ಶರಣರ ಚಿಂತನೆಗೆ ಅಪಚಾರ

7

ಶರಣರ ಚಿಂತನೆಗೆ ಅಪಚಾರ

Published:
Updated:

ವಚನ ಸಾಹಿತ್ಯ, ಉಪನಿಷತ್ತು ಮತ್ತು ದಾರ್ಶನಿಕರೆಲ್ಲರೂ ದೇವರು ನಿರಾಕಾರನೆಂದೂ, ಮಾನವೀಯತೆಯೇ ದೈವವೆಂದು ಸಾರಿದರು. ಆದರೆ ರಾಜ್ಯದ ಕೆಲವು ಮಠಗಳಲ್ಲಿ ಕೋಟಿ ಲಿಂಗಗಳು ಮತ್ತು ಬಸವಣ್ಣನವರ ಮೂರ್ತಿಗಳನ್ನು  ಪ್ರತಿಷ್ಠಾಪಿಸಲು ಹೊರಟಿದ್ದಾರೆ.

 

`ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ~ ಎಂದ ಬಸವಣ್ಣವರನ್ನೇ ಸ್ಥಾವರ ಮೂರ್ತಿ ರೂಪದಲ್ಲಿ ಸ್ಥಾಪಿಸುವುದು ಸರಿಯೇ? ಸರ್ಕಾರದಿಂದ ಆರ್ಥಿಕ ನೆರವು ಸಿಗುತ್ತದೆ ಎಂಬ ಕಾರಣಕ್ಕಾಗಿ ಮೂರ್ತಿ ಸ್ಥಾಪನೆಗೆ ಹೊರಟಿದ್ದಾರೆಯೇ?ಇವು  ಸ್ಥಾವರಕ್ಕೆ ಪ್ರಾಮುಖ್ಯತೆ ನೀಡಿ ಜಂಗ (ಸಮಾಜ, ಕಟ್ಟಕಡೆಯ ಮನುಷ್ಯ)ವನ್ನು ದೂರವಿಡುವ ಪ್ರಯತ್ನಗಳಲ್ಲವೇ?ಈ ಎಲ್ಲ ಪ್ರಯತ್ನಗಳು ವಚನ ಸಾಹಿತ್ಯಕ್ಕೆ ಎಸಗುವ ಅಪಚಾರವಲ್ಲವೇ?

ರಾಜ್ಯದ ಬಿಜೆಪಿ ಸರ್ಕಾರ ವೋಟುಗಳಿಗಾಗಿ ಈ ಸ್ಥಾವರಗಳ ಸ್ಥಾಪನೆಗೆ ಜನರ ತೆರಿಗೆ ಹಣವನ್ನು ನೀಡುವುದು ಬೇಡ.ಅನುತ್ಪಾದಕ ಕೆಲಸಗಳಿಗೆ ಹಣ ಪೋಲು ಮಾಡುವ ಬದಲು ಅದನ್ನು ಬಡಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ನೀಡಬಹುದಲ್ಲವೇ? ಮಠಾಧೀಶರು ಈ ಕುರಿತು ಮರು ಪರಿಶೀಲನೆ ಮಾಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry