ಶಂಕಿತ ವರ್ತನೆ: ಬಂಧಿತರಲ್ಲಿ ಇಬ್ಬರು ಭಾರತೀಯರು

ಶನಿವಾರ, ಮೇ 25, 2019
28 °C

ಶಂಕಿತ ವರ್ತನೆ: ಬಂಧಿತರಲ್ಲಿ ಇಬ್ಬರು ಭಾರತೀಯರು

Published:
Updated:

ನ್ಯೂಯಾರ್ಕ್ (ಪಿಟಿಐ): 9/11ರ ದಾಳಿಗೆ 10 ವರ್ಷ ಸಂದ ದಿನ ಡೆಟ್ರಾಯಿಟ್‌ನಿಂದ ಹೊರಟ ವಿಮಾನದಲ್ಲಿ ಶಂಕಾಸ್ಪದವಾಗಿ ವರ್ತಿಸಿ ಎಫ್‌ಬಿಐನಿಂದ ಬಂಧನಕ್ಕೆ ಒಳಗಾಗಿರುವ ಮೂವರಲ್ಲಿ ಇಬ್ಬರು ಭಾರತೀಯರಾಗಿದ್ದಾರೆ.ಅನಾರೋಗ್ಯ ಮತ್ತು ವಿಮಾನದ ಶೌಚಾಲಯದಲ್ಲಿ ಹೆಚ್ಚು ಹೊತ್ತು ಕಳೆದದ್ದೇ ಅವರಿಗೆ ಈಗ ಕುತ್ತಾಗಿ ಪರಿಣಮಿಸಿದೆ.ಇವರ ಜೊತೆಗೆ ಬಂಧಿತರಾಗಿರುವ ಅರೆ ಯಹೂದಿ ಹಾಗೂ ಅರೆ ಅರಬ್ ಮೂಲದ ಮಹಿಳೆ ಶೊಶಾನ ಹೆಬ್ಷಿ ಅಂದಿನ ಘಟನೆಯ ಬಗ್ಗೆ ಬ್ಲಾಗ್‌ನಲ್ಲಿ ನೀಡಿರುವ ಸುದೀರ್ಘ ವಿವರಣೆಯಿಂದ, ಇನ್ನಿಬ್ಬರು ಬಂಧಿತರು ಭಾರತೀಯರು ಎಂಬ ವಿಷಯ ಬೆಳಕಿಗೆ ಬಂದಿದೆ. `ಜನಾಂಗೀಯ ಕಾರಣದಿಂದ ನಮ್ಮನ್ನು ಹೀಗೆ ನಡೆಸಿಕೊಳ್ಳಲಾಗಿದೆ~ ಎಂದು ಅವರು ಆಪಾದಿಸಿದ್ದಾರೆ.ವಿಮಾನ ತುರ್ತು ಭೂಸ್ಪರ್ಶ

ನ್ಯೂಯಾರ್ಕ್, (ಪಿಟಿಐ):
ಇಲ್ಲಿಂದ ಫೋನಿಕ್ಸ್‌ಗೆ ತೆರಳುತ್ತಿದ್ದ ವಿಮಾನದ ಮೂವರು ಪ್ರಯಾಣಿಕರ ಶಂಕಾಸ್ಪದ ವರ್ತನೆಯಿಂದ ಎಚ್ಚೆತ್ತ ಸಿಬ್ಬಂದಿ, ವಿಮಾನವನ್ನು ತುರ್ತಾಗಿ ಮಾರ್ಗ ಮಧ್ಯದ ಮಿಸ್ಸೌರಿ ನಿಲ್ದಾಣದಲ್ಲೇ ಇಳಿಸಿದ ಘಟನೆ ಬುಧವಾರ ನಡೆದಿದೆ.ಸೇಂಟ್ ಲೂಯಿಸ್ ನಿಲ್ದಾಣದಲ್ಲಿ ಯುಎಸ್ ಏರ್‌ವೇಸ್ ವಿಮಾನ ಇಳಿಯುತ್ತಿದ್ದಂತೆಯೇ ಈ ಮೂವರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡರು. ನಂತರ ವಿಮಾನ ಫೋನಿಕ್ಸ್‌ಗೆ ತೆರಳಿತು.ಈ ಮೊದಲು (ಸೆ.11) ಇದೇ ಕಾರಣಕ್ಕಾಗಿ ಎರಡು ನಾಗರಿಕ ವಿಮಾನಗಳಿಗೆ ಯುದ್ಧ ವಿಮಾನಗಳನ್ನು ಬೆಂಗಾವಲಾಗಿ ಕಳುಹಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry