ವ್ಯಾಘ್ರ ದಾಳಿಗೆ ವಿದ್ಯಾರ್ಥಿ ಬಲಿ

7
ದೆಹಲಿ ಮೃಗಾಲಯದಲ್ಲಿ ನಡೆದ ಘಟನೆ

ವ್ಯಾಘ್ರ ದಾಳಿಗೆ ವಿದ್ಯಾರ್ಥಿ ಬಲಿ

Published:
Updated:

ನವದೆಹಲಿ(ಐಎಎನ್ಎಸ್): ನವದೆಹಲಿಯ ರಾಷ್ಟ್ರೀಯ ವನ್ಯಜೀವಿ ಧಾಮದಲ್ಲಿ ಮಂಗಳವಾರ ಮಧ್ಯಾಹ್ನ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಹುಲಿ ಪಂಜರಕ್ಕೆ ಹೊಂದಿಕೊಂಡಿರುವ ಕಂದಕದೊಳಗೆ ಆಯತಪ್ಪಿ ಬಿದ್ದ ವಿದ್ಯಾರ್ಥಿಯೊಬ್ಬನನ್ನು ಬಿಳಿ ಹುಲಿಯೊಂದು ಕೊಂದು ಹಾಕಿದೆ.

ಮಕ್ಸೂದ್ ಎಂಬ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಬುಧವಾರ ಮಧ್ಯಾಹ್ನ 12;30ರ ಸುಮಾರಿಗೆ ಮೃಗಾಲಯಕ್ಕೆ ಬಂದಿದ್ದ. ಒಂದೊಂದೇ ಪ್ರಾಣಿಗಳನ್ನು ವೀಕ್ಷಿಸುತ್ತಾ ಹುಲಿಯ ಪಂಜರದ ಸಮೀಪ ಬಂದಿದ್ದ. ಈ ವೇಳೆ ಆಯತಪ್ಪಿ ಹುಲಿ ಪಂಜರದ ಸಮೀಪದಲ್ಲಿದ್ದ ಕಂದಕದೊಳಗೆ ಬಿದ್ದ.ವಿದ್ಯಾರ್ಥಿ  ಕಂದಕಕ್ಕೆ ಬಿದ್ದ ತಕ್ಷಣ ಹುಲಿ ಎದುರಾಗಿದೆ. ಆದರೆ, ಆತನನ್ನು ಏನೂ ಮಾಡದೆ ಸುಮಾರು 15 ನಿಮಿಷಗಳ ಕಾಲ ಶಾಂತವಾಗಿ ತದೇಕ ಚಿತ್ತದಿಂದ ಆತನನ್ನೇ ನೋಡುತ್ತಾ ಕುಳಿತಿದೆ. ಆದರೆ, ಪ್ರತ್ಯಕ್ಷದರ್ಶಿಗಳು ಯುವಕನನ್ನು ರಕ್ಷಿಸುವ ಉದ್ದೇಶದಿಂದ ಹುಲಿಯ ಗಮನವನ್ನು ಬೇರೆಡೆ ಸೆಳೆಯಲು ಅದರತ್ತ ಕಲ್ಲು ತೂರಾಟ ನಡೆಸಿ, ಬೊಬ್ಬೆ ಹಾಕಿದ್ದಾರೆ.ಇದರಿಂದ ವಿಚಿಲಿತಗೊಂಡ ಹುಲಿ ಯುವಕನ ಮೇಲೆರಗಿ ಆತನನ್ನು ಕೊಂದು ಹಾಕಿದೆ. ಮಕ್ಸೂದನ ಸ್ನೇಹಿತ ಬಿಟ್ಟು, ಹುಲಿಯು ತನ್ನ ಗೆಳೆಯನನ್ನು ಕೊಂದು ಹಾಕಿದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry