ಶನಿವಾರ, ಮೇ 21, 2022
22 °C

ವ್ಯಂಗ್ಯಚಿತ್ರ ವೈಕೊ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಶಾಲಾ ಪಠ್ಯಪುಸ್ತಕಕ್ಕೆ ಸೇರಿಸಿದ್ದ ವಿವಾದಾತ್ಮಕ `ಅಂಬೇಡ್ಕರ್ ವ್ಯಂಗ್ಯಚಿತ್ರ~ದಂತೆಯೇ, ಬೇರೊಂದು ಪಠ್ಯದಲ್ಲಿರುವ ಮತ್ತೊಂದು ವ್ಯಂಗ್ಯಚಿತ್ರದ ವಿರುದ್ಧ ಎಂಡಿಎಂಕೆ ನಾಯಕ ವೈಕೊ ಶುಕ್ರವಾರ ಆಕ್ಷೇಪದ ಧ್ವನಿ ಎತ್ತಿದ್ದಾರೆ.

1960ರಲ್ಲಿ ನಡೆದ ಹಿಂದಿ ವಿರೋಧಿ ಆಂದೋಲನದ ಪ್ರತಿಭಟನಾಕಾರರನ್ನು ಗೇಲಿ ಮಾಡಿರುವ ವ್ಯಂಗ್ಯಚಿತ್ರ ಇದಾಗಿದೆ.

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಲಿ (ಎನ್‌ಸಿಇಆರ್‌ಟಿ) 12ನೇ ತರಗತಿಗೆ ಸಿದ್ಧಪಡಿಸಿರುವ ರಾಜ್ಯಶಾಸ್ತ ಪಠ್ಯಪುಸ್ತಕದ 153ನೇ ಪುಟದಲ್ಲಿ ಈ ವ್ಯಂಗ್ಯಚಿತ್ರ ಇದೆ. `ಸ್ವಾತಂತ್ರ್ಯಾ ನಂತರದ ಭಾರತದ ರಾಜಕೀಯ~ ಎಂಬ ಪಾಠದಲ್ಲಿರುವ ಈ ವ್ಯಂಗ್ಯಚಿತ್ರದಲ್ಲಿ ಹಿಂದಿ ವಿರೋಧ ಆಂದೋಲನದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳನ್ನು `ಹಿಂಸಾನಿರತ ಮುಗ್ಧರು~ ಎಂಬಂತೆ ಬಿಂಬಿಸಲಾಗಿದೆ ಎಂದು ವೈಕೊ ವಿವರಿಸಿದ್ದಾರೆ.

ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರಿಗೆ ಪತ್ರ ಬರೆದಿರುವ ಅವರು, ತಕ್ಷಣವೇ ಈ ವ್ಯಂಗ್ಯಚಿತ್ರವನ್ನು ಪಠ್ಯದಿಂದ ತೆಗೆಯಲು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.