ಶತಕ ತಪ್ಪಿಸಿಕೊಂಡ ಟೈಬು

7

ಶತಕ ತಪ್ಪಿಸಿಕೊಂಡ ಟೈಬು

Published:
Updated:

ನಾಗಪುರ (ಪಿಟಿಐ): ತಟೆಂಡ ಟೈಬು ಕೇವಲ ಎರಡು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಆದರೆ ಜಿಂಬಾಬ್ವೆ ತಂಡಕ್ಕೆ 175 ರನ್‌ಗಳ ಗೆಲುವು ದೊರಕಿಸಿಕೊಡಲು ಅವರ ಇನಿಂಗ್ಸ್ ಕಾರಣವಾಯಿತು. ಜಾಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಕ್ರಿಕೆಟ್ ಶಿಶು’ಗಳ ಹೋರಾಟದಲ್ಲಿ ಗೆದ್ದು ಬೀಗಿದ್ದು ಜಿಂಬಾಬ್ವೆ. ಆದರೆ ವಿಶ್ವಕಪ್‌ನ ‘ಎ’ ಗುಂಪಿನ ಈ ಪಂದ್ಯದಲ್ಲಿ ಜಿಂಬಾಬ್ವೆಯ 298 ರನ್‌ಗಳ ಮೊತ್ತದ ಎದುರು ಕೆನಡಾ 42.1 ಓವರ್‌ಗಳಲ್ಲಿ ಕೇವಲ 123 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.ಈ ಪಂದ್ಯದ ಗೆಲುವಿನ ಸ್ಟಾರ್ ಟೈಬು. ತಂಡ ಕೇವಲ 7 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಬಂದ ಅವರು ಅದ್ಭುತ ಇನಿಂಗ್ಸ್ ಕಟ್ಟಿದರು. ಆದರೆ ಕೇವಲ ಎರಡು ರನ್‌ಗಳಿಂದ ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ಗಳಿಸುವ ಅವಕಾಶ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. ಅವರು ಕೇವಲ 45 ಎಸೆತಗಳಲ್ಲಿ ಅರ್ಧ ಶತಕದ ಗೆರೆ ದಾಟಿದ್ದರು. 99 ಎಸೆತಗಳನ್ನು ಎದುರಿಸಿದ ಮಾಜಿ ನಾಯಕ ಟೈಬು 9 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು.ಜೊತೆಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ ಕ್ರೇಗ್ ಎರ್ವಿನ್ ಜೊತೆಗೂಡಿ 181 ರನ್ ಸೇರಿಸಿದರು. ಅದಕ್ಕೆ ತೆಗೆದುಕೊಂಡ ಎಸೆತ ಕೇವಲ 167. ಇದು ತಂಡ ದೊಡ್ಡ ಮೊತ್ತ ಕೂಡಿ ಹಾಕಲು ಅಡಿಪಾಯ ಹಾಕಿಕೊಟ್ಟಿತು. ಆದರೆ 188 ರನ್‌ಗೆ ಎರಡು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಜಿಂಬಾಬ್ವೆ ಒಮ್ಮೆಲೆ ಕುಸಿತದ ಹಾದಿ ಹಿಡಿಯಿತು. 240 ರನ್ ಆಗುವಷ್ಟರಲ್ಲಿ ಏಳು ವಿಕೆಟ್ ಪತನವಾಗಿದ್ದವು. ಅಂದರೆ 52 ರನ್‌ಗಳ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡಿತು.ಈ ಸಂದರ್ಭದಲ್ಲಿ ಪ್ರಾಸ್ಪರ್ ಉತ್ಸೆಯಾ (22; 29 ಎಸೆತ) ಹಾಗೂ ಗ್ರೇಮ್ ಕ್ರೆಮರ್ (26; 23 ಎಸೆತ) ಅವರು ಎಂಟನೇ ವಿಕೆಟ್‌ಗೆ 41 ರನ್ ಸೇರಿಸಿದರು. ಪರಿಣಾಮ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298 ರನ್ ಪೇರಿಸಲು ಸಾಧ್ಯವಾಯಿತು. ಈಗ ಕೆನಡಾ ತಂಡದಲ್ಲಿ ಆಡುತ್ತಿರುವ ತಮಿಳುನಾಡು ಮಾಜಿ ಸ್ಪಿನ್ನರ್ ಬಾಲಾಜಿ ರಾವ್ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದರು. ಆದರೆ ಅವರಿಗೆ ಉಳಿದ ಬೌಲರ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ.ರಣಜಿ ಟ್ರೋಫಿಯಲ್ಲಿ ಆಡಿದ್ದ ಅನುಭವ ಇಲ್ಲಿ ಬಾಲಾಜಿ ಅವರ ನೆರವಿಗೆ ಬಂತು. ಆದರೆ ಜಿಂಬಾಬ್ವೆ ತಂಡದ ಸ್ಪಿನ್ನರ್‌ಗಳ ಎದುರು ಕೆನಡಾದ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಎಡಗೈ ಸ್ಪಿನ್ನರ್ ರೇ ಪ್ರೈಸ್ ಕೇವಲ 16 ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದರು. ಲೆಗ್ ಸ್ಪಿನ್ನರ್ ಗ್ರೇಮ್ ಕ್ರೆಮರ್ 31 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. 40 ವರ್ಷ ವಯಸ್ಸಿನ ಜಾನ್ ಡೇವಿಸನ್ ಜೊತೆಗೂಡಿ ಇನಿಂಗ್ಸ್ ಆರಂಭಿಸಿದ 16ರ ಹರೆಯದ ನಿತೀಶ್ ಕುಮಾರ್ ಗಳಿಸಿದ್ದು ಒಂದು ರನ್.ಅವರು ಈ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿರುವ ಅತಿ ಕಿರಿಯ ಆಟಗಾರ. ಹಾಗೇ, ಡೇವಿಸನ್ ಅತಿ ಹಿರಿಯ ಆಟಗಾರ. ಆದರೆ ಅವರು ಶೂನ್ಯ ಸಂಪಾದನೆ ಮಾಡಿದರು! ನಾಯಕ ಆಶೀಶ್ ಬಾಗೈ ತಾವೆದುರಿಸಿದ ಮೊದಲ ಎಸೆತವನ್ನು ಸ್ವೀಪ್ ಮಾಡಲು ಹೋಗಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಜಿಂಬಾಬ್ವೆ ಎದುರೂ ಕೆನಡಾ ಈ ರೀತಿ ಹೀನಾಯ ಸೋಲು ಕಂಡಿದ್ದು ಐಸಿಸಿಯನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಏಕೆಂದರೆ ಮುಂದಿನ ವಿಶ್ವಕಪ್‌ಗೆ ದುರ್ಬಲ ತಂಡಗಳಿಗೆ ಸ್ಥಾನ ನೀಡುವ ಸಾಧ್ಯತೆ ಕಡಿಮೆ ಎಂದು ಈಗಾಗಲೇ ಐಸಿಸಿ ತಿಳಿಸಿದೆ. ಕೇವಲ 10 ತಂಡಗಳಿಗೆ ಮಾತ್ರ ಪ್ರವೇಶ ನೀಡುವ ನಿರೀಕ್ಷೆ ಇದೆ.ಸ್ಕೋರು ವಿವರ

ಜಿಂಬಾಬ್ವೆ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298

ಬ್ರೆಂಡನ್ ಟೇಲರ್ ಎಲ್‌ಬಿಡಬ್ಲ್ಯು ಬಿ ಖುರ್ರಮ್ ಕೋಹಾನ್ 00

ಚಾರ್ಲ್ಸ್ ಕೊವೆಂಟ್ರಿ ಎಲ್‌ಬಿಡಬ್ಲ್ಯು ಬಿ ಬೈದ್ವಾನ್  04

ತಟೆಂಡ ಟೈಬು ಸಿ ಜಾನ್ ಡೇವಿಜನ್ ಬಿ ಬಾಲಾಜಿ ರಾವ್  98

ಕ್ರೇಗ್ ಎರ್ವಿನ್ ಸಿ ಬಾಗೈ ಬಿ ಬಾಲಾಜಿ ರಾವ್  85

ಎಲ್ಟಾನ್ ಚಿಗುಂಬುರಾ ಸಿ ಬಾಗೈ ಬಿ ರಿಜ್ವಾನ್ ಚೀಮಾ  05

ಸೀನ್ ವಿಲಿಯಮ್ಸ್ ಸಿ ಬಾಗೈ ಬಿ ಬಾಲಾಜಿ ರಾವ್  30

ಗ್ರೆಗ್ ಲ್ಯಾಂಬ್ ಬಿ ಬಾಲಾಜಿ ರಾವ್  11

ಪ್ರಾಸ್ಪರ್ ಉತ್ಸೆಯಾ ಸಿ ಹನ್‌ಸ್ರಾ ಬಿ ಖುರ್ರಮ್ ಕೋಹಾನ್ 22

ಗ್ರೇಮ್ ಕ್ರೆಮರ್ ಬಿ ಬೈದ್ವಾನ್  26

ರೇ ಪ್ರೈಸ್ ಔಟಾಗದೆ  10

ಕ್ರಿಸ್ ಮೊಫು ಔಟಾಗದೆ  02

ಇತರೆ: (ಲೆಗ್‌ಬೈ-2, ವೈಡ್-1, ನೋಬಾಲ್-1)  04

ವಿಕೆಟ್ ಪತನ: 1-0 (ಟೇಲರ್; 0.1); 2-7 (ಕೊವೆಂಟ್ರಿ; 3.3); 3-188 (ಎರ್ವಿನ್; 31.2); 4-193 (ಚಿಗುಂಬರಾ; 32.4); 5-201 (ಟೈಬು; 33.6); 6-219 (ಲ್ಯಾಂಬ್; 37.4); 7-240 (ವಿಲಿಯಮ್ಸ್; 41.4); 8-281 (ಉತ್ಸೆಯಾ; 47.4); 9-284 (ಕ್ರೆಮರ್; 48.2).

ಬೌಲಿಂಗ್: ಖುರ್ರಮ್ ಕೋಹಾನ್ 10-0-44-2 (ನೋಬಾಲ್-1, ವೈಡ್-1), ಹರ್ವೀರ್ ಬೈದ್ವಾನ್ 9-0-47-2, ಜಿಮ್ಮಿ ಹನ್‌ಸ್ರಾ 4-0-41-0, ರಿಜ್ವಾನ್ ಚೀಮಾ 9-0-51-1, ಬಾಲಾಜಿ ರಾವ್ 10-0-57-4, ಜಾನ್ ಡೇವಿಸನ್ 8-0-56-0

ಕೆನಡಾ 42.1 ಓವರ್‌ಗಳಲ್ಲಿ 123

ಜಾನ್ ಡೇವಿಸನ್ ಬಿ ರೇ ಪ್ರೈಸ್  00

ನಿತೀಶ್ ಕುಮಾರ್ ಸಿ ಅಂಡ್ ಬಿ ರೇ ಪ್ರೈಸ್  01

ರುವಿಂದಾ ಗುಣಶೇಖರ ಬಿ ಗ್ರೆಗ್ ಲ್ಯಾಂಬ್  24

ಆಶೀಶ್ ಬಾಗೈ ಸಿ ವಿಲಿಯಮ್ಸ್ ಬಿ ರೇ ಪ್ರೈಸ್  00

ಜಿಮ್ಮಿ ಹನ್‌ಸ್ರಾ ಸ್ಟಂಪ್ಡ್ ಟೈಬು ಬಿ ಪ್ರಾಸ್ಪರ್ ಉತ್ಸೆಯಾ  20

ರಿಜ್ವಾನ್ ಚೀಮಾ ಸಿ ಕ್ರೆಮರ್ ಬಿ ಪ್ರಾಸ್ಪರ್ ಉತ್ಸೆಯಾ  14

ಜುಬಿನ್ ಸುರ್ಕಾರಿ ಸ್ಟಂಪ್ಡ್ ಟೈಬು ಬಿ ಗ್ರೆಗ್ ಲ್ಯಾಂಬ್  26

ಟೈಸನ್ ಗಾರ್ಡನ್ ಎಲ್‌ಬಿಡಬ್ಲ್ಯು ಬಿ ಗ್ರೇಮ್ ಕ್ರೆಮರ್  07

ಖುರ್ರಾಮ್ ಕೋಹಾನ್ ಎಲ್‌ಬಿಡಬ್ಲ್ಯು ಬಿ ಗ್ರೇಮ್ ಕ್ರೆಮರ್  08

ಹರ್ವೀರ್ ಬೈದ್ವಾನ್ ಔಟಾಗದೆ  13

ಬಾಲಾಜಿ ರಾವ್ ಬಿ ಗ್ರೇಮ್ ಕ್ರೆಮರ್  01

ಇತರೆ: (ವೈಡ್-9)  09

ವಿಕೆಟ್ ಪತನ: 1-1 (ಡೇವಿಸನ್; 1.3); 2-7 (ನಿತೀಶ್; 5.3); 3-7 (ಬಾಗೈ; 5.4); 4-50 (ಹನ್‌ಸ್ರಾ; 20.3); 5-50 (ಗುಣಶೇಖರ; 21.1); 6-66 (ರಿಜ್ವಾನ್; 22.5); 7-78 (ಗಾರ್ಡನ್; 26.6); 8-97 (ಖುರ್ರಾಮ್; 34.3); 9-122 (ಸುರ್ಕಾರಿ; 41.1); 10-123 (ಬಾಲಾಜಿ; 42.1).

ಬೌಲಿಂಗ್: ಕ್ರಿಸ್ ಮೊಫು 5-1-12-0 (ವೈಡ್-1), ರೇ ಪ್ರೈಸ್ 8-4-16-3, ಪ್ರಾಸ್ಪರ್ ಉತ್ಸೆಯಾ 7-0-24-2 (ವೈಡ್-2), ಗ್ರೆಗ್ ಲ್ಯಾಂಬ್ 8-0-29-2 (ವೈಡ್-6), ಗ್ರೇಮ್ ಕ್ರೆಮರ್ 9.1-1-31-3, ಸೀನ್ ವಿಲಿಯಮ್ಸ್ 5-0-11-0ಫಲಿತಾಂಶ: ಜಿಂಬಾಬ್ವೆಗೆ 175 ರನ್ ಗೆಲುವು.

ಪಾಯಿಂಟ್: ಜಿಂಬಾಬ್ವೆ-2, ಕೆನಡಾ-0, ಪಂದ್ಯ ಶ್ರೇಷ್ಠ: ತಟೆಂಡ ಟೈಬು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry