ಗುರುವಾರ , ಆಗಸ್ಟ್ 22, 2019
21 °C

ಶನಿವಾರಸಂತೆ: ಭಾರಿ ಮಳೆ

Published:
Updated:

ಶನಿವಾರಸಂತೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆಯವರೆಗೂ ಭಾರಿ ಬಿರುಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದಿದೆ. ರಸ್ತೆಗಳ ಮೇಲೆ ಅಲ್ಲಲ್ಲಿ ಮರಗಳು ಉರುಳಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಹಲವಾರು ಮನೆಗಳ ಗೋಡೆಗಳು ಕುಸಿದಿವೆ.ಕೆಲ ಗ್ರಾಮಗಳಲ್ಲಿ ಹೊಳೆ, ಕೆರೆ, ತೋಡುಗಳಲ್ಲಿ ನೀರು ತುಂಬಿ ಹರಿದು ಬೆಳೆ ಹಾನಿ ಸಂಭವಿಸಿದೆ. ಸಮೀಪದ ಕಾಜೂರು ಹೊಳೆ ಮೈದುಂಬಿ ಹರಿದಿದೆ. ನಾಟಿ ಮಾಡಿದ ಗದ್ದೆ, ತೋಟಗಳೆಲ್ಲ ಜಲಾವೃತಗೊಂಡಿವೆ.ಈ ವಿಭಾಗಕ್ಕೆ ವರ್ಷ ಆರಂಭದಿಂದ ಜುಲೈ 31ರವರೆಗೆ ಒಟ್ಟು 1,654 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ಒಟ್ಟು 739.10 ಮಿ.ಮೀ. ಮಳೆಯಾಗಿದೆ.

Post Comments (+)