ಬುಧವಾರ, ಅಕ್ಟೋಬರ್ 23, 2019
25 °C

ಶಕ್ತಿ ಪ್ರದರ್ಶನ

Published:
Updated:
ಶಕ್ತಿ ಪ್ರದರ್ಶನ

ರಾಮಾಚಾರಿ ಸಿನಿಮಾ ನಾಯಕಿ ಮಾಲಾಶ್ರೀ ಅವರ ಸೌಂದರ್ಯ ಕಂಡು ಸಂಗೀತ ನಿರ್ದೇಶಕ ಹಂಸಲೇಖ ಬೆರಗಾಗಿ `ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು~ ಎಂದು ಹಾಡು ಕಟ್ಟಿದರು.

 

ಈ ಗೀತೆಯಲ್ಲಿ ಅವರ ಚೆಲುವು ಎಳೆಎಳೆಯಾಗಿ ಬಿಚ್ಚಿಕೊಂಡಿದೆ. ಮೊಲ್ಲೆ ಮೊಗ್ಗಿನಂತೆ ಚಿತ್ರರಂಗ ಪ್ರವೇಶಿಸಿದ್ದ ಮಾಲಾಶ್ರೀ ಆನಂತರದಲ್ಲಿ ಆ್ಯಕ್ಷನ್ ಸ್ಟಾರ್ ಆಗಿ ಮಿಂಚಿದರು. ಬೆಳ್ಳಿತೆರೆಯ ಮೇಲೆ ಮಾಲಾಶ್ರೀ ಖಾಕಿ ಬಟ್ಟೆ ತೊಟ್ಟು ಖಳರನ್ನು ಚೆಂಡಾಡುವ ಪರಿಯನ್ನು ಎಲ್ಲರೂ ಒಪ್ಪಿ ಅಪ್ಪಿಕೊಂಡರು. ಮಾಲಾಶ್ರೀ ಈಗ ಮತ್ತೆ ತೆರೆಯ ಮೇಲೆ ತಮ್ಮ `ಶಕ್ತಿ~ (ಹೊಸ ಚಿತ್ರ) ತೋರಿಸಲು ಸಜ್ಜಾಗಿದ್ದಾರೆ.  ಮಾಲಾಶ್ರೀ ತಮ್ಮ ಚಿತ್ರ `ಶಕ್ತಿ~ ಕುರಿತು ಬಿಗ್ 92.7 ಎಫ್‌ಎಂನಲ್ಲಿ ಆರ್‌ಜೆ ಶ್ರುತಿಯೊಂದಿಗೆ ಶುಕ್ರವಾರ ಸಂಭಾಷಣೆ ನಡೆಸಲಿದ್ದಾರೆ.

92.7 ಬಿಗ್ ಎಫ್‌ಎಂನ `ಎದ್ದೇಳು ಬೆಂಗಳೂರು~ ಕಾರ್ಯಕ್ರಮದಲ್ಲಿ ಮಾಲಾಶ್ರೀ ನಗರದಲ್ಲಿರುವ ನಾಗರಿಕ ಸಮಸ್ಯೆಗಳ ಕುರಿತು ಮುಕ್ತವಾಗಿ ಮಾತನಾಡಲಿದ್ದಾರೆ. ನಗರದ ಕೆಟ್ಟ ರಸ್ತೆಗಳೇ ದೊಡ್ಡ ಸಮಸ್ಯೆಗಳು ಎನ್ನುವುದು ಅವರ ಅನಿಸಿಕೆ. ಇದರಿಂದ ಅಪಘಾತ ಹಾಗೂ ಇನ್ನಿತರ ಸಮಸ್ಯೆಗಳು ಉದ್ಭವವಾಗುತ್ತಿವೆ ಎಂಬುದು ಮಾಲಾಶ್ರೀ ಅಭಿಪ್ರಾಯ. 

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)