ವೋಟಿಗಾಗಿ ನೋಟು: ಕುಲಕರ್ಣಿ ಜಾಮೀನು ಅರ್ಜಿ ವಜಾ

7

ವೋಟಿಗಾಗಿ ನೋಟು: ಕುಲಕರ್ಣಿ ಜಾಮೀನು ಅರ್ಜಿ ವಜಾ

Published:
Updated:

ನವದೆಹಲಿ (ಪಿಟಿಐ): 2008ರ ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಎಲ್.ಕೆ. ಅಡ್ವಾಣಿ ಅವರ ನಿಕಟವರ್ತಿ ಸುಧೀಂದ್ರ ಕುಲಕರ್ಣಿ ಸೇರಿದಂತೆ ಮೂವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯವು ವಜಾ ಮಾಡಿದೆ.

ಸುಧೀಂದ್ರ ಕುಲಕರ್ಣಿ ಹಾಗೂ ಬಿಜೆಪಿಯ ಮಾಜಿ ಸಂಸದ ಫಗನ್ ಸಿಂಗ್ ಕುಲಸ್ತೆ ಮತ್ತು ಮಹೇಂದ್ರ ಸಿಂಗ್ ಭಗೋರಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯವು ಶುಕ್ರವಾರ ವಜಾಗೊಳಿಸಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂಗೀತ ಧಿಂಗ್ರಾ ಸೇಹಗಲ್ ಅವರು, ~ಕ್ಷಮಿಸಿ ನಾನು ನಿಮ್ಮೆಲ್ಲರಿಗೂ ಜಾಮೀನು ನೀಡಲಾಗುವುದಿಲ್ಲ~ ಎನ್ನುತ್ತಾ ಮೂವರ ಜಾಮೀನು ಅರ್ಜಿಯನ್ನು ವಜಾಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry