ಬುಧವಾರ, ಮೇ 18, 2022
23 °C

ಶಂಕರನಾಗ್ ಸಿಹಿನೆನಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಚಿತ್ರರಂಗದಲ್ಲಿ ಹೊಸ ಛಾಪನ್ನು ಮೂಡಿಸಿ, ಚಿಕ್ಕ ವಯಸ್ಸಿನಲ್ಲೇ ದುರಂತ ಸಾವು ಕಂಡ ನಟ ಶಂಕರನಾಗ್. ಇವರು ಎಸ್.ಪಿ. ಸಾಂಗ್ಲೀಯಾನ, ಸಿಬಿಐ ಶಂಕರ್, ಆಟೋ ರಾಜ, ಗೀತಾ ಹಾಗೂ ಮೂಗನ ಸೇಡು ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ನಾಯಕರಾಗಿ ನಟಿಸಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದ ನಟ. ನಟನೆ ಜೊತೆಯಲ್ಲಿ ನಿರ್ದೇಶಕರಾಗಿಯೂ ಸಹ ಮಿಂಚಿ ಮರೆಯಾದರು.ಇಂಥಹ ಶಂಕರ್‌ನಾಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದೊಂದಿಗೆ ಫೀವರ್ 104 ಎಫ್‌ಎಂ ವಾಹಿನಿ: ಶುಕ್ರವಾರ ಸಂತೋಷಕ್ಕೆ ಹಾಡು ಸಂತೋಷಕ್ಕೆ ‘ಶಂಕರನಾಗ್ ಸಿಹಿನೆನಪು’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.ಇದೊಂದು ಸಂಗೀತ ರಸಸಂಜೆ. ಇಲ್ಲಿ ಅರ್ಚನಾ ಉಡುಪ, ಬದ್ರಿ ಪ್ರಸಾದ್, ನಂದಿತಾ, ಡಾ. ಶಮಿತಾ ಮಲ್ನಾಡ್, ಚೇತನ್ ಸಸ್ಕಾ ಇತ್ಯಾದಿ ಗಾಯಕರು ಶಂಕರನಾಗ್ ಚಿತ್ರದ ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಆಹ್ವಾನಿತರಿಗೆ ಮಾತ್ರ ಪ್ರವೇಶಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 6.30

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.