ಶಬ್ದಗಳ ಕ್ರೋಡೀಕರಣದಿಂದ ಭಾಷೆ ಬೆಳವಣಿಗೆ

7

ಶಬ್ದಗಳ ಕ್ರೋಡೀಕರಣದಿಂದ ಭಾಷೆ ಬೆಳವಣಿಗೆ

Published:
Updated:

ಬೆಂಗಳೂರು: `ಭಾಷಾ ಸಮೀಕ್ಷೆಯಾಗದೇ ನಿಘಂಟು ಅಸಮರ್ಪಕವಾಗಿದೆ. ಸರ್ಕಾರ ರಾಜ್ಯವ್ಯಾಪಿ ಭಾಷಾ ಸಮೀಕ್ಷೆ ನಡೆಸಿ, ಪದಗಳನ್ನು ನಿಘಂಟಿಗೆ ಸೇರಿಸುವ ಕೆಲಸ ಮಾಡಬೇಕು~ ಎಂದು ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಹೇಳಿದರು.ರಾಜಾಜಿನಗರದ ಆಕೃತಿ ಪುಸ್ತಕ ಮಳಿಗೆಯು ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಸ್ಥಳೀಯವಾಗಿ ಬಳಸಲ್ಪಡುವ ಪದಗಳ ಸಂಕಲನ ಮಾಡದೇ ಇದ್ದರೆ, ಎಷ್ಟೋ ಪದಗಳು ಅಳಿಸಿ ಹೋಗುತ್ತವೆ. ಅವುಗಳೆಲ್ಲವನ್ನೂ ಸೇರಿಸಿದಾಗ ಮಾತ್ರ ನಿಘಂಟು ಪೂರ್ಣವಾಗಿ ಅರ್ಥಪೂರ್ಣವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರವನ್ನು ಒತ್ತಾಯಿಸಬೇಕು~ ಎಂದು ಅವರು ಸಲಹೆ ಮಾಡಿದರು.`ಶಬ್ದಗಳ ಕ್ರೋಡೀಕರಣದಿಂದ ಕನ್ನಡ ಭಾಷೆ ಬೆಳವಣಿಗೆ ಹೊಂದುತ್ತದೆ. ಈಗ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿರುವ ನಿಘಂಟು ಕಚೇರಿಗೆ ಬೀಗ ಹಾಕಿ ಭಾಷೆ ಬೆಳವಣಿಗೆಗೆ ಅಡ್ಡಿಪಡಿಸಲಾಗಿದೆ. ನಿಘಂಟು ಬಗ್ಗೆ ಗೊತ್ತಿಲ್ಲದವರು ಆ ಸ್ಥಾನಕ್ಕೆ ಬಂದರೆ ಹೀಗಾಗುತ್ತದೆ~ ಎಂದು ಅವರು ಹೇಳಿದರು.`ನಿಘಂಟು ರಚನೆ ಮಾಡುವುದಕ್ಕೆ ಸರ್ಕಾರವು ಸಂಪಾದಕರ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಆದರೆ, ಒಬ್ಬರೂ ಅರ್ಜಿ ಹಾಕಿರಲಿಲ್ಲ. ನನ್ನನ್ನು ಅಲ್ಲಿಗೆ ಶಿಫಾರಸು ಮಾಡಿತ್ತು. ಸಂತೋಷದಿಂದ ಕಾರ್ಯ ನಿರ್ವಹಿಸಿದ್ದೆ. ನಿಘಂಟಿನ 8 ನೇ ಸಂಪುಟವನ್ನು ಬಿಡುಗಡೆ ಮಾಡುವಾಗ ಯಾವುದೇ ಪ್ರಚಾರ ಇಲ್ಲದೇ, ಒಂದು ಮೂಲೆಯಲ್ಲಿ ಬಿಡುಗಡೆ ಮಾಡಿ ಕೈ ತೊಳೆದುಕೊಳ್ಳಲಾಯಿತು~ ಎಂದು ವಿಷಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry