ಶಬರಿಮಲೆ: ದಕ್ಷಿಣ ರಾಜ್ಯಗಳ ಸಚಿವರ ಸಭೆ

7

ಶಬರಿಮಲೆ: ದಕ್ಷಿಣ ರಾಜ್ಯಗಳ ಸಚಿವರ ಸಭೆ

Published:
Updated:

ತಿರುವನಂತಪುರ (ಪಿಟಿಐ):  ನವೆಂಬರ್ ಮಧ್ಯದಲ್ಲಿ ಆರಂಭವಾಗುವ ಎರಡು ತಿಂಗಳ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಯಾತ್ರೆಯ ಸಿದ್ದತೆಗಳ ಬಗ್ಗೆ ಚರ್ಚೆ ನಡೆಸಲು ದಕ್ಷಿಣ ರಾಜ್ಯಗಳ ಮುಜರಾಯಿ ಇಲಾಖೆ ಸಚಿವರುಗಳ ಸಭೆ  ಕೇರಳದ ಕೊಟ್ಟಾಯಂನಲ್ಲಿ ಇದೇ ತಿಂಗಳ 23 ರಂದು ನಡೆಯಲಿದೆ.ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಈ ಸಭೆಯನ್ನು ಕರೆದಿದ್ದು ಸಂಬಂಧಪಟ್ಟ ಸಚಿವರಿಗೆ ಈಗಾಗಲೇ ಮಾಡಲಾಗಿರುವ ಸಿದ್ದತೆಗಳ ಬಗ್ಗೆ ತಿಳಿಸಿ ಇದನ್ನು ಇನ್ನೂ ಉತ್ತಮಗೊಳಿಸುವಲ್ಲಿ ಅವರ ಸಲಹೆ ಕೇಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಆಂಧ್ರ ಪ್ರದೇಶ, ತಮಿಳು ನಾಡು, ಕರ್ನಾಟಕ ಮತ್ತು ಪುದುಚೇರಿಯಿಂದ ಸುಮಾರು 3 ಕೋಟಿಗೂ ಹೆಚ್ಚು ಭಕ್ತರು ಪ್ರತಿ ವರ್ಷ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕಳೆದ ವರ್ಷ ಶಬರಿಮಲೆಯ ಬಳಿಯ ಪುಲ್‌ಮೇಡುನಲ್ಲಿ ಕಾಲ್ತುಳಿತದಿಂದ 102 ಮಂದಿ ಮೃತಪಟ್ಟಿದ್ದು ಈ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.ಸಚಿವರು ಮತ್ತು ಅಧಿಕಾರಿಗಳು ಜನಜಂಗುಳಿ, ವಾಹನ ನಿಲುಗಡೆ, ಪರಿಸರ ಮಾಲಿನ್ಯ ತಡೆಯುವಿಕೆ, ಯಾತ್ರಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಬಗ್ಗೆ ಮತ್ತು ವೈದ್ಯಕೀಯ ನೆರವು ಈ ಕುರಿತಂತೆ ಚರ್ಚಿಸಲಿದ್ದಾರೆ ಎಂದು ದೇವಸ್ಥಾನ ಆಡಳಿತ ನಡೆಸುವ ತಿರುವಾಂಕೂರು ದೇವಸ್ಥಾನ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಪೊಲೀಸ್, ವಿಶೇಷ ಕಮಾಂಡೋಗಳು, ಪ್ರಕೃತಿ ವಿಕೋಪ ನಿರ್ವಹಣಾ ಸದಸ್ಯರು, ಮೀಸಲು ಪಡೆಗಳನ್ನು ನಿಯೋಜಿಸುವುದರೊಂದಿಗೆ `ಮಂಡಲ~ ಮತ್ತು `ಮಕರವಿಳಕ್ಕು~  ಸಮಯದಲ್ಲಿ ರಾಜ್ಯ ಸರ್ಕಾರ ಪಕ್ಕದ ರಾಜ್ಯಗಳ ಸೇವೆಯನ್ನೂ ಪಡೆಯಲಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry