ವ್ಯಾಪಾರಿ ಬ್ಯಾಂಕ್ ಸದಸ್ಯರಿಗೆ ಕಾಣಿಕೆ

7

ವ್ಯಾಪಾರಿ ಬ್ಯಾಂಕ್ ಸದಸ್ಯರಿಗೆ ಕಾಣಿಕೆ

Published:
Updated:
ವ್ಯಾಪಾರಿ ಬ್ಯಾಂಕ್ ಸದಸ್ಯರಿಗೆ ಕಾಣಿಕೆ

ಸೋಲಾಪುರ: ಸೋಲಾಪುರಿ ವ್ಯಾಪಾರಿ ಸಹಕಾರಿ ಬ್ಯಾಂಕ್ ವತಿಯಿಂದ ಸದಸ್ಯರಿಗೆ ವಿವಿಧ ಕಾಣಿಕೆ ನೀಡಿ ಸತ್ಕರಿಸಲಾಯಿತು. ಹಿರಿಯ ನಿರ್ದೇಶಕ ಪಾಪಾಶೇಠ ಬಲದವಾ ಅವರು ಕಾಣಿಕೆ ವಿತರಿಸಿದರು. ಬ್ಯಾಂಕ್‌ನ ಮುಖ್ಯಸ್ಥ ಗಿರಿಧಾರಿ ಭುತಡಾ ಅವರು ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್ ಉಪಾಧ್ಯಕ್ಷ ಶ್ರೀಕಾಂತ ಕಾಲಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಬಲದವಾ ಬ್ಯಾಂಕ್‌ನ ವರ್ತಮಾನದ ಬಗ್ಗೆ ವಿವರ ನೀಡಿದರು. ಮುಂಬರುವ ದಿನಗಳಲ್ಲಿ ಪ್ರಾರಂಭವಾಗಲಿರುವ ಬ್ಯಾಂಕ್ ಶಾಖೆಗಳ ಹಾಗೂ ಸದಸ್ಯರ ಸಿಬ್ಬಂದಿಗಳ ಕಲ್ಯಾಣ ಯೋಜನೆಗಳ ಬಗ್ಗೆ ತಿಳಿಸಿದರು.ನಿರ್ದೇಶಕ ಅಪರ್ಣ ಹರಿಕಿಶನ್ ರಾಠಿ, ರಾಜಗೋಪಾಲ ಝಂವರ, ಶ್ರೀಕಾಂತ ಲೋಹಿಯಾ, ಕಾಸವಾ, ರಾಜೇಂದ್ರ ಅವರು ನೆನಪಿನ ಕಾಣಿಕೆ ಪಡೆದರು. ಪಿ.ಆರ್.ಓ.ಯೇಮೂಲವಾರ ಮಾತನಾ ಡಿದರು. ರಮೇಶ ಮರ್ದಾ, ಜಗದೀಶ ಖಂಡೇಲವಾಲ, ರಾಮಾನುಜ ತಾಪಡಿಯಾ, ಸೋಮಾ ಮತ್ತಿತರರು ಇದ್ದರು. ರಾಜೇಂದ್ರ ಕಾಸವಾ ನಿರೂಪಿಸಿದರು. ನಿರ್ದೇಶಕ ರಾಜಗೋಪಾಲ ಝಂವರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry