ಶುಕ್ರವಾರ, ಮೇ 7, 2021
20 °C
ಕಂಪೆನಿಯಿಂದ ವಂಚನೆಯ ಆರೋಪ

ವ್ಯವಸ್ಥಾಪಕನನ್ನು ಕೂಡಿ ಹಾಕಿದ ಯುವಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: `ಬಿಡುವಿನ ಸಮಯದಲ್ಲಿ, ಮನೆಯಲ್ಲಿ ಕುಳಿತು ಕೆಲಸ ಮಾಡಿ ತಿಂಗಳಿಗೆ 20-30 ಸಾವಿರ ರೂಪಾಯಿ ಹಣ ಸಂಪಾದಿಸಿ' ಎಂಬ ಜಾಹೀರಾತಿಗೆ ಮಾರು ಹೋದ ಯುವಕರು ಕೈಸುಟ್ಟುಕೊಂಡು, ಹಣ ವಾಪಾಸ್ ನೀಡುವಂತೆ ಸೋಮವಾರ ಸಂಸ್ಥೆಯ ವ್ಯವಸ್ಥಾಪಕನ್ನು ಕೂಡಿ ಹಾಕಿದ ಘಟನೆ ನಡೆದಿದೆ.ಮಾಜಿ ಸಂಸದ ಎಚ್.ಜಿ. ರಾಮುಲು ನಿವಾಸದ ಎದುರು ಇರುವ ಸ್ಪೈಸ್ ಎಂಬ ಸಂಸ್ಥೆಯ ಕಚೇರಿಗೆ ನುಗ್ಗಿದ ತಾಲ್ಲೂಕಿನ ವಿವಿಧ ಗ್ರಾಮಗಳ ಯುವಕರು, ಕಟ್ಟಿಸಿಕೊಂಡ ಹಣ ನೀಡುವಂತೆ ಒತ್ತಾಯಿಸಿ ಕೆಲಕಾಲ ವ್ಯವಸ್ಥಾಪಕನನ್ನು ಕಚೇರಿಯಲ್ಲಿ ದಿಗ್ಬಂಧನ ಹಾಕಿದರು.ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಹೆದರಿದ ವ್ಯವಸ್ಥಾಪಕ, ಓಡಿ ಹೋಗಲು ಯತ್ನಿಸಿದರು. ಬಳಿಕ ಕ್ಯಾಮರದಿಂದ ಮುಖ ಮುಚ್ಚಿಕೊಳ್ಳಲು ಯತ್ನಿಸಿದರು. ಆದರೆ ಕೆಲ ಯುವಕರು ವ್ಯವಸ್ಥಾಪಕನನ್ನು ಹಿಡಿದು ತಂದು ಕುರ್ಚಿಯಲ್ಲಿ ಕೂರಿಸಿದರು.`ದೃಶ್ಯ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಯಾದರೆ, ಎಲ್ಲರ ಹೆಸರು ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯ ಮಾಡಿಕೊಳ್ಳುತ್ತೇನೆ' ಎಂದು ಸ್ಪೈಸ್ ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕ ಕಾರಟಗಿಯ ಜಿಲಾನಿಸಾಬ ಎಂಬ ಬೆದರಿಕೆ ಹಾಕಿದರು.ಬೋಗಸ್ ಸಂಸ್ಥೆಯ ಆರೋಪ:

`ಸಂಸ್ಥೆಯ ಬಗ್ಗೆ ಮುಂಚಿತವಾಗಿ ನಮಗೆ ಯಾವೊಂದು ಮಾಹಿತಿ ನೀಡಿಲ್ಲ. ಮಾಸಿಕ ರೂ, 20-30 ಸಾವಿರ ಹಣ ಗಳಿಸಬಹುದು ಎಂದಷ್ಟೆ ಹೇಳಿದರು. ಬಳಿಕ ಇದೊಂದು ಬೋಗಸ್ ಸಂಸ್ಥೆ ಎಂಬುವುದು ಮನವರಿಕೆಯಾಯಿತು' ಎಂದು ವಂಚನೆಗೊಳಗಾದ ರೀಯಾಜ್ ಅಹಮ್ಮದ್ ತಿಳಿಸಿದರು.`ಯಾವ ಮಾಹಿತಿ ನೀಡಿದರೆ ಸಂಸ್ಥೆ ನಮ್ಮಿಂದ ನೊಂದಣಿ ಶುಲ್ಕ ಎಂದು ತಲಾ ರೂ, 950 ಪಡೆದುಕೊಂಡಿದೆ. ಸ್ಪೈಸ್ ಎಂಬ ಹೆಸರುಳ್ಳ ತಲಾ 26 ರೂಪಾಯಿ ಬೆಲೆಯ 20 ಪಾಕೀಟ್ ಡಿಟರ್ಜಂಟ್ ಪೌಡರ್ (ಬಟ್ಟೆ ತೊಳೆಯುವ) ಮಾರಿಕೊಂಡು ಬರುವಂತೆ ಹೆಳಿದರು.ಮಾರಿಕೊಂಡು ಬಂದ ಬಳಿಕ ಈಗ ಎರಡು ಟನ್ ಮಾರಿದರೆ ಹತ್ತು ಸಾವಿರ ನಗದು ಹಣ ನೀಡುತ್ತೇವೆ ಎನ್ನುತ್ತಾರೆ. ವಾಸ್ತವಿಕವಾಗಿ ಟೈಯ್ಡ ಎಂಬ ಹೆಸರಾಂತ ಸಂಸ್ಥೆಯ ಡಿಟರ್ಜಂಟ್ ರೂ, 22ಗೇ ಲಭಿಸುತ್ತದೆ. ಸ್ಪೈಸ್ ಒಂದು ವಂಚನೆ ಸಂಸ್ಥೆ ಎಂದು ರವಿಸುಬ್ರಹ್ಮಣ್ಯ ದೂರಿದರು.ಹಣ ಪಾವತಿಸುವಂತೆ ಒತ್ತಾಯಿಸಿ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡಿದ್ದ ಮಂಜುನಾಥ, ಬಸವರಾಜ, ಕಂಪ್ಲಿ ನವೀನ, ಶೋಭಾ ಕಂಪ್ಲಿ, ರಮೇಶ, ಮಹಾದೇವ ಜಂಗಮರ ಕಲ್ಗುಡಿ ಮೊದಲಾದವರು ವ್ಯವಸ್ಥಾಪಕ ಜಿಲಾನಿಸಾಬರನ್ನು ಕೂಡಿ ಹಾಕಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.