ವ್ಯಾಪಾರಿಗಳ ಅಭಿವೃದ್ಧಿಗೆ ಒತ್ತು: ಸಮೀರ್ ಶುಕ್ಲಾ

7
ಇನ್‌ಕಾಮೆಕ್ಸ್: ಮಹಿಳಾ ಉದ್ಯಮ, ಗುಡಿಕೈಗಾರಿಕೆಗೆ 51 ಮಳಿಗೆ

ವ್ಯಾಪಾರಿಗಳ ಅಭಿವೃದ್ಧಿಗೆ ಒತ್ತು: ಸಮೀರ್ ಶುಕ್ಲಾ

Published:
Updated:

ಹುಬ್ಬಳ್ಳಿ: `ಸೆಪ್ಟೆಂಬರ್ 13ರಿಂದ 17ರ ವರೆಗೆ ನಡೆಯಲಿರುವ ಬೃಹತ್ ಮಟ್ಟದ ಕೈಗಾರಿಕೆ ಮತ್ತು ವಾಣಿಜ್ಯ ವಸ್ತು ಪ್ರದರ್ಶನ `ಇನ್‌ಕಾಮೆಕ್ಸ್'ನಲ್ಲಿ ವ್ಯಾಪಾರಿಗಳ ಅಭಿವೃದ್ಧಿಗೆ ಒತ್ತು ನೀಡುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದ್ದು ಸರಣಿ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳು ನಡೆಯ ಲಿವೆ' ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು.`ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಮ್ಮಿಕೊಂಡಿರುವ ವಸ್ತು ಪ್ರದರ್ಶನವು ಅಮರಗೋಳ ಎಪಿಎಂಸಿ ಪ್ರಾಂಗಣದ ಹುಬ್ಬಳ್ಳಿ-ಧಾರವಾಡ ಬಹೂಪಯೋಗಿ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯ ಲಿದ್ದು ಸಿದ್ಧತೆ ಭರದಿಂದ ಸಾಗಿದೆ. ಒಟ್ಟು 395 ಮಳಿಗೆಗಳ  ಪೈಕಿ 209 ಮಳಿಗೆ ಗಳನ್ನು ಉದ್ಯಮಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಮಳಿಗೆಗಳನ್ನು ನಾಲ್ಕು ಭಾಗವಾಗಿ ವಿಂಗಡಿಸಲಾಗಿದೆ. ಆಹಾರ ಮಳಿಗೆ, ಮಕ್ಕಳಿಗಾಗಿ ಮನರಂಜನಾ ಉದ್ಯಾನ, ಹಿರಿಯರಿಗೆ ಅಲ್ಲಲ್ಲಿ ವಿಶ್ರಾಂತಿ ಕೊಠಡಿ ಇತ್ಯಾದಿ ಈ ಬಾರಿಯ ವೈಶಿಷ್ಟ್ಯ' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಉತ್ತರ ಕರ್ನಾಟಕದ ಉತ್ಪನ್ನ, ಆಹಾರ ಇತ್ಯಾದಿಗಳಿಗೆ ಮೀಸಲಾಗಿರುವ `ಉತ್ತರ ಕರ್ನಾಟಕ ಪ್ರಕಾಶಿಸುತ್ತಿದೆ' ಎಂಬ ವಿಭಾಗದಲ್ಲಿ ಒಟ್ಟು 18 ಮಳಿಗೆಗಳು ಇರುತ್ತವೆ. ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಂಬಂಧಿ ಸಿದ ವಿಭಾಗದಲ್ಲಿ 85 ಮಳಿಗೆಗಳು ಇರುತ್ತವೆ.ಮಹಿಳಾ ಉದ್ಯಮ ಮತ್ತು ಗುಡಿಕೈಗಾರಿಕೆಗಳಿಗೆ ಸಂಬಂಧಿಸಿದ ವಿಭಾಗದಲ್ಲಿ 51 ಮಳಿಗೆಗಳು, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಎಂಟು ಮಳಿಗೆ, ಪೀಠೋಪಕರಣಗಳು ಮತ್ತು ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿ 16, ಶೈಕಣಿಕ ಕ್ಷೇತ್ರಕ್ಕೆ ಸಂಬಂಧಿಸಿ ನಾಲ್ಕು ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿ ಆರು ಮಳಿಗೆಗಳು ಇರುತ್ತವೆ' ಎಂದು ಅವರು ವಿವರಿಸಿದರು.`ವ್ಯಾಪಾರಿಗಳ ಅಭಿವೃದ್ಧಿ ಕಾರ್ಯಕ್ರಮಗಳು 14ರಿಂದ 16ರ ವರೆಗೆ ನಡೆಯ ಲಿವೆ. ಇದರಲ್ಲಿ ಈ ಭಾಗದಲ್ಲಿ ಇರುವ ಮೂಲಸೌಲಭ್ಯಗಳ ಮಾಹಿತಿ ನೀಡ ಲಾಗುವುದು.14ರಂದು ಸೀಬರ್ಡ್ ನೌಕಾನೆಲೆ, ಎನ್‌ಪಿಸಿಎಲ್, ಕೈಗಾ ಮತ್ತು ನೈರುತ್ಯ ರೈಲ್ವೆ ಅಧಿಕಾರಿಗಳ ಜೊತೆ, 15ರಂದು ಬಿಇಎಂಎಲ್, ಎಚ್‌ಎಎಲ್, ಬಿಎಚ್‌ಇಎಲ್ ಹಾಗೂ ಇಸ್ರೋ ಅಧಿಕಾರಿಗಳ ಜೊತೆ, 16 ರಂದು ಬಿಇಎಲ್, ಹೆಸ್ಕಾಂ ಅಧಿಕಾರಿ ಗಳು ಹಾಗೂ ಟಾಟಾ ಸಮೂಹ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಂವಾದ ನಡೆಯಲಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯ ಲಿವೆ. 14ರಂದು ಚಕ್ರವರ್ತಿ ಸೂಲಿಬೆಲೆ ಅವರಿಂದ ಜಾಗೋ ಭಾರತ್ ಜಾಗೋ, 15ರಂದು ನಿಖಿಲ್ ಜೋಶಿ ಅವರಿಂದ ಫ್ಯೂಜನ್, 16ರಂದು ಪ್ರವೀಣ್ ಗೋಡ್ಕಿಂಡಿ ಮತ್ತು ತಂಡದಿಂದ ಫ್ಯೂಜನ್ ಇರುತ್ತದೆ' ಎಂದು ಸಮೀರ್ ಶುಕ್ಲಾ ವಿವರಿಸಿದರು.ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎನ್.ಪಿ.ಜವಳಿ ಮಾತ ನಾಡಿ, 13ರಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಪ್ರದರ್ಶನ ಉದ್ಘಾ ಟಿಸಲಿದ್ದು ಸಚಿವರಾದ ಸಂತೋಷ ಲಾಡ್, ಎಚ್.ಕೆ. ಪಾಟೀಲ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾಗವಹಿಸುವರು ಎಂದು ತಿಳಿಸಿದರು.`14ರಂದು ವ್ಯಾಪಾರಿಗಳ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕೇಂದ್ರದ ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಸಚಿವ ಕೆ.ಎಂ. ಮುನಿಯಪ್ಪ, 15ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಆರ್.ವಿ.ದೇಶಪಾಂಡೆ, 16ರಂದು ಬಹುಮಾನ ವಿತರಣಾ ಸಮಾರಂಭದಲ್ಲಿ ಸಚಿವ ಪ್ರಕಾಶ ಹುಕ್ಕೇರಿ ಪಾಲ್ಗೊಳ್ಳು ವರು' ಎಂದು ಅವರು ತಿಳಿಸಿದರು.ಹರಳು, ಆಭರಣ ಪ್ರದರ್ಶನಕ್ಕೆ ಹಿಂದೇಟು

ಇನ್‌ಕಾಮೆಕ್ಸ್ ವಸ್ತು ಪ್ರದರ್ಶನದಲ್ಲಿ ಇದೇ ಮೊದಲ ಬಾರಿ ನಡೆಸಲು ಉದ್ದೇಶಿಸಿದ್ದ ಹರಳು ಮತ್ತು ಆಭರಣಗಳ ಪ್ರದರ್ಶನಕ್ಕೆ ಸೂಕ್ತ ಭದ್ರತೆ ಸಿಗುವ ಭರವಸೆ ಇಲ್ಲದ ಕಾರಣ ಪ್ರದರ್ಶಕರು ಹಿಂದೇಟು ಹಾಕಿದ್ದಾರೆ ಎಂದು ಸಮೀರ್ ಶುಕ್ಲಾ ತಿಳಿಸಿದರು.`ಪ್ರದರ್ಶಕರ ಜೊತೆ ಅನೇಕ ಬಾರಿ ಮಾತುಕತೆ ನಡೆಸಲಾಗಿದ್ದು ಸೂಕ್ತ ಭದ್ರತೆ ಒದಗಿಸುವ ಭರವಸೆ ನೀಡಲಾಗಿದೆ. ಆದರೂ ಅವರಲ್ಲಿ ವಿಶ್ವಾಸ ತುಂಬಲಿಲ್ಲ. ಹೀಗಾಗಿ ಇನ್ನೂ ಪ್ರಯತ್ನ ನಡೆಯುತ್ತಿದೆ. ಅವರು ಒಪ್ಪಿಕೊಂಡರೆ 25 ಮಳಿಗೆಗಳನ್ನು ತೆರೆಯಲಾಗುವುದು' ಎಂದು ಶುಕ್ಲಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry