ವ್ಯವಹಾರ ಚತುರೆ ಪ್ರಿಯಾಂಕಾ

7

ವ್ಯವಹಾರ ಚತುರೆ ಪ್ರಿಯಾಂಕಾ

Published:
Updated:

ವ್ಯವಹಾರ ಚತುರೆ ಪ್ರಿಯಾಂಕಾ

ನಟಿ ಪ್ರಿಯಾಂಕಾ ಚೋಪ್ರಾ ತಾವೇ ಬರೆದಿರುವ ಸಾಹಿತ್ಯಕ್ಕೆ ತಾವೇ ದನಿ ನೀಡಿರುವ ತಮ್ಮ ಮೊದಲ ಮ್ಯೂಸಿಕ್ ಆಲ್ಬಂ ಹೊರತರುವ ಸಂತಸದಲ್ಲಿದ್ದಾರೆ. ಅದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಲು ಮತ್ತು ಅಂತರರಾಷ್ಟ್ರೀಯ ಗಾಯಕರು ಆಲ್ಬಂ ಹೊರತರುವ ಮಾದರಿಯಲ್ಲಿಯೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.`ಇದು ನನ್ನ ಜೀವನದ ಮಹತ್ವದ ಸಾಧನೆ. ನನಗೆ ಮೊದಲಿನಿಂದಲೂ ಗಾಯಕಿಯಾಗಬೇಕೆಂಬ ಆಸೆ ಇತ್ತು. ಅದಕ್ಕೆ ನನ್ನ ತಂದೆಯೇ ಸ್ಫೂರ್ತಿ. ಇದೀಗ ಕಾಲ ಕೂಡಿ ಬಂದಿದೆ. ನನ್ನ ಆಲ್ಬಂ ಹೊರಬರುತ್ತಿದೆ~ ಎಂದು ಕಣ್ಣು ಅರಳಿಸಿರುವ ಪ್ರಿಯಾಂಕಾ, ಮೊದಲಿಗೆ ತನ್ನ ಮೊದಲ ಹಾಡನ್ನು ಮಾತ್ರ ಬಿಡುಗಡೆ ಮಾಡಲಿದ್ದಾರೆ.ಅದು ಹೊರಬಂದ ಒಂದು ಅಥವಾ ಎರಡು ತಿಂಗಳ ನಂತರ ಇನ್ನೊಂದು ಹಾಡನ್ನು ಹೊರತರಲು ಚಿಂತಿಸಿದ್ದಾರೆ. `ಸಂಪೂಣ ಆಲ್ಬಂ ಹೊರತರುವುದು ಹಳೆಯ ಕಾಲ. ವಿದೇಶಿಯರಂತೆ ನಾವೂ ಕೂಡ ಒಂದೊಂದೇ ಹಾಡನ್ನು ಹೊರಬಿಡಬೇಕು~ ಎಂದು ತನ್ನ ವ್ಯವಹಾರ ಚತುರತೆಯನ್ನು ಪ್ರಿಯಾಂಕಾ ತೋರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry