ಶಂಭುಲಿಂಗೇಶ್ವರ ಸ್ಮರಣೆ: ಪಾದಯಾತ್ರೆ

7

ಶಂಭುಲಿಂಗೇಶ್ವರ ಸ್ಮರಣೆ: ಪಾದಯಾತ್ರೆ

Published:
Updated:

ಬೀದರ್: ತಾಲ್ಲೂಕಿನ ರೇಕುಳಗಿ ಕ್ಷೇತ್ರದ ಶಂಭುಲಿಂಗೇಶ್ವರ ಹಾಗು ಶಿವಶರಣೆ ಬಸಮ್ಮ ತಾಯಿ ಅವರ 71 ನೇ ಪುಣ್ಯಸ್ಮರಣೆ ನಿಮಿತ್ತ ಗುರುವಾರ ಔರಾದ್ ಸಿರ್ಸಿ ಗ್ರಾಮದ ಹನುಮಾನ ಮಂದಿರದಲ್ಲಿ ನಡೆದ ಪಾದಯಾತ್ರೆಯನ್ನು ದೇಗುಲದ  ಪ್ರಮುಖರಾದ ಎನ್.ಬಿ.ರೆಡ್ಡಿ ಚಾಲನೆ ನೀಡಿದರು.ಪಾದಯಾತ್ರೆ ಔರಾದ್‌ ಸಿರ್ಸಿ ಗ್ರಾಮದಿಂದ ಭೈರನಹಳ್ಳಿ, ಬಗದಲ್, ಮೀನಕೇರಿ ಕ್ರಾಸ್, ಮನ್ನಾಏಖೇಳ್ಳಿ, ಬಂಬುಳಗಿಯಿಂದ ರೇಕುಳಗಿ ಸುಕ್ಷೇತ್ರದವರೆಗೆ ನಡೆಯಿತು.ಬಸವ ಭಕ್ತರು ಪಾಲ್ಗೊಂಡಿದ್ದರು. ಕಾಂಗ್ರೆಸ್ ಮುಖಂಡ ಬಿ.ನಾರಾಯಣರಾವ, ಪಶ್ಚಿಮ ಬಂಗಾಳ ಪ್ರದೇಶದ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸುಮತ್ರಾ ರೈ, ಬಸವರಾಜ ಹೇಡೆ, ಹಾವಶೆಟ್ಟಿ ಪಾಟೀಲ, ಅಶೋಕ ಪಾಟೀಲ ಸಿರ್ಸಿ,ಕುಶಾಲರಾವ ಯಾಬಾ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry