ಶುಕ್ರವಾರ, ನವೆಂಬರ್ 22, 2019
25 °C

`ಶಂಭುಲಿಂಗಪ್ಪ ಕೆಜೆಪಿ ಅಧಿಕೃತ ಅಭ್ಯರ್ಥಿ'

Published:
Updated:

ಕುಶಾಲನಗರ: ಕೆಜೆಪಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಶಂಭುಲಿಂಗಪ್ಪ ಅವರನ್ನು ಗುರುತಿಸಲಾಗಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ. ಅಲ್ಲದೇ ಆಲೂರು ಸಿದ್ದಾಪುರದ ವಿರೂಪಾಕ್ಷಪ್ಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕೆಜೆಪಿ ಕೊಡಗು ಜಿಲ್ಲಾಧ್ಯಕ್ಷ ಕೆ.ಎನ್. ಮೋಹನಕುಮಾರ್ ಸ್ಪಷ್ಟಪಡಿಸಿದರು.ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಯಾರಲ್ಲೂ ಗೊಂದಲವಿಲ್ಲ. ಏಕಮತದಿಂದ ಶಂಭುಲಿಂಗಪ್ಪ ಅವರನ್ನು ಚುನಾವಣಾ ಕಣಕ್ಕೆ ಇಳಿಸಲಾಗಿದೆ ಎಂದರು.ಪಕ್ಷದ ಜಿಲ್ಲಾ ವಕ್ತಾರ ಯಸಳೂರು ಉದಯಕುಮಾರ್ ಮಾತನಾಡಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೂ ಇನ್ನು ಎರಡು ದಿನಗಳಲ್ಲಿ ಅಭ್ಯರ್ಥಿ ಹೆಸರನ್ನು ಘೋಷಿಸಲಾಗುವುದು. ಈಗಾಗಲೇ ನಾಲ್ಕು ಜನರ ಹೆಸರು ಸೂಚಿಸಲಾಗಿದೆ. ಅವರಲ್ಲಿ ಸೂಕ್ತ ಅಭ್ಯರ್ಥಿ ಯಾರೆಂದು ನಿರ್ಧಾರ ಮಾಡಿ ಘೋಷಣೆ ಮಾಡಲಾವುದು ಎಂದರು.ಅಭ್ಯರ್ಥಿ ಶಂಭುಲಿಂಗಪ್ಪ, ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಅಜ್ಜಳ್ಳಿ ರವಿ ಇದ್ದರು.ಪದಾಧಿಕಾರಿಗಳ ಆಯ್ಕೆ: ಕೆಜೆಪಿ ಕುಶಾಲನಗರ ಯುವ ಘಟಕ ಹಾಗೂ ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳನ್ನು ಪಟ್ಟಣದಲ್ಲಿ ಸೋಮವಾರ ಆಯ್ಕೆ ಮಾಡಲಾಯಿತು. ಎಂ. ಮಣಿಕಂಠ (ಯುವ ಘಟಕದ ಅಧ್ಯಕ್ಷ), ಸುನಿಲ್ (ಪ್ರಧಾನ ಕಾರ್ಯದರ್ಶಿ), ಮಡಿಕೇರಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಶಾಂತಿ ಪೊನ್ನಪ್ಪ (ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ), ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸದಸ್ಯೆ ಲಾವಣ್ಯ ಮಹೇಶ್ (ಸೋಮವಾರಪೇಟೆ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ).

ಪ್ರತಿಕ್ರಿಯಿಸಿ (+)