ವ್ಯಂಗ್ಯಚಿತ್ರ ವಿವಾದ: ಪರಿಶೀಲನೆಗೆ ಸಮಿತಿ

7

ವ್ಯಂಗ್ಯಚಿತ್ರ ವಿವಾದ: ಪರಿಶೀಲನೆಗೆ ಸಮಿತಿ

Published:
Updated:

ನವದೆಹಲಿಯ (ಪಿಟಿಐ): ಎನ್‌ಸಿಇಆರ್‌ಟಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಲ್ಲಿನ ವ್ಯಂಗ್ಯಚಿತ್ರ ವಿವಾದ ಕುರಿತು ವರದಿ ನೀಡಲು, ಯುಜಿಸಿ ಮಾಜಿ ಅಧ್ಯಕ್ಷ ಎಸ್. ಕೆ.ಥೋರಟ್ ಅವರ ನೇತೃತ್ವದಲ್ಲಿ ಸರ್ಕಾರವು ಸಮಿತಿ ರಚಿಸಿದೆ.

ಐವರು ಸಮಾಜ ವಿಜ್ಞಾನ ತಜ್ಞರು ಸಮಿತಿ ಸದಸ್ಯರಾಗಿದ್ದಾರೆ.  ಎನ್‌ಸಿಇಆರ್‌ಟಿ ಸಿದ್ಧಪಡಿಸಿದ 9ರಿಂದ 12ನೇ ತರಗತಿವರೆಗಿನ ಸಮಾಜ ವಿಜ್ಞಾನ/ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಲ್ಲಿನ ತಪ್ಪುಒಪ್ಪುಗಳ ಕುರಿತು ಪರಿಶೀಲನೆ ಮಾಡಲಿರುವ  ಸಮಿತಿಯು ಒಂದು ತಿಂಗಳೊಳಗೆ ವರದಿ ಸಲ್ಲಿಸಲಿದೆ.

ಇಗ್ನೊದ ಎ.ಎಸ್.ನಾರಂಗ್, ಶಿಲ್ಲಾಂಗ್ ಟೈಮ್ಸ ಸಂಪಾದಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಪ್ಯಾಟ್ರಿಸಿಯಾ ಮುಖಿಂ, ಚೆನ್ನೈನ ಪ್ರೊ.ಎಂ.ಎಸ್.ಎಸ್. ಪಾಂಡಿಯನ್, ಅಭಾ ಮಲಿಕ್ ಮತ್ತು ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಸರೋಜ್ ಯಾದವ್ ಸಮಿತಿಯ ಸದಸ್ಯರಾಗಿದ್ದಾರೆ.

ರಾಜಕೀಯ ವ್ಯಕ್ತಿಗಳ ವ್ಯಂಗ್ಯಚಿತ್ರಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಅವಕಾಶವಿಲ್ಲ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಈಗಾಗಲೇ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry