ವೋಲ್ಟ್ಸ್‌ಗೆ ಗೆಲುವು

7
ಚಾಂಪಿಯನ್ಸ್‌ ಲೀಗ್‌: ಸನ್‌ರೈಸರ್ಸ್‌ಗೆ ನಿರಾಸೆ

ವೋಲ್ಟ್ಸ್‌ಗೆ ಗೆಲುವು

Published:
Updated:

ಮೊಹಾಲಿ: ನ್ಯೂಜಿಲೆಂಡ್‌ನ ಒಟಾಗೊ ವೋಲ್ಟ್ಸ್‌ ತಂಡ ಅಜೇಯ ಸಾಧನೆ ಯೊಂದಿಗೆ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯ ಪ್ರಧಾನ ಹಂತ ಪ್ರವೇಶಿಸಿತು.ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅರ್ಹತಾ ಹಂತದ ಕೊನೆಯ ಪಂದ್ಯದಲ್ಲಿ ವೋಲ್ಟ್ಸ್‌ 5 ವಿಕೆಟ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಮಣಿಸಿತು. ಸನ್‌ರೈಸರ್ಸ್‌ ಈ ಮೊದಲೇ ಪ್ರಧಾನ ಹಂತಕ್ಕೆ ಪ್ರವೇಶಿಸಿತ್ತು.ದಿನದ ಮತ್ತೊಂದು ಪಂದ್ಯದಲ್ಲಿ ಫೈಸಲಾಬಾದ್‌ ವೂಲ್ವ್ಸ್‌ ತಂಡ 10 ರನ್‌ಗಳಿಂದ ಕಂದುರತಾ ಮರೂನ್ಸ್‌ ತಂಡವನ್ನು ಮಣಿಸಿತು. ಇವೆರಡು ತಂಡಗಳು ಈ ಮೊದಲೇ ಟೂರ್ನಿಯಿಂದ ಹೊರಬಿದ್ದಿದ್ದ ಕಾರಣ ಪಂದ್ಯಕ್ಕೆ ಹೆಚ್ಚಿನ ಮಹತ್ವವಿರಲಿಲ್ಲ.ಸಂಕ್ಷಿಪ್ತ ಸ್ಕೋರ್‌: ಸನ್‌ರೈಸರ್ಸ್‌ ಹೈದರಾಬಾದ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 143 (ಜೆಪಿ ಡುಮಿನಿ 57, ಕೆಮರಾನ್‌ ವೈಟ್‌ 25, ಡರೆನ್‌ ಸಮಿ 26, ಬ್ರೆಂಡನ್‌ ಮೆಕ್ಲಮ್‌ 23ಕ್ಕೆ 2, ನಿಕ್‌ ಬಿಯರ್ಡ್‌ 31ಕ್ಕೆ 2) ಒಟಾಗೊ ವೋಲ್ಟ್ಸ್‌: 16.2 ಓವರ್‌ಗಳಲ್ಲಿ 5 ವಿಕೆಟ್‌ಗೆ 144 (ಹಾಮಿಷ್‌ ರುದರ್‌ ಫರ್ಡ್‌ 27, ಬ್ರೆಂಡನ್‌ ಮೆಕ್ಲಮ್‌ ಔಟಾಗದೆ 67, ಡೆಲ್‌ ಸ್ಟೇನ್‌ 13ಕ್ಕೆ 3) ಫಲಿತಾಂಶ: ಒಟಾಗೊ ವೋಲ್ಟ್ಸ್‌ಗೆ 5 ವಿಕೆಟ್‌ ಜಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry