ಶತಕದತ್ತ ರಾಹುಲ್ ಹೆಜ್ಜೆ

7

ಶತಕದತ್ತ ರಾಹುಲ್ ಹೆಜ್ಜೆ

Published:
Updated:

ಬೆಂಗಳೂರು: ಸಿ.ಕೆ. ನಾಯ್ಡು ಟ್ರೋಫಿ  (25 ವರ್ಷದೊಳಗಿನವರು) ಎಲೈಟ್ `ಎ~ ಗುಂಪಿನ ಗುಜರಾತ್ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ  ಕರ್ನಾಟಕದ ಕೆ.ಎಲ್. ರಾಹುಲ್ (ಬ್ಯಾಟಿಂಗ್ 94, 164ಎಸೆತ, 11ಬೌಂಡರಿ, 1 ಸಿಕ್ಸರ್) ಶತಕದತ್ತ ಹೆಜ್ಜೆ ಹಾಕಿದ್ದಾರೆ. ಈ ಪರಿಣಾಮ ಆತಿಥೇಯ ತಂಡ ಮೊದಲ ದಿನದಾಟದ ಅಂತ್ಯಕ್ಕೆ 51.5 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 190 ರನ್ ಕಲೆ ಹಾಕಿದೆ.ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗಣೇಶ್ ಸತೀಶ್ ನೇತೃತ್ವದ ಕರ್ನಾಟಕ ತಂಡ ಬ್ಯಾಟಿಂಗ್ ಆರಿಸಿಕೊಂಡಿತು. ನಾಲ್ಕು ದಿನಗಳ ಈ ಪಂದ್ಯಕ್ಕೆ ಶುಕ್ರವಾರ ಮಳೆ ಅಡ್ಡಿಯಾದ ಕಾರಣ ದಿನದಾಟಕ್ಕೆ ಮಧ್ಯಾಹ್ನವೇ ತೆರೆ ಬಿದ್ದಿತು.ಕೇವಲ ಒಂದು ರನ್ ಗಳಿಸಿದ್ದಾಗ ಆರಂಭಿಕ ಬ್ಯಾಟ್ಸ್‌ಮನ್ ಕೆ.ಬಿ. ಪವನ್ ಅವರು ಕುಶಾಲ್ ಪಟೇಲ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಈ ವೇಳೆ ರಾಹುಲ್‌ಗೆ ನಾಯಕ ಗಣೇಶ್ ಜೊತೆಯಾದರು.ಆರಂಭಿಕ ಆಘಾತವನ್ನು ಮೆಟ್ಟಿ ನಿಂತ ರಾಹುಲ್ 223 ನಿಮಿಷ ಕ್ರೀಸ್‌ನಲ್ಲಿದ್ದು ತಂಡಕ್ಕೆ ಚೇತರಿಕೆ ನೀಡಿದರು. ಅರ್ಧ ಶತಕ ಗಳಿಸಿದ ಕುನಾಲ್ ಕಪೂರ್ (ಬ್ಯಾಟಿಂಗ್ 58, 97ಎಸೆತ, 9ಬೌಂಡರಿ) ಅವರ ಬ್ಯಾಟಿಂಗ್ ಕೂಡ ಆತಿಥೇಯರ ಚೇತರಿಕೆಗೆ ಕಾರಣವಾಯಿತು.ಸಂಕ್ಷಿಪ್ತ ಸ್ಕೋರು: ಕರ್ನಾಟಕ 51.5 ಓವರ್‌ಗಳಲ್ಲಿ 2 ವಿಕೆಟ್‌ಗೆ 190 (ರಾಹುಲ್ ಕೆ.ಬಿ. ಬ್ಯಾಟಿಂಗ್ 94, ಗಣೇಶ್ ಸತೀಶ್ 21, ಕುನಾಲ್ ಕಪೂರ್ ಬ್ಯಾಟಿಂಗ್ 58; ಕುಶಾಂಗ್ ಪಟೇಲ್ 39ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry