ವೋಲ್ವೊ ಬಸ್‌ ಚಾಲಕರು, ನಿರ್ವಾಹಕರ ಪ್ರತಿಭಟನೆ

7
ಹೆಚ್ಚುವರಿ ಕೆಲಸಕ್ಕೆ ಭತ್ಯೆ ಪಾವತಿಗೆ ಒತ್ತಾಯ

ವೋಲ್ವೊ ಬಸ್‌ ಚಾಲಕರು, ನಿರ್ವಾಹಕರ ಪ್ರತಿಭಟನೆ

Published:
Updated:

ಬೆಂಗಳೂರು: ‘ಹೆಚ್ಚುವರಿ ಕೆಲಸಕ್ಕೆ ಬಿಎಂಟಿಸಿ ಭತ್ಯೆ ನೀಡಿಲ್ಲ. ಇದನ್ನು ಕೂಡಲೇ ಪಾವತಿಸಬೇಕು’ ಎಂದು ಆಗ್ರ­ಹಿಸಿ ಮೆಜೆಸ್ಟಿಕ್‌ ಘಟಕದ(7ನೇ ಘಟಕ) ವೋಲ್ವೊ ಬಸ್‌ಗಳ ಚಾಲಕರು ಹಾಗೂ ನಿರ್ವಾಹ­ಕರು ಮೆಜೆಸ್ಟಿಕ್‌ ಬಸ್‌ ನಿಲ್ದಾಣ­ದಲ್ಲಿ ಮಂಗಳ ವಾರ ಬೆಳಿಗ್ಗೆ ದಿಢೀರ್‌್ ಪ್ರತಿ­ಭಟನೆ ನಡೆಸಿ­ದರು. ಇದ­ರಿಂದಾಗಿ ಸ್ವಲ್ಪ ಕಾಲ ಬಸ್‌ ಸಂಚಾರ ವ್ಯತ್ಯಯ ಉಂಟಾಯಿತು.ಸುಮಾರು 50ಕ್ಕೂ ಅಧಿಕ ಬಸ್‌ಗಳ ಚಾಲಕರು ಹಾಗೂ ನಿರ್ವಾ ಹಕರು ಬೆಳಿಗ್ಗೆ 7ರಿಂದ 10 ಗಂಟೆವರೆಗೆ ಡಿಪೊ ಹೊರಭಾಗದಲ್ಲಿ ಪ್ರತಿ ಭಟನೆ ನಡೆಸಿದರು. ಇದರಿಂದಾಗಿ ಕಾಡು­ಗೋಡಿ, ಅತ್ತಿಬೆಲೆ, ಬನ್ನೇರು ಘಟ್ಟ ಮತ್ತಿತರ ಕಡೆಗೆ ತೆರಳುವ ವೋಲ್ವೊ ಬಸ್‌ಗಳ ಸಂಚಾರ­ದಲ್ಲಿ ವ್ಯತ್ಯಯ ಉಂಟಾಯಿತು.ಇದರಿಂದಾಗಿ ಪ್ರಯಾ­ಣಿ­ಕರು ಪರದಾಡಿದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದರು.‘ಘಟಕದ ಹಿರಿಯ ಅಧಿ­ಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಹೆಚ್ಚು ವರಿ ಕೆಲಸ ಮಾಡಿಸಿ ಭತ್ಯೆ ನೀಡು ವುದಿಲ್ಲ. ಈ ಬಗ್ಗೆ ಪ್ರಶ್ನಿಸಿದ ಸಿಬ್ಬಂದಿ ಯನ್ನು ಗುರಿಯಾಗಿಸಿ ಕೊಂಡು ಕಿರುಕುಳ ನೀಡುತ್ತಿ­ದ್ದಾರೆ’ ಎಂದು ಚಾಲಕರು ಹಾಗೂ ನಿರ್ವಾಹಕರು ಅಳಲು ತೋಡಿಕೊಂಡರು.ನಗರದಲ್ಲಿ ಸಂಚಾರ ದಟ್ಟಣೆಯಿಂದಾಗಿ ನಿಲ್ದಾಣಕ್ಕೆ ಬಸ್‌ ಬರುವುದು ತಡವಾದರೆ ಬೈಗುಳ ಕೇಳ ಬೇಕಾಗುತ್ತದೆ ಎಂದು ಪ್ರತಿಭಟನಾನಿರತ ಚಾಲ­ಕರು ಮತ್ತು ನಿವಾರ್ಹ­ಕರು ಇದೇ ಸಂದಭರ್ದಲ್ಲಿ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry