ಮಂಗಳವಾರ, ಅಕ್ಟೋಬರ್ 15, 2019
29 °C

ವ್ಯಾಯಾಮ: ಕರುಳು ಕ್ಯಾನ್ಸರ್ ದೂರ

Published:
Updated:

ಸಿಡ್ನಿ (ಐಎಎನ್‌ಎಸ್): ದೈಹಿಕವಾಗಿ ಹೆಚ್ಚು ಕ್ರಿಯಾ ಶೀಲರಾಗಿರುವವರಲ್ಲಿ ಕರುಳು ಕ್ಯಾನ್ಸರ್‌ನ ಅಪಾಯ ಕಡಿಮೆ ಎಂದು ಆಸ್ಟ್ರೇಲಿಯಾದ ಹೊಸ ಅಧ್ಯಯನ ತಿಳಿಸಿದೆ.ಕರುಳು ಕ್ಯಾನ್ಸರ್ ಪೀಡಿತರಾದ 870 ಜನರನ್ನು ಮತ್ತು  ರೋಗ ಇಲ್ಲದ 996 ಜನರನ್ನು ಈ ಪರೀಕ್ಷೆಗೆ ಒಳಪಡಿಸಲಾಯಿತು. ದೈಹಿಕ ಚಟುವಟಿಕೆ, ಜೀವನ ಪದ್ಧತಿ, ಆಹಾರ ಕ್ರಮ, ವೈದ್ಯಕೀಯ ಚಿಕಿತ್ಸೆ ಮತ್ತು ಉದ್ಯೋಗದ ಬಗ್ಗೆ ಪರೀಕ್ಷೆಗೆ ಒಳಗಾದ ಜನರಿಂದ ಮಾಹಿತಿ ಪಡೆಯಲಾಯಿತು ಎಂದು ಆಸ್ಟ್ರೇಲಿಯಾದ ವೆಸ್ಟರ್ನ್ ವಿಶ್ವವಿದ್ಯಾಲಯ (ಯುಡಬ್ಲೂಎ) ಮತ್ತು ಆಸ್ಟ್ರೇಲಿಯಾದ `ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ರಿಸರ್ಚ್~ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ.ಯುಡಬ್ಲ್ಯೂಎ ವೈದ್ಯಕೀಯ ವಿದ್ಯಾರ್ಥಿ ಮತ್ತು ಲಯನ್ಸ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಟೆರ‌್ರಿ ಬೊಯ್ಲ ಪ್ರಕಾರ, ದೈಹಿಕವಾಗಿ ಚಟುವಟಿಕೆಯಿಂದ ಇರುವವರಲ್ಲಿ ಕರುಳಿನ ಕ್ಯಾನ್ಸರ್ ಅಪಾಯ ಕಡಿಮೆ ಎನ್ನುವುದು ದೃಢಪಟ್ಟಿದೆ.

ಜೀವನಪೂರ್ತಿ ದೈಹಿಕವಾಗಿ ಚಟುವಟಿಕೆಯಿಂದ ಇರುವವರಲ್ಲಿ ಕರುಳು ಕ್ಯಾನ್ಸರ್ ಅಪಾಯ ಶೇ. 40ರಷ್ಟು ಕಡಿಮೆ ಎಂದು ಅಧ್ಯಯನ ಹೇಳಿದೆ.ದೈಹಿಕ ಚಟುವಟಿಕೆಗಳಾದ ವಾಯುವಿಹಾರ, ಸೈಕ್ಲಿಂಗ್, ಈಜು, ಟೆನಿಸ್, ಹಾಕಿ, ನೆಟ್‌ಬಾಲ್ ಮತ್ತು ಫುಟ್ಬಾಲ್ ಆಟಗಳು ಈ ಕ್ಯಾನ್ಸರ್‌ನಿಂದ ದೂರ ಇರಲು ಸಹಕಾರಿ.

Post Comments (+)