ಭಾನುವಾರ, ಏಪ್ರಿಲ್ 11, 2021
32 °C

ವೋಲ್ವೊ ಸೆಡಾನ್ ಎಸ್-60 ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್):  ಜಾಗತಿಕ ವಾಹನ ತಯಾರಿಕಾ ಕಂಪೆನಿ ‘ವೋಲ್ವೊ’ ಭಾರತದ ಮಾರುಕಟ್ಟೆಗೆ ‘ಸೆಡಾನ್ ಎಸ್-60’ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಈ ಕಾರುಗಳು ಲಭ್ಯವಿದ್ದು, ದೆಹಲಿಯಲ್ಲಿರುವ ಷೋರೂಂ ಬೆಲೆ ರೂ. 27 ಹಾಗೂ ರೂ. 34 ಲಕ್ಷ.‘ಸೆಡಾನ್ ಮಾದರಿಗಳಿಗೆ ಭಾರತದ  ಮಾರುಕಟ್ಟೆಯಿಂದ ಉತ್ತಮ ಪ್ರತಿಕ್ರಿಯೆಯನ್ನು ಎದುರು ನೊಡುತ್ತಿದ್ದೇವೆ’ ಎಂದು ವೋಲ್ವೊ ಆಟೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಪೌಲ್ ಡಿ ವಿಜಸ್ ಹೇಳಿದ್ದಾರೆ. ಸ್ಪೋರ್ಟ್ಸ್ ಯುಟಿಲಿಟಿ ಮಾದರಿಯಲ್ಲಿ (ಎಸ್‌ಯುವಿ) ಎಕ್ಸ್‌ಸಿ -90, ಎಕ್ಸ್‌ಸಿ -60 ಮತ್ತು ಐಷಾರಾಮಿ ಸೆಡಾನ್ ಮಾದರಿಯಲ್ಲಿ ಎಕ್ಸ್‌ಸಿ-90 ಮತ್ತು ಎಕ್ಸ್‌ಸಿ -60 ಕಾರುಗಳು ಲಭ್ಯ ಇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.