ವ್ಯಾಲೆಂಟೈನ್ ದಿನಕ್ಕೆ...

7

ವ್ಯಾಲೆಂಟೈನ್ ದಿನಕ್ಕೆ...

Published:
Updated:

ಪ್ರೇಮಿಗಳ ದಿನಕ್ಕಾಗಿ ಏನೆಲ್ಲ ಆಫರ್, ರಿಯಾಯ್ತಿ, ಆಮಿಷ.

ತಾನಿಷ್ಕ್ ಆಭರಣ

ಅಲಂಕಾರಿಕ, ಸ್ಪೋರ್ಟ್ಸ್ ವಾಚು, ಪರ್ಪಲ್, ಆಕ್ಟೇನ್, ಒಬಕು ಸಂಗ್ರಹಗಳೂ ಸೇರಿದಂತೆ 200ಕ್ಕೂ ಹೆಚ್ಚು ಟೈಟನ್ ವಾಚುಗಳನ್ನು ಶೇ 20ರಷ್ಟು ರಿಯಾಯ್ತಿ ದರದಲ್ಲಿ ಖರೀದಿಸಿ ಪ್ರೇಮಿಗೆ ಉಡುಗೊರೆ ಕೊಡಬಹುದು. ಅಲ್ಲದೆ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಯಾವುದೇ ಝೈಲಸ್ ವಾಚ್ ಖರೀದಿಸಿದರೆ 10 ಎಂಪಿ ಕ್ಯಾನನ್ ಕ್ಯಾಮೆರ ಉಚಿತ. ಈ ಕೊಡುಗೆ ಫೆ.20ರ ವರೆಗೆ.ಇದಲ್ಲದೆ ಹೊಳೆ ಹೊಳೆವ ವಜ್ರದ ಆಭರಣ ರೂ 999 ಮಾತ್ರ. 9 ಕ್ಯಾರೆಟ್ ಚಿನ್ನದಾಭರಣಗಳು ಇಲ್ಲಿವೆ. ಲೈಫ್‌ಸ್ಟೈಲ್

ಲೈಫ್‌ಸ್ಟೈಲ್ ಮಳಿಗೆಯಲ್ಲಿ ಆಕರ್ಷಕ ದರ ಕಡಿತ ಮತ್ತು ನೂರಾರು ಕೊಡುಗೆ ಲಭ್ಯ. ರಾಷ್ಟ್ರೀಯ ಅಂತರರಾಷ್ಟ್ರೀಯ ಬ್ರಾಂಡ್‌ನ ಸುಗಂಧ ದ್ರವ್ಯ, ಕಾಸ್ಮೆಟಿಕ್ಸ್, ಬಟ್ಟೆಬರೆ, ವಾಚು, ಒಳ ಉಡುಪು ಹಾಗೂ ಆಭರಣ ಬ್ರಾಂಡ್‌ಗಳಲ್ಲಿ ಆಯ್ಕೆ ಮಾಡಿಕೊಂಡರೆ ಉಚಿತ ಉಡುಗೊರೆಗಳೂ ಕಾದಿವೆ. ಟೆಟ್ಲೆ ಸ್ಪರ್ಧೆ

ಐವತ್ತು ಶಬ್ದಗಳಲ್ಲಿ ‘ಟೀ, ಮನಸ್ಸು, ಮುಕ್ತ, ಉತ್ತಮ’ ಶಬ್ದಗಳನ್ನು ಬಳಸಿ ಅತ್ಯಂತ ಪ್ರಣಯಭರಿತ ಪ್ರೀತಿಯ ವ್ಯಾಖ್ಯಾನ ನೀಡಿ. ಟೆಟ್ಲೆ ಅವರಿಂದ ಮುದ್ದಾದ ಮನಸೆಳೆಯುವ ಟೀ ಹ್ಯಾಂಪರ್ ಗೆಲ್ಲಬಹುದು. quote ಕಳಿಸಲು ವಿಳಾಸ: Tetley-india@tatatea.co.in

ಟ್ರಾಫಿಕ್ ದೀಪ

ವ್ಯಾಲೆಂಟೈನ್ ಪೂರ್ವದ ಪಾರ್ಟಿಯಲ್ಲಿ ಟ್ರಾಫಿಕ್ ದೀಪಗಳ ಪರಿಕಲ್ಪನೆ! ವೈಟ್‌ಫೀಲ್ಡ್‌ನ ಜೂರಿ ಹೋಟೆಲ್‌ನ ‘ಬ್ಲಿಂಗ್’ ಮನ್ಮಥನ ಮೈದಾನದಂತೆ ಕಂಗೊಳಿಸಲಿದ್ದು ಭಾನುವಾರ ಸಂಜೆ 8ರ ನಂತರ ಮನಸ್ಥಿತಿಗೆ ತಕ್ಕಂತೆ ಕೆಂಪು, ಹಳದಿ, ಹಸಿರು ಟ್ಯಾಗ್ ಹಾಕಿಸಿಕೊಂಡು ಪಾರ್ಟಿಯ ಮಜ ಅನುಭವಿಸಬಹುದು.ಮ್ಯಾಂಗೊ ಟ್ರಿ

ರಿಚ್ಮಂಡ್ ರಸ್ತೆ ಲಾರೆಲ್ ಕ್ರಾಸ್‌ನ ‘ಅಂಡರ್ ದಿ ಮ್ಯಾಂಗೋ ಟ್ರೀ’ ಬಾಯಿ ನೀರೂರುವ ಖಾದ್ಯಗಳಲ್ಲದೆ ಪ್ರತಿ ಎರಡು ವೈನ್ ಗ್ಲಾಸ್‌ನೊಂದಿಗೆ ಮತ್ತೊಂದನ್ನು ಉಚಿತವಾಗಿ ನೀಡುತ್ತಿದೆ. ಮಧ್ಯಾಹ್ನ ಕಾಂತಿಯುತವಾಗಿ ರಾತ್ರಿಯಾಗುತ್ತಿದ್ದಂತೆ ಖಾಸಗಿಯಾಗಿ ಬದಲಾಗುವ ವಾತಾವರಣದಲ್ಲಿ ಸಂಗಾತಿಯೊಂದಿಗೆ ಊಟ ಸವಿಯಬಹುದು.‘ತತ್ವ’ದಲ್ಲಿ ಉಚಿತ ಡೆಸರ್ಟ್

ಲ್ಯಾವೆಲ್ಲೆ ರಸ್ತೆ ಬರಿಸ್ತಾ ಮೇಲ್ಭಾಗದಲ್ಲಿನ ‘ತತ್ವ’ ರೆಸ್ಟೊರೆಂಟ್‌ನಲ್ಲಿ ರಾತ್ರಿಯೂಟ ಮಾಡಿದ ಜೋಡಿಗೆ ಡೆಸರ್ಟ್ ಉಚಿತ. ಖಂಡಗಳ, ಪರ್ಸಿಯದ, ಮಧ್ಯ ಏಷ್ಯದ ಮತ್ತು ಭಾರತೀಯ ಕಬಾಬುಗಳು, ರೋಟಿಗಳ ವೈವಿಧ್ಯ ವಿಶೇಷಗಳು ಮುಕ್ತ ಅಡುಗೆ ಮನೆಯಲ್ಲಿ.ಕ್ಲೌಡ್ ಬಾರ್

