ.23 ಲಕ್ಷದಿಂದ ರೂ.35 ಲಕ್ಷದವರೆಗೆ ಇದೆ. ಈ ಮೊದಲು ಈ ಕಾರುಗಳ ಬೆಲೆ ರೂ. 27 ಲಕ್ಷದಿಂದ ರೂ. 39.5 ಲಕ್ಷದವರೆಗೆ ಇತ್ತು.  ಗ್ರಾಹಕರ ಬೇಡಿಕೆಗೆ ತಕ್ಕಂತೆ `ಹೊಸ ಮಾದರಿಗಳಲ್ಲಿ `ಡಿ-3~ ಡೀಸೆಲ್‌ಎಂಜಿನ್ ಅಳವಡಿಸಲಾಗಿದೆ ಎಂದು ವೊಲ್ವೊ ಆಟೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಥಾಮಸ್ ಅರ್ನ್‌ಬರ್ಗ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry