ಶುಕ್ರವಾರ, ಮಾರ್ಚ್ 5, 2021
21 °C

ಶಕ್ತಿಮದ್ದಿನೊಂದಿಗೆ ‘ಮರೆಯಲಾರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಕ್ತಿಮದ್ದಿನೊಂದಿಗೆ ‘ಮರೆಯಲಾರೆ’

‘ಮರೆಯಲಾರೆ’ 2010ರಲ್ಲಿ ಚಾಲನೆ ಸಿಕ್ಕ ಚಿತ್ರ. ಕಾರಣಾಂತರಗಳಿಂದ ಸಿನಿಮಾ ನಿರ್ಮಾಣ ನಿಂತುಹೋಗಿತ್ತು. ಆದರೆ ನಂತರ ‘ಕ್ರೌಡ್ ಫಂಡ್’ ಮಾದರಿಯಲ್ಲಿ ಜನರಿಂದ ಹಣ ಸಂಗ್ರಹಿಸಿ ‘ಮರೆಯಲಾರೆ’ಯನ್ನು ಪೂರ್ಣಗೊಳಿಸಿದ್ದಾರೆ ನಿರ್ದೇಶಕ ಶರತ್‌ ಖಾದ್ರಿ.ಹಳೆಯದ್ದನ್ನೆಲ್ಲ ಮರೆತು ಹೊಸ ಹುರುಪಿನೊಂದಿಗೆ ಮಾಧ್ಯಮಗಳ ಎದುರು ಕುಳಿತಿತ್ತು ಚಿತ್ರತಂಡ. ಇದೇ ಸಂದರ್ಭದಲ್ಲಿ ಸಿನಿಮಾದ ಮೂರು ಹಾಡುಗಳನ್ನು ಪ್ರದರ್ಶಿಸಿ, ಗೀತೆಗಳ ಧ್ವನಿಮುದ್ರಿಕೆ ಸಹ ಬಿಡುಗಡೆ ಮಾಡಲಾಯಿತು.‘ಇದು ನನ್ನ ಕನಸಿನ ಯೋಜನೆ. ಹಾಡು ಕೇಳಿದಾಗಲೆಲ್ಲ ಸಿನಿಮಾ ಮಾಡಲೇಬೇಕು ಅನಿಸುತ್ತಿತ್ತು. ಅರ್ಜುನ್‌ ಜನ್ಯ ಬೆಂಬಲ ನೀಡುವೆ ಎಂದಾಗ ಆನೆ ಬಲ ಬಂದಿತು. ಹಳೆ ಕಥೆಯನ್ನು ಬದಲಿಸಿ ಹೊಸ ರೀತಿಯಲ್ಲಿ ರೂಪಿಸಲಾಗಿದೆ’ ಎಂದರು ಶರತ್‌ ಖಾದ್ರಿ. ಅಂದಹಾಗೆ, ನಿರ್ದೇಶಕರು ಕೂಡ ಚಿತ್ರದಲ್ಲಿ ನಟಿಸಿದ್ದು– ಅವರು, ಮಂಗಳಮುಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಬೆಂಗಳೂರು, ಚಿಕ್ಕಮಗಳೂರು, ಗೊರೂರು, ಮಧ್ಯಪ್ರದೇಶದ ಸುಂದರ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಕಿರುತೆರೆಯ ನಟ ತಾಂಡವ್ ಚಿತ್ರದ ನಾಯಕ. ‘ಜಾಹೀರಾತು ನಿರ್ದೇಶಕನಾಗಿ ನಟಿಸಿದ್ದೇನೆ. ಪ್ರೀತಿಯನ್ನು ಹೀಗೂ ತೋರಿಸಬಹುದು ಎಂಬುದನ್ನು ಚೆನ್ನಾಗಿ ನಿರೂಪಿಸಿದ್ದಾರೆ ನಿರ್ದೇಶಕರು’ ಎಂದು ಸಿನಿಮಾಕ್ಕೆ ಜಿಗಿದ ಸಂತೋಷವನ್ನು ತಾಂಡವ್ ಹಂಚಿಕೊಂಡರು.ನಾಯಕಿ ಪವಿತ್ರಾ ಬೆಳ್ಳಿಯಪ್ಪ ಮೂರು ಆಯಾಮದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಯೋಗೀಶ್ ರಚಿಸಿರುವ ನಾಲ್ಕು ಗೀತೆಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಕಿರಣ್‌ ಕುಮಾರ್ ಮೊದಲ ಬಾರಿಗೆ ‘ಮರೆಯಲಾರೆ’ ಮೂಲಕ ಸ್ವತಂತ್ರ ಛಾಯಾಗ್ರಹಕರಾಗಿದ್ದಾರೆ. ‘ಮರೆಯಲಾರೆ’ ಚಿತ್ರ ಶೀಘ್ರ ತೆರೆಗೆ ಬರಲಿದೆಯಂತೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.