ಲ್ಯಾವೆಲ್ಲೆ ರಸ್ತೆಯ ‘ಕ್ಲೌಡ್ ಬಾರ್’ನಲ್ಲಿ ವ್ಯಾಲೆಂಟೈನ್ ದಿನ ಆಚರಿಸುವ ಪ್ರತಿ ಸ್ತ್ರೀಗೆ ಪಿಂಕ್ ಮಾರ್ಟಿನಿ ಇದೆ. ಅವರದೇ ಡಿಜೆ ಶಿವ್ ಸಂಯೋಜಿಸಿದ ವಿಶೇಷ ಸಂಗೀತದ ಹಿನ್ನೆಲೆ ಇರುತ್ತದೆ. ಗೋಡೆಗಳೇ ಇಲ್ಲದ, ಬಿಳಿಯ ಬಟ್ಟೆಯ ಛಾವಣಿ ಮೋಡಗಳನ್ನು ಮುಟ್ಟಿದ ಅನುಭವ ಒದಗಿಸುತ್ತದೆ.ಐಷಾರಾಮಿ ಮತ್ತು ಅನುಕೂಲಕರ ಸೋಫಾಗಳು, ಓಪನ್ ಬಾರ್ ಕೌಂಟರ್‌ನಲ್ಲಿ ಮದ್ಯ, ವೈನ್, ಕಾಕ್‌ಟೇಲ್‌ಗಳು, ಆಮದಾದ ಮತ್ತು ಭಾರತೀಯ ಪೇಯಗಳಿವೆ. ತಿಂಡಿಗಳೂ ವಿಶ್ವದೆಲ್ಲೆಡೆಯ ಸ್ವಾದಗಳಲ್ಲಿ.ಲವ್ ಚಾಕೊಲೇಟ್ 

 ಪ್ರಣಯಭರಿತ ಮಾದರಿ ಸ್ಥಳ ಯುಬಿ ಸಿಟಿಯ ಸಿಟಿ ಬಾರ್. ಇಬ್ಬರಿಗೆ ರುಚಿಯಾದ ಮಧ್ಯಾಹ್ನ ದೂಟ, ರಾತ್ರಿಯೂಟದಲ್ಲಿ ವಿಶೇಷ ಖಾದ್ಯ, ಶಾಂಪೇನ್, ಸ್ಟ್ರಾಬೆರಿ, ಚಾಕೊಲೇಟುಗಳು ಇರುತ್ತವೆ. ಹೃದಯಕ್ಕೂ ಹೊಟ್ಟೆಗೂ ಹಿತಕರ ವಾತಾವರಣ ಮರೆಯಲಾರದ ಸಂಜೆಗೆ. ಅಲ್ಲದೆ ಕೆಂಪು ಪೆಟ್ಟಿಗೆಯಲ್ಲಿ ಆರು ಲವ್ ಚಾಕೊಲೇಟ್ ಚಿಪ್ ಕುಕಿಗಳು, ಚಿನ್ನದ ವರ್ಣದ ಪೆಟ್ಟಿಗೆಯಲ್ಲಿ ಆರು ಲವ್ ಚಾಕೊಲೇಟುಗಳು ಲಭ್ಯ. ಕೊಡುಗೆ ಫೆ.14ರ ವರೆಗೆ.ಗೀತಾಂಜಲಿ ಸಂಗ್ರಹ

ಡಿಸೈನರ್ ಆಭರಣಕ್ಕೆ ಹೆಸರಾದ ‘ಗೀತಾಂಜಲಿ’ಯು ದಮಾಸ್, ದಿಯಾ ಮತ್ತು ಆಸ್ಮಿ ಶ್ರೇಣಿಯಲ್ಲಿ ವ್ಯಾಲೆಂಟೈನ್ ಸಂಗ್ರಹ ಹೊರತಂದಿದೆ.

ಚಿನ್ನದ ಉಡುಗೊರೆಪ್ರೀತಿಯ ದಿನಕ್ಕಾಗಿ ರಿದ್ಧಿಸಿದ್ಧಿ ಬುಲಿಯನ್ಸ್, 2 ಗ್ರಾಂ ತೂಕದ ವಿಶೇಷ ವ್ಯಾಲೆಂಟೈನ್ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ವಿವಿಧ ಗಾತ್ರ, ಆಕಾರ ಮತ್ತು ಕ್ಯಾರೆಟ್‌ನಲ್ಲಿ ಬಿಡುಗಡೆ ಮಾಡಿದೆ. ಪ್ರೇಮಿಗೆ ಕೊಡಲು ಇದು ಸೂಕ್ತ ಉಡುಗೊರೆ. ಭವಿಷ್ಯಕ್ಕೂ ಒಳ್ಳೆಯದು. ಮರು ಖರೀದಿಸುವ ಗ್ಯಾರಂಟಿಯೂ ಇದೆ ಎನ್ನುತ್ತಾರೆ ರಿದ್ಧಿಸಿದ್ಧಿ ನಿರ್ದೇಶಕ ಮುಖೇಶ್ ಕೊಠಾರಿ. ಮಾಹಿತಿಗೆ: www.rsbl.co.inಮಜವಾದ ಪಾರ್ಟಿ

ಅವಿಗ್ನಾ ಪ್ರೊಡಕ್ಷನ್ಸ್ ಬ್ಲ್ಯಾಕ್ ಕ್ಯಾಸ್ಕೇಡ್‌ನ ಸಹಯೋಗದಲ್ಲಿ ವ್ಯಾಲೆಂಟೈನ್ ಪಾರ್ಟಿ ಆಯೋಜಿಸಿದ್ದಾರೆ. ಫ್ಯಾಷನ್ ಷೋ, ಬೀದಿ ನರ್ತನ, ದಕ್ಷಿಣ ಆಫ್ರಿಕದ ಪಾಪ್ ಗಾಯಕ ಲಕಿ ಜೆನಿಂದ ಬಿಬಾಯಿಂಗ್‌ನ ಮಜ. ಆಯ್ಕೆಯಾಗುವ ಅತ್ಯುತ್ತಮ ಜೋಡಿಗೆ ಪ್ರಶಸ್ತಿ, ರೋಡಿಯಂ ನೆಕ್ಲೇಸ್ ಮತ್ತು ಬ್ರೇಸ್‌ಲೆಟ್ ಸೆಟ್ ದೊರೆಯಲಿದೆ.ಸ್ಥಳ: ಬ್ಲ್ಯಾಕ್ ಕ್ಯಶ್ಕೇಡ್ ಡಿಸ್ಕೊ ಥೆಕ್, ಟೋಟಲ್ ಮಾಲ್, ಹಳೆಯ ಏರ್‌ಪೋರ್ಟ್ ರಸ್ತೆ. ಮಧ್ಯಾಹ್ನ 2ರಿಂದ.ಬರಿಸ್ತಾ

ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಬರಿಸ್ತಾ ಲವಾಜ್ಜಾ, ಪ್ರೀತಿಪಾತ್ರರನ್ನು ಮೆಚ್ಚಿಸಲು ಬಯಸುವವರಿಗಾಗಿ ಸ್ಟ್ರಾಬೆರಿ ಡ್ರೀಮ್, ಲಿಚಿ ಸೂಥಿ, ಚಾಕೊ ಊಜ್, ಚಾಕೊಲೇಟ್ ಎಕ್ಲೇರ್‌ಗಳ ಸ್ವಾದವನ್ನು ಪರಿಚಯಿಸಿದೆ.ಉಚಿತ ಮೇಕಪ್

ಗ್ರೀನ್‌ಟ್ರೆಂಡ್ಸ್ ಹೇರ್ ಅಂಡ್ ಸ್ಟೈಲ್ ಸಲೂನ್‌ನ ಪ್ರತಿಯೊಂದು ಕೇಂದ್ರದಲ್ಲೂ ಅದೃಷ್ಟಶಾಲಿ ಒಂದು ಜೋಡಿಗೆ ಮೇಕಪ್ ಉಚಿತ. ಮಾಹಿತಿಗೆ: 2671 0662.ಸೆಂಟ್ರಲ್

ಜಯನಗರ 5ನೇ ಬ್ಲಾಕ್‌ನ ಸೆಂಟ್ರಲ್‌ನಲ್ಲಿ ಸೋಮವಾರ ವ್ಯಾಲೆಂಟೈನ್ ಕೂಪನ್ ಖರೀದಿಸುವ ಮೊದಲ 50 ಜೋಡಿಗೆ ಭೋಜನ, ಡಾನ್ಸ್, ಸಂಗೀತ, ಉಡುಗೊರೆಗಳು ಕಾದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry