ಶಮಿಕಾ ರಂಗಪ್ರವೇಶ

7

ಶಮಿಕಾ ರಂಗಪ್ರವೇಶ

Published:
Updated:

ಸುಪರ್ಣಾ ವೆಂಕಟೇಶ್ ಶಿಷ್ಯೆ ಶಮಿಕಾ ಬಿ.ಅವರ ಭರತನಾಟ್ಯ ರಂಗಪ್ರವೇಶ ಶುಕ್ರವಾರ (ಫೆ.24) ಎಡಿಎ ರಂಗಮಂದಿರದಲ್ಲಿ ನಡೆಯಲಿದೆ.ಭರತನಾಟ್ಯದ ಜ್ಯೂನಿಯರ್ ಹಾಗೂ ಸೀನಿಯರ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಶಮಿಕಾ ಹೊರದೇಶಗಳಲ್ಲೂ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶೃಂಗಾರಮ್ಮ ಹಾಗೂ  ಕಥಕ್ ನೃತ್ಯವನ್ನು ಮೈಸೂರು ಬಿ.ನಾಗರಾಜ್ ಅವರ ಬಳಿ ಅಭ್ಯಸಿಸುತ್ತಿದ್ದಾರೆ.ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಪದವಿ ಪಡೆದಿರುವ ಈಕೆಯ ಸಾಧನೆಯ ಹಿಂದೆ ತಾಯಿ ಸರಳಾ ಹಾಗೂ ಬಿ.ಶರತ್ ಕುಮಾರ್ ಅವರ ಪ್ರೋತ್ಸಾಹವೂ ಇದೆ.ಸುಪರ್ಣಾ ವೆಂಕಟೇಶ್ (ನಟುವಾಂಗ), ಬಾಲಸುಬ್ರಹ್ಮಣ್ಯ ಶರ್ಮ (ಗಾಯನ), ಜಿ.ಗುರುಮೂರ್ತಿ (ಮೃದಂಗ), ಸಿ ಮಧುಸೂದನ್(ವಯಲಿನ್), ಎಚ್.ಎಸ್. ವೇಣುಗೋಪಾಲ್ (ಕೊಳಲು) ಡಿ.ಎಸ್.ಪ್ರಸನ್ನ (ಮೋರ್ಚಿಂಗ್)ನಲ್ಲಿ ಸಹಕರಿಸುವರು.

ಅತಿಥಿಗಳು: ಗುರೂಜಿ ಲಕ್ಷ್ಮಿ ಶ್ರೀನಿವಾಸ್, ಲಕ್ಷ್ಮಿ ಗೋಪಾಲಸ್ವಾಮಿ.

ಸ್ಥಳ: ಎಡಿಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ಜೆ.ಸಿ.ರಸ್ತೆ. ಸಂಜೆ 6.15.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry