ಶಕ್ತಿ ಮಿಲ್‌ನಲ್ಲಿ ಮತ್ತೊಂದು ಅತ್ಯಾಚಾರ

7

ಶಕ್ತಿ ಮಿಲ್‌ನಲ್ಲಿ ಮತ್ತೊಂದು ಅತ್ಯಾಚಾರ

Published:
Updated:

ಮುಂಬೈ (ಪಿಟಿಐ): ಇತ್ತೀಚೆಗೆ ಮುಂಬೈನಲ್ಲಿ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಲ್ಲಿ ಕೆಲವರು ಈ ಹಿಂದೆ ತಮ್ಮ ಮೇಲೂ ಅತ್ಯಾಚಾರ ಮಾಡಿದ್ದರು ಎಂದು 19 ವರ್ಷದ ಯುವತಿಯೊಬ್ಬರು ಬಾಂಡುಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಜುಲೈ 13ರಂದು ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಯುವತಿ ಹೇಳಿದ್ದಾಗಿ ಡಿಸಿಪಿ ವಿನಾಯಕ್ ದೇಶ್‌ಮುಖ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.`ಘಟನೆ ನಡೆದ ದಿನ ಯುವತಿ ಮಹಾಲಕ್ಷ್ಮಿ ಪ್ರದೇಶಕ್ಕೆ ಹೋಗಿದ್ದರು. ಆಕೆಯ ಜತೆಗೆ ಸ್ನೇಹಿತ ಕೂಡ ಇದ್ದ. ಶಕ್ತಿ ಮಿಲ್ ಪ್ರದೇಶದಲ್ಲಿಯೇ ಈಕೆಯ ಮೇಲೆ ಅತ್ಯಾಚಾರ ನಡೆದಿದೆ. ಈ ಸಂದರ್ಭದಲ್ಲಿ ಸ್ನೇಹಿತನನ್ನು ಕಟ್ಟಿಹಾಕಲಾಗಿತ್ತು' ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣವನ್ನು ಎನ್.ಎಂ.ಜೋಷಿ ಮಾರ್ಗ್ ಠಾಣೆಗೆ ವರ್ಗಾಯಿಸಲಾಗಿದೆ.`ಆರೋಪಿಗಳ ಸುಳಿವಿಗೆ ಹಲವರನ್ನು ಪ್ರಶ್ನೆಗೊಳಪಡಿಸಲಾಗಿದ್ದು, ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ' ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry