ಬುಧವಾರ, ನವೆಂಬರ್ 20, 2019
27 °C

ಶಂಕರ್-ಎಹ್ಸಾನ್-ಲಾಯ್ ಸಂಗೀತ ರಸಸಂಜೆ

Published:
Updated:

ಒಂದು ಅದ್ಭುತ ಸಂಗೀತ ಕಛೇರಿಗೆ ಸಾಕ್ಷಿಯಾಗಲು ಬೆಂಗಳೂರು ಕ್ಷಣಗಣನೆ ಮಾಡುತ್ತಿದೆ. ಶಂಕರ್-ಎಹ್ಸಾನ್- ಲಾಯ್ ಅವರು ಒಂದೇ ವೇದಿಕೆಯಲ್ಲಿ ನಡೆಸಿಕೊಡಲಿರುವ ಈ ಸಂಗೀತ ಕಾರ್ಯಕ್ರಮವನ್ನು `ಬೆಂಗಳೂರು ಐಡಿಯಾ ರಾಕ್ಸ್ ಇಂಡಿಯಾ'ದ ಪ್ರತಿಭಾಶೋಧದ ಅಂಗವಾಗಿ ಏರ್ಪಡಿಸಲಾಗಿದೆ.ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಇಂದು (ಶನಿವಾರ) ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಈ ತ್ರಿಮೂರ್ತಿಗಳು ಐಡಿಯಾ ರಾಕ್ಸ್ ಇಂಡಿಯಾದಲ್ಲಿ ಈಗಾಗಲೇ ಗೆದ್ದಿರುವ ಐದು ಮಂದಿ ಸ್ಪರ್ಧಿಗಳಲ್ಲಿ ಒಬ್ಬರು ವಿಜೇತರನ್ನೂ ಆಯ್ಕೆ ಮಾಡಲಿದ್ದಾರೆ.ಕಾರ್ಯಕ್ರಮಕ್ಕೆ ಆಗಮಿಸುವ ಶ್ರೋತೃಗಳಿಗಾಗಿ ವೋಲ್ವೊ ಬಸ್‌ಗಳನ್ನೂ ಐಡಿಯಾ ಸೆಲ್ಯುಲಾರ್ ಏರ್ಪಾಡು ಮಾಡಿದೆ. ಟ್ಯಾಕ್ಸಿ ಶೇರಿಂಗ್, ಕಾರ್ ಪೂಲಿಂಗ್ ಮತ್ತು ಸಮೂಹ ಸಂಚಾರ ವ್ಯವಸ್ಥೆಯನ್ನೂ ಮಾಡಲಾಗಿದೆ. ನಗರದ ವಿವಿಧೆಡೆಗಳಿಂದ ಬಸ್‌ಗಳು ಹೊರಡಲಿವೆ. ಮುಂಗಡವಾಗಿ ಆಸನ ಕಾದಿರಿಸಲು ಮತ್ತು ಕಾರ್ಯಕ್ರಮದ ಒಟ್ಟು ವಿವರಗಳಿಗಾಗಿ ನೋಡಬೇಕಾದ ಸಂಖ್ಯೆ 080 6716 6866/ ವೆಬ್‌ಸೈಟ್ www.grallo.com/IDEARocksಐಡಿಯಾ ಮೊಬೈಲ್ ಸೆಲ್ಯುಲಾರ್, ಸಂಗೀತ ಪ್ರತಿಭೆಗಳ ಶೋಧಕ್ಕಾಗಿ ದೇಶದ 16 ನಗರಗಳಲ್ಲಿ ಕೈಗೊಂಡಿರುವ ಐದನೇ ಸೀಸನ್‌ನ ಶೋಧ ಪ್ರವಾಸದ ಅಂಗವಾಗಿ ಈ ಸಂಗೀತ ಕಾರ್ಯಕ್ರಮವನ್ನು ಉಚಿತವಾಗಿ ಏರ್ಪಡಿಸಿದೆ.

 

ಪ್ರತಿಕ್ರಿಯಿಸಿ (+